ಈ ಬಾರಿ ರಾಜ್ಯಕ್ಕೆ ಭರ್ಜರಿ ಮಳೆ ಗ್ಯಾರಂಟಿ.. ಹುಬ್ಬಳ್ಳಿ ಸೇರಿ ರಾಜ್ಯದ ಯಾವ್ಯಾವ ಭಾಗದಲ್ಲಿ ಮಳೆ ಆಗಿದೆ ಗೊತ್ತಾ?

author-image
Bheemappa
Updated On
ಬೆಂಗಳೂರಲ್ಲಿ ಇಂದು ಸಂಜೆ ಮಳೆರಾಯನ ಅಬ್ಬರ; ಹವಾಮಾನ ತಜ್ಞರು ಹೇಳಿದ್ದೇನು?
Advertisment
  • ಯುಗಾದಿ, ಹೊಸತೊಡಕು ದಿನದಂದೇ ರಾಜ್ಯದ ಹಲವು ಕಡೆ ಮಳೆ
  • ಬೇಸಿಗೆ ರಜೆಯಲ್ಲಿರುವ ಮಕ್ಕಳು, ಯುವಕರು ಸ್ವಿಮ್ಮಿಂಗ್ ಮಾಡಿದ್ದಾರೆ
  • ಮುಂಗಾರು ಆರಂಭಕ್ಕೆ ಮುನ್ನವೇ ರಾಜ್ಯದ ಹಲವು ಕಡೆ ಮಳೆ ಆರಂಭ

ರಾಜ್ಯದಲ್ಲಿ ಸೂರ್ಯನ ಅಬ್ಬರ ಜೋರಾಗಿದೆ. ಮನೆಯಿಂದ ಹೊರಗೆ ಕಾಲಿಡೋಕೂ ಹಿಂದೇಟು ಹಾಕುವಂತ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಸೂರ್ಯನ ಬಿಸಿಲಿನಿಂದ ಹೈರಾಣಾದ ಜನರನ್ನು ತಣ್ಣಗಿಡುವಂತೆ ವರುಣ ಎಂಟ್ರಿ ಕೊಟ್ಟಿದ್ದಾನೆ. ಯುಗಾದಿ ಹಬ್ಬದಂದು ರಾಜ್ಯದಲ್ಲಿ ಕೆಲ ಕಾಲ ಜಿಟಿ ಜಿಟಿ ಸುರಿದ ಮಳೆರಾಯ ಹೊಸತೊಡಕು ದಿನದಂದೂ ಕೂಡ ತಂಪೆರದಿದ್ದಾನೆ.

publive-image

ಚಿಕ್ಕೋಡಿ.. ಹುಬ್ಬಳ್ಳಿ.. ಶಿರಸಿ.. ಗದಗ ಸೇರಿ ಹಲವೆಡೆ ವರುಣನ ಸಿಂಚನ

ಭೀಕರ ಬರಗಾಲ.. ತಾಪಮಾನ ಹೆಚ್ಚಳ.. ಸೂರ್ಯನ ಅಗ್ನಿಯ ಶಾಕಕ್ಕೆ ಭೂಮಿ ಕಾದ ಹಂಚಿನಂತಾಗಿದೆ. ರಾಜ್ಯದಲ್ಲಿ ಈ ಬಾರಿ ತೀವ್ರ ಬರಗಾಲ ಮತ್ತು ಭಾರಿ ಬಿಸಿಲು ಜನರನ್ನ ಕಂಗೆಡಿಸಿದೆ. ಆದರೆ ಮುಂಗಾರು ಆರಂಭಕ್ಕೆ ಮುನ್ನವೇ ಯುಗಾದಿ ಹಾಗೂ ಹೊಸತೊಡಕು ದಿನದಂದೂ ರಾಜ್ಯದ ಹಲವು ಕಡೆ ಮಳೆ ಆರಂಭವಾಗಿದ್ದು, ಭರ್ಜರಿ ಮುಂಗಾರಿನ ಮುನ್ಸೂಚನೆ ಕೊಟ್ಟಿದೆ.

ಚಿಕ್ಕೋಡಿ

ಬಿಸಿಲ ಹೊಡೆತಕ್ಕೆ ತತ್ತರಿಸಿರುವ ಕರುನಾಡಿನ ಮೇಲೆ ಮಳೆರಾಯ ಕರುಣೆ ತೋರಲಾರಂಭಿಸಿದ್ದಾನೆ. ಒಂದೊಂದಾಗಿ ಜಿಲ್ಲೆಗಳಿಗೆ ವಿಸಿಟ್​ ಮಾಡ್ತಿದ್ದಾನೆ. ವಿಜಯನಗರದ ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗದಲ್ಲಿ ಹಾಗೂ ಕೊಪ್ಪಳದ ಕೆಲ ಗ್ರಾಮಗಳಲ್ಲಿ ಯುಗಾದಿಯಂದು ಆಗಮಿಸಿದ್ದ ವರುಣ ಇದೀಗ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಕೆಲ ಭಾಗದಲ್ಲಿ ಸುರಿದಿದ್ದಾನೆ. ನಿಪ್ಪಾಣಿ, ಹುಕ್ಕೇರಿ, ಸಂಕೇಶ್ವರ ಭಾಗದಲ್ಲಿ ತಂಪೆರೆದಿದ್ದಾನೆ. ವರುಣ ದೇವನ ಆಗಮನದಿಂದಾಗಿ ಬಿಸಿಲಿನ ತಾಪಕ್ಕೆ ಬೇಸತ್ತಿದ್ದ ಗಡಿ ಜನತೆಯ ಮನದಲ್ಲಿ ಸಂಜೆ ಸುರಿದ ಮಳೆಯಿಂದ ಮಂದಹಾಸ ಮೂಡಿರುವುದರ ಜೊತೆಗೆ ಮಳೆಯ ತಂಪನೆ ಗಾಳಿಯಿಂದ ಕುಂದಾನಗರಿ ಮಂದಿ ಖುಷ್​ ಆಗಿದ್ದಾರೆ.

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ವರುಣನ ಅಬ್ಬರಕ್ಕೆ ಜನ ಫುಲ್​ ಖುಷ್​

ಹುಬ್ಬಳ್ಳಿ

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ವರುಣನ ಅಬ್ಬರ ಜೋರಾಗಿಯೇ ಇತ್ತು. ಹುಬ್ಬಳ್ಳಿಯಲ್ಲಿ ಸುಮಾರು ಅರ್ಧ ತಾಸಿಗೂ ಹೆಚ್ಚು ಕಾಲ ಮಳೆರಾಯ ಎಡಬಿಡದೇ ಸುರಿದು ಕಾದು ಕೆಂಡದಂತಾಗಿದ್ದ ಭೂಮಿಗೆ ತಂಪೆರೆದಿದ್ದಾನೆ. ಇನ್ನೂ ಸುರಿದ ಮಳೆಯಿಂದಾಗಿ ಕೆಲಕಾಲ ಜನಜೀವನ ಅಸ್ತವ್ಯಸ್ತವಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಬಯಲು ಸೀಮೆ ಭಾಗದಲ್ಲಿ ವರುಣನ ಸಿಂಚನ

ಶಿರಸಿ

ಉತ್ತರ ಕನ್ನಡ ಜಿಲ್ಲೆಯ ಬಯಲು ಸೀಮೆ ಭಾಗದಲ್ಲಿ ವರುಣ ದೇವ ದರ್ಶನ ಕೊಟ್ಟಿದ್ದಾನೆ. ಮುಂಡಗೋಡಿನ ಗ್ರಾಮೀಣ ಭಾಗದಲ್ಲಿ ಮಳೆ ಸುರಿದಿದೆ. ಶಿರಸಿ, ಸಿದ್ದಾಪುರ ಭಾಗದ ಹಲವು ಕಡೆ ಮೋಡ ಕವಿದ ವಾತಾವರಣ ಮುಂದುವರಿಕೆಯಾಗಿದ್ದು, ಶಿರಸಿಯ ಗ್ರಾಮೀಣ ಭಾಗದಲ್ಲಿ ಗುಡುಗು, ಸಿಡಿಲಿನ ಆರ್ಭಟ ಜೋರಾಗಿದೆ. ಇಂದಿನಿಂದ 3 ದಿನ ಉತ್ತರ ಕನ್ನಡ ಭಾಗದಲ್ಲಿ ಮಳೆಯಾಗುವ ಸೂಚನೆಯನ್ನ ಹವಾಮಾನ ಇಲಾಖೆ ನೀಡಿದೆ.

ಇದನ್ನೂ ಓದಿ: ಚುನಾವಣೆ ಹೊತ್ತಲ್ಲಿ ಉಪಮುಖ್ಯಮಂತ್ರಿ ಶಿವಕುಮಾರ್​ಗೆ ಬಿಗ್ ಶಾಕ್ ಕೊಟ್ಟ ಲೋಕಾಯುಕ್ತ..!

publive-image

ಗದಗ ತಾಲೂಕಿನ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಜಲಸಮೃದ್ಧಿ

ಗದಗ

ರಣ ಬಿಸಿಲಿನ ಪ್ರತಾಪಕ್ಕೆ ಗ್ರಾಮೀಣ ಭಾಗದ ಬಾವಿ ಕೆರೆಗಳು ಬತ್ತಿ ಹೋಗಿವೆ.. ಆದರೆ, ಗದಗ ತಾಲೂಕಿನ ಐತಿಹಾಸಿಕ ಲಕ್ಕುಂಡಿ ಐತಿಹಾಸಿಕ ಸಿದ್ದನಬಾವಿಯಲ್ಲಿ ಜಲಸಮೃದ್ಧಿಯಾಗಿದೆ. ಇನ್ನೂ ಈ ಐತಿಹಾಸಿಕ ಕಲ್ಯಾಣಿಯಲ್ಲಿ ಬೇಸಿಗೆ ರಜೆಯಲ್ಲಿರುವ ಮಕ್ಕಳು.. ಯುವಕರು.. ಸ್ವಿಮ್ಮಿಂಗ್ ಮಾಡ್ತಾ.. ಡೈವ್​ ಹಾಕ್ತಾ ಮಸ್ತ್ ಎಂಜಾಯ್​ ಮಾಡ್ತಿದ್ದಾರೆ.

ಇದನ್ನೂ ಓದಿ:ಮಂಗಳೂರು: ಮೋದಿ ಕಾರ್ಯಕ್ರಮದಲ್ಲಿ ದಿಢೀರ್ ಬದಲಾವಣೆ; ಸಮಾವೇಶ ರದ್ದು ಮಾಡಿದ್ದೇಕೆ..?

ವರುಣದೇವ ರಾಜ್ಯದ ಹಲವು ಜಿಲ್ಲೆಗಳಿಗೆ ಸರತಿ ಸಾಲಲ್ಲಿ ತಂಪೆರೆಯುತ್ತಿದ್ದಾನೆ. ಯುಗಾದಿ ಹಬ್ಬದಲ್ಲಿ ಮುಳುಗಿದ್ದ ಜನರಿಗೆ ಬೆಲ್ಲದಂತ ಸಿಹಿ ಬಡಿಸಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment