newsfirstkannada.com

ಜನ ಮೆಚ್ಚಿದ ನಾಯಕ ಸಿದ್ದರಾಮಯ್ಯ.. ರಾಜಕೀಯದಲ್ಲಿ ಮಾಸ್ ಲೀಡರ್ ಆಗಿದ್ದು ಹೇಗೆ?

Share :

Published May 20, 2023 at 12:23pm

Update September 25, 2023 at 9:21pm

    ಲೋಕದಳದಿಂದ ಗೆದ್ದ ಸಿದ್ದು ವಿಧಾನಸಭೆ ಪ್ರವೇಶ

    ಸಿದ್ದು ಕೈ ಹಿಡಿದ ಅಹಿಂದ ಸಮಾವೇಶ, ಪಾದಯಾತ್ರೆ

    ಸಿದ್ದು ಸೋಲು, ಗೆಲುವಿನ ಜರ್ನಿಯೇ ರಣರೋಚಕ

ಕರ್ನಾಟಕ ರಾಜಕೀಯದಲ್ಲಿ ಸಿದ್ದರಾಮಯ್ಯನವರ ರಾಜಕೀಯ ಜರ್ನಿಯೇ ಬಲು ರೋಚಕ. ಹಲವು ಭಾಗ್ಯಗಳ ಸರದಾರ ಸಿದ್ದರಾಮಯ್ಯನವರು, ಕರ್ನಾಟಕ ರಾಜಕೀಯದ ಮಾಸ್ ಲೀಡರ್ ಆಗಿದ್ದು ಹೇಗೆ? ಅವರ ರಾಜಕೀಯ ಜೀವನದ ಹೆಜ್ಜೆ ಗುರುತುಗಳು ಈ ಸ್ಟೋರಿಯಲ್ಲಿ ಇವೆ.

ಸಿದ್ದರಾಮಯ್ಯ ಈ ಹೆಸರು ಕೇಳಿದ್ರೆ ಸಾಕು ಇಡೀ ಕರುನಾಡೇ ಹರ್ಷದಲ್ಲಿ ತೇಲುತ್ತೆ. ಕರ್ನಾಟಕ ರಾಜ್ಯ ಕಂಡ ಅತ್ಯಂತ ಜನಪ್ರಿಯ ರಾಜಕಾರಣಿಗಳಲ್ಲಿ ಸಿದ್ದರಾಮಯ್ಯರದ್ದು ಮುಂಚೂಣಿಯ ಹೆಸರು. ಅತ್ಯಂತ ಜನಪ್ರಿಯ ಮಾಜಿ ಸಿಎಂಗಳಲ್ಲಿ ಸಿದ್ದರಾಮಯ್ಯ ಕೂಡ ಒಬ್ಬರು. ಸಿದ್ದರಾಮಯ್ಯ ಅವರಿಗೆ ಸತತ ಎರಡನೇ ಬಾರಿ ಮುಖ್ಯಮಂತ್ರಿ ಸ್ಥಾನ ಒಲಿದು ಬಂದಿದೆ. ಕರ್ನಾಟಕ ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಕೆಲವೇ ಕ್ಷಣಗಳಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ. ಸಿದ್ದರಾಮಯ್ಯ ಅವರು ತಮ್ಮ ನೇರ ನಡೆ ಹಾಗೂ ನುಡಿಗಳ ಮೂಲಕ ಗುರುತಿಸಿಕೊಂಡವರು. ಇವರ ರಾಜಕೀಯ ಜರ್ನಿಯೇ ಬಲು ರೋಚಕ.

ರಾಜ್ಯ ರಾಜಕೀಯದಲ್ಲಿ ಸಿದ್ದರಾಮಯ್ಯರನವರು ತಮ್ಮದೇಯಾದ ವರ್ಚಸ್ಸು ಹೊಂದಿದ್ದಾರೆ. ಎಲ್ಲ ಸಮುದಾಯಗಳು ಒಪ್ಪಿರುವಂಥ ನಾಯಕ ಅಂದ್ರು ಅತಿಶಯೋಕ್ತಿ ಆಗೋದಿಲ್ಲ. ತಾಲೂಕು ಬೋರ್ಡ್‌ನಿಂದ 2ನೇ ಬಾರಿ ಸಿಎಂ ಹುದ್ದೆವರೆಗೂ ಸಿದ್ದರಾಮಯ್ಯನವರ ರಾಜಕೀಯ ಜರ್ನಿ ರೋಚಕವಾಗಿದೆ.

ಸಿದ್ದು ರಾಜಕೀಯ ಹೆಜ್ಜೆ 

  • 1978: ಮೈಸೂರಿನ ತಾಲೂಕು ಬೋರ್ಡ್ ಚುನಾವಣೆಗೆ ಸ್ಪರ್ಧೆ
  • 1983ರಲ್ಲಿ ಲೋಕದಳದಿಂದ ವಿಧಾನಸಭೆ ಪ್ರವೇಶ
  • 1985ರಲ್ಲಿ ಚಾಮುಂಡೇಶ್ವರಿಯಿಂದ ಮತ್ತೆ ಗೆಲುವು
  • 1985ರಲ್ಲಿ ಪಶುಸಂಗೋಪನೆ ಸಚಿವರಾಗಿ ನೇಮಕ
  • 1989ರ ಚುನಾವಣೆಯಲ್ಲಿ ಸಿದ್ದರಾಮಯ್ಯಗೆ ಸೋಲು
  • 1992ರಲ್ಲಿ ಜನತಾದಳದ ಕಾರ್ಯದರ್ಶಿಯಾಗಿ ಆಯ್ಕೆ
  • 1994ರಲ್ಲಿ ಗೆದ್ದು ಹಣಕಾಸು ಸಚಿವರಾಗಿ ಕೆಲಸ
  • 1999ರಲ್ಲಿ ಜಾತ್ಯತೀತ ಜನತಾದಳ ಪಕ್ಷದ ಅಧ್ಯಕ್ಷ
  • 2004ರಲ್ಲಿ ಡಿಸಿಎಂ, ಹಣಕಾಸು ಸಚಿವರಾಗಿ ಕಾರ್ಯ
  • 2006ರಲ್ಲಿ ದಳದಿಂದ ಉಚ್ಛಾಟನೆ, ಕೈ ಸೇರ್ಪಡೆ
  • 2008ರಲ್ಲಿ ಕಾಂಗ್ರೆಸ್​ನಿಂದ 257 ಮತಗಳ ಗೆಲುವು
  • 2013 ರವರೆಗೆ ವಿಪಕ್ಷ ನಾಯಕನಾಗಿ ಕಾರ್ಯ
  • 2013, ಮೇ13ರಂದು ಸಿಎಂ ಆಗಿ ಪ್ರಮಾಣವಚನ
  • 2018-ಮೈತ್ರಿ ಸರ್ಕಾರದಲ್ಲಿ ಸಮನ್ವಯ ಸಮಿತಿ ಅಧ್ಯಕ್ಷ
  • 2019 ರಲ್ಲಿ ವಿರೋಧ ಪಕ್ಷದ ನಾಯಕನಾಗಿ ಕಾರ್ಯ
  • 2023, ಮೇ.20 2ನೇ ಬಾರಿಗೆ ಸಿಎಂ ಪ್ರಮಾಣವಚನ

1978ರಲ್ಲಿ ಮೊದಲ ಬಾರಿಗೆ ಚುನಾವಣೆ ಎದುರಿಸಿದ ಸಿದ್ದರಾಮಯ್ಯ ಮೈಸೂರಿನ ತಾಲೂಕು ಬೋರ್ಡ್ ಚುನಾವಣೆಗೆ ಭಾರತೀಯ ಲೋಕ ದಳ ಟಿಕೆಟ್ ಪಡೆದು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿದರು. ಬಳಿಕ 1983ರಲ್ಲಿ ವಿಧಾನಸಭೆಗೆ ಭಾರತೀಯ ಲೋಕದಳದಿಂದ ಸ್ಪರ್ಧೆ ಮಾಡಿ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದ ಗೆದ್ದರು. ಬಳಿಕ 1985ರ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರು.

ಆ ಬಳಿಕ ಪಶುಸಂಗೋಪನೆ ಸಚಿವರನ್ನಾಗಿ ನೇಮಕ ಮಾಡಲಾಯಿತು. ಸಂಪುಟ ಪುನಾರಚನೆಯ ಬಳಿಕ ಸಿದ್ದರಾಮಯ್ಯ ಅವರು ರೇಷ್ಮೆ ಮತ್ತು ಸಾರಿಗೆ ಸಚಿವರಾಗಿಯೂ ಕಾರ್ಯ ನಿರ್ವಹಿಸಿದರು. 1989ರ ಚುನಾವಣೆಯಲ್ಲಿ ಸೋತ ಸಿದ್ಧರಾಮಯ್ಯ ನಂತದಲ್ಲಿ ಜನತಾದಳ ಸೇರಿದರು. ಜನತಾದಳದ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದರು. ಬಳಿಕ 1994ರ ಚುನಾವನಣೆಯಲ್ಲಿ ಗೆದ್ದು, ದೇವೇಗೌಡರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದ್ರು.

1999ರಲ್ಲಿ ದೇವೇಗೌಡರೊಂದಿಗೆ ಸೇರಿ ಜಾತ್ಯತೀತ ಜನತಾದಳ ಪಕ್ಷದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. 2004ರಲ್ಲಿ ಡಿಸಿಎಂ ಮತ್ತು ಹಣಕಾಸು ಸಚಿವರಾಗಿ ಕಾರ್ಯ ನಿರ್ವಹಿಸಿದ್ರು.. ಬಳಿಕ ರಾಜಕೀಯ ಬೆಳವಣಿಯಲ್ಲಿ ಜೆಡಿಎಸ್​ ಪಕ್ಷದಿಂದ ಉಚ್ಛಾಟನೆಗೊಂಡು ಬಳಿಕ ಕಾಂಗ್ರೆಸ್​ ಸೇರ್ಪಡೆಯಾದ್ರು. ಆಗ ನಡೆದ ಬೈ ಎಲೆಕ್ಷನ್​ನಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧಿಸಿ 257 ಮತಗಳ ಗೆಲುವು ಸಾಧಿಸಿ, ರಾಜಕೀಯ ಪುನರ್ಜನ್ಮ ಪಡೆದುಕೊಂಡ್ರು.. ಬಳಿಕ 2013 ರವರೆಗೆ ವಿಪಕ್ಷ ನಾಯಕನಾಗಿ ಕಾರ್ಯ ನಿರ್ವಹಿಸಿದ್ರು. 2013ರ ಚುನಾವಣೆಯಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದಾಗ ಸಿಎಂ ಆಗಿ, 5ವರ್ಷಗಳ ಕಾಲ ಪೂರ್ಣವಧಿ ಸಿಎಂ ಆಗಿ ಆಡಳಿತ ನಡೆಸಿದ್ರು. 2018ರಲ್ಲಿ ಮೈತ್ರಿ ಸರ್ಕಾರದಲ್ಲಿ ಸಮನ್ವಯ ಸಮಿತಿ ಅಧ್ಯಕ್ಷರಾಗಿ, 2019ರಲ್ಲಿ ವಿರೋಧ ಪಕ್ಷದ ನಾಯಕನಾಗಿ ಕಾರ್ಯ ನಿರ್ವಹಿಸಿದರು.. ಇದೀಗ 2ನೇ ಬಾರಿಗೆ ಸಿಎಂ ಆಗಿ ಅಧಿಕಾರ ಸ್ವೀಕರಿಸುತ್ತಿದ್ದಾರೆ.

ಸಿದ್ದು ಕೈ ಹಿಡಿದ ಅಹಿಂದ ಸಮಾವೇಶ, ಬಳ್ಳಾರಿ ಪಾದಯಾತ್ರೆ
ರಾಜಕೀಯದಲ್ಲಿ ಸಿದ್ದರಾಮಯ್ಯ ಇಷ್ಟೊಂದು ದೊಡ್ಡ ಮಟ್ಟದ ವರ್ಚಸ್ಸು ಪಡೆದಿರೋದಕ್ಕೆ ಅವರು, ತಮ್ಮ ರಾಜಕೀಯ ಬದುಕಿನಲ್ಲಿ ತೆಗೆದುಕೊಂಡು ಕೆಲವು ಮಹತ್ವದ ನಿರ್ಧಾರಗಳು ಅಂದ್ರು ತಪ್ಪಾಗೋದಿಲ್ಲ. 2006ರಲ್ಲಿ ಸಿದ್ದರಾಮಯ್ಯನವರು ಅಹಿಂದ ಸಮಾವೇಶ ನಡೆಸದೇ ಹೋಗಿದ್ದರೆ, 2010ರಲ್ಲಿ ಬಳ್ಳಾರಿ ಪಾದಯಾತ್ರೆ ಕೈಗೊಳ್ಳದೇ ಇದ್ದಿದ್ದರೆ ಇವತ್ತು ಅವರು ಎರಡೆರಡು ಬಾರಿ ಮುಖ್ಯಮಂತ್ರಿ ಆಗಲು ಸಾಧ್ಯವಿರಲಿಲ್ಲ ಅನ್ಸುತ್ತೆ. ಇದಿಷ್ಟೇ ಅಲ್ಲ ಇನ್ನೂ ಕೆಲವು ಘಟನೆಗಳು ಹಾಗೂ ಅವರು ತೆಗೆದುಕೊಂಡ ನಿರ್ಧಾರಗಳು ಸಿದ್ದರಾಮಯ್ಯ ಅವರ ರಾಜಕೀಯ ಬದುಕಿಗೇ ಮಹತ್ವದ ತಿರುವು ನೀಡಿವೆ.

ಒಟ್ಟಾರೆ.. ಸಿದ್ದರಾಮಯ್ಯನವರ ರಾಜಕೀಯ ಹೆಜ್ಜೆ ಗುರುತುಗಳನ್ನ ನೋಡ್ತಿದ್ರೆ, ಎಲ್ಲರ ಹುಬ್ಬೇರುತ್ತೆ. ರಾಜಕೀಯದಲ್ಲಿ ಏಳು-ಬೀಳುಗಳನ್ನು ಕಂಡಿರುವ ಸಿದ್ದರಾಮಯ್ಯ, ಇವತ್ತು 2ನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜನ ಮೆಚ್ಚಿದ ನಾಯಕ ಸಿದ್ದರಾಮಯ್ಯ.. ರಾಜಕೀಯದಲ್ಲಿ ಮಾಸ್ ಲೀಡರ್ ಆಗಿದ್ದು ಹೇಗೆ?

https://newsfirstlive.com/wp-content/uploads/2023/05/Siddaramaiah-Cm-New.jpg

Load More