Advertisment

ವಕ್ಫ್ ವಿವಾದ ಬಗೆಹರಿಸಲು ತಾವೇ ಅಖಾಡಕ್ಕೆ ಇಳಿದ ಸಿಎಂ ; ರೈತರಿಗೆ ನೀಡಿದ ನೋಟಿಸ್ ವಾಪಸ್ ಪಡೆಯಲು ಸೂಚನೆ

author-image
Gopal Kulkarni
Updated On
ವಕ್ಫ್ ವಿವಾದ ಬಗೆಹರಿಸಲು ತಾವೇ ಅಖಾಡಕ್ಕೆ ಇಳಿದ ಸಿಎಂ ; ರೈತರಿಗೆ ನೀಡಿದ ನೋಟಿಸ್ ವಾಪಸ್ ಪಡೆಯಲು ಸೂಚನೆ
Advertisment
  • ವಕ್ಫ್​ ವಿವಾದಕ್ಕೆ ತೀಲಾಂಜಲಿ ಇಡಲು ತಾವೇ ಮುಂದೆ ಬಂದ ಸಿಎಂ ಸಿದ್ದರಾಮಯ್ಯ
  • ರೈತರಿಗೆ ನೀಡಿದ ನೋಟಿಸ್​ ಹಿಂಪಡೆಯುವಂತೆ ಸಿಎಂ ಸಿದ್ದು ಅವರಿಂದ ಸೂಚನೆ
  • ಸುತ್ತೊಲೆ ಹೊರಡಿಸಿದ ಅಧಿಕಾರಿ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಖಡಕ್ ಎಚ್ಚರಿಕೆ

ಈ ವಕ್ಫ್​ ಪೆಡಂಭೂತದ ಹಾವಳಿ ರಾಜ್ಯಾದ್ಯಂತ ಹೆಚ್ಚಾಗ್ತಾನೇ ಇದೆ. ರೈತರ ಆಸ್ತಿ-ಪಾಸ್ತಿ ಮೇಲೆ ಕಣ್ಣು ಹಾಕುವ ಜೊತೆಗೆ ಮಠ, ದೇವಸ್ಥಾನವನ್ನೂ ಬಿಡ್ತಿಲ್ಲ. ಇದು ವಕ್ಫ್​ ಆಸ್ತಿ ಅಂತ ಟವಲ್​ ಹಾಕಿದ್ರೆ ಬಿಟ್ಟುಕೊಟ್ಟು ಹೋಗ್ತಾ ಇರಬೇಕು. ಈ ವಕ್ಫ್‌ ಉಪಟಳ ಹೆಚ್ಚಾಗ್ತಿದ್ದಂತೆ ಖುದ್ದು ಸಿಎಂ ಸಿದದರಾಮಯ್ಯ ಅಖಾಡಕ್ಕಿಳಿದಿದ್ದಾರೆ.
ವಕ್ಫ್‌ ಅನ್ನೋ ಹೆಸರು ಕೇಳಿದ್ರೆ ಸಾಕು ರಾಜ್ಯದ ಜನರು ಅದರಲ್ಲೂ ರೈತರು ಬೆಚ್ಚಿಬೀಳ್ತಿದ್ದಾರೆ. ತಾಲೂಕು ಆಫೀಸ್‌ಗೆ ಹೋಗಿ ತಮ್ಮ ಜಮೀನಿನ ದಾಖಲೆ ಚೆಕ್‌ ಮಾಡ್ತಾ ಇದ್ದಾರೆ. ಎಲ್ಲಿ ತಮ್ಮ ಜಮೀನಿನ ಮೇಲೆ ಈ ವಕ್ಫ್ ವಕ್ರದೃಷ್ಟಿ ಬಿತ್ತೋ ಅಂತ. ಅಷ್ಟರ ಮಟ್ಟಿಗೆ ರೈತರ ನಿದ್ದೆಗೆಡಿಸಿದೆ. ಈ ಎಲ್ಲಾ ಬೆಳವಣಿಗೆಗಳ ಬಳಿಕ ರಾಜ್ಯ ಕಾಂಗ್ರೆಸ್​ ಸರ್ಕಾರದ ಹೆಸರು ತೀರಾ ಹದಗೆಟ್ಟು ಹೋಗಿದೆ. ಅದಿನ್ನೂ ಪಾತಾಳಕ್ಕೆ ಹೋಗಬಾರದೆಂದು ಸರ್ಕಾರ ಮೊನ್ನೆಯಷ್ಟೇ ವಕ್ಫ್‌ ಓಟಕ್ಕೆ ಬ್ರೇಕ್ ಹಾಕಿತ್ತು. ಇದೀಗ ಖುದ್ದು ಸಿಎಂ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದಾರೆ.

Advertisment

ಇದನ್ನೂ ಓದಿ:₹500 ಕೋಟಿ ಲೂಟಿ.. ವಸೂಲಿಗೆ ರೇಟ್ ಫಿಕ್ಸ್? ಅಬಕಾರಿ ಸಚಿವರ ಮೇಲೆ ಲೋಕಾಯುಕ್ತಕ್ಕೆ ದೂರು

ವಕ್ಫ್ ಸಂಬಂಧ ರೈತರಿಗೆ ನೀಡಿದ ಎಲ್ಲಾ ನೋಟಿಸ್​ ಹಿಂಪಡೆಯಬೇಕು
ಅಂದಾಗೆ ವಕ್ಫ್ ಬೋರ್ಡ್‌ ಕಲ್ಲೆಸೆದ ಜಾಗವೆಲ್ಲ ನಂದೇ ಅಂತಿರೋದಕ್ಕೆ ಪರೋಕ್ಷವಾಗಿ ಕಾರಣ ಆಗಿರೋದು ವಕ್ಫ್ ಸಚಿವ ಜಮೀರ್ ಅಹ್ಮದ್‌.. ಲಕ್ಷಾಂತರ ಎಕರೆ ಜಮೀನನ್ನ ಲಿಸ್ಟ್‌ ಮಾಡಿ ಇದು ವಕ್ಫ್‌ಗೆ ಸೇರಿದ್ದು ಅಂತ ಜಮೀರ್ ಬೇಲಿ ಹಾಕಲು ಮುಂದಾಗಿದ್ರು. ಇದರಿಂದ ಸರ್ಕಾರ ಹಾಗೂ ಪಕ್ಷಕ್ಕೆ ಆಗ್ತಿರುವ ಡ್ಯಾಮೇಜ್​ನಿಂದ ಸಿಎಂ ಸಿದ್ದರಾಮಯ್ಯ ಎಚ್ಚೆತ್ತಿದ್ದಾರೆ. ರಾಜ್ಯದ ರೈತರಿಗೆ ವಕ್ಫ್ ಬೋರ್ಡ್‌ ನೀಡಿದ್ದ ನೋಟಿಸ್ ವಾಪಸ್‌ ಪಡೆಯಲು ಸೂಚನೆ ನೀಡಿದ ಬೆನ್ನಲ್ಲೇ ಈಗ ಖುದ್ದು ಆದೇಶ ಹೊರಡಿಸಿದ್ದಾರೆ.

publive-image

ಸಿಎಂ ಸಿದ್ದರಾಮಯ್ಯನವರ ಆದೇಶದಲ್ಲೇನಿದೆ!?

ವಕ್ಫ್ ಸಂಬಂಧ ರೈತರಿಗೆ ನೀಡಿರುವ ಎಲ್ಲಾ ನೋಟಿಸುಗಳನ್ನು ಹಿಂಪಡೆಯಬೇಕು. ಜಮೀನುಗಳಲ್ಲಿ ವ್ಯವಸಾಯ ಮಾಡುತ್ತಿರುವ ರೈತರ ವಿರುದ್ಧ ಯಾವುದೇ ಕ್ರಮವನ್ನು ಜರುಗಿಸಬಾರದು ಅಂತ ರಾಜ್ಯದ ಎಲ್ಲಾ ಪ್ರಾದೇಶಿಕ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳಿಗೆ ಸರ್ಕಾರ ಆದೇಶ ಹೊರಡಿಸಿದೆ. ಕೆಲ ರೈತರ ಹಾಗೂ ಇತರ ಆಸ್ತಿಗಳನ್ನು ವಕ್ಸ್ ಹೆಸರಿಗೆ ಖಾತೆ ಮಾಡುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆ ಸೂಚನೆ ನೀಡಲಾಗಿದೆ. ಮ್ಯುಟೇಷನ್ ಮಾಡಲು ಯಾವುದೇ ಕಛೇರಿ ಅಥವಾ ಯಾವುದೇ ಪ್ರಾಧಿಕಾರ ನೀಡಿದ ನಿರ್ದೇಶನಗಳನ್ನು ತಕ್ಷಣ ಹಿಂಪಡೆಯಬೇಕು. ಜೊತೆಗೆ ಮ್ಯುಟೇಷನ್ ಪ್ರಕ್ರಿಯೆ ಕೂಡಲೇ ಸ್ಥಗಿತಗೊಳಿಸಬೇಕು. ಮುಖ್ಯಮಂತ್ರಿಗಳ ಆದೇಶವಿದ್ದಾಗಲೂ ಮೇಲಧಿಕಾರಿಗಳ ಅನುಮತಿ ಇಲ್ಲದೆ ಸುತ್ತೋಲೆ ಹೊರಡಿಸಿದ ಅಧಿಕಾರಿ ವಿರುದ್ಧ ಸೂಕ್ತ ಶಿಸ್ತು ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ್ದಾರೆ.

Advertisment

ಇದನ್ನೂ ಓದಿ:ವಕ್ಫ್​​ನಿಂದ ರೈತರ ಆಸ್ತಿ ಮೇಲೆ ಹಕ್ಕು, ಇದು ವಿಷಾದಕರ.. ಬಾಳೆಹೊನ್ನೂರು ಶ್ರೀ ಇನ್ನೇನು ಹೇಳಿದ್ರು?

ರಾಜ್ಯದಲ್ಲಿ ವಕ್ಫ್‌ ಬೋರ್ಡ್‌ನ ಭೂವ್ಯೂಹ ದೊಡ್ಡದಾಗ್ತ್ತಾ ಇದೆ. ಈ ನಡುವೆ ಸಿಎಂ ಸಿದ್ದರಾಮಯ್ಯ ನೋಟಿಸ್ ವಾಪಸ್ ಪಡೆಯಲು ಸೂಚಿಸಿದ್ದಾರೆ. ಇನ್ನಾದ್ರೂ ಈ ವಕ್ಫ್​ ಉಪಟಳ ಕಮ್ಮಿಯಾಗುತ್ತಾ ಕಾದು ನೋಡಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment