/newsfirstlive-kannada/media/post_attachments/wp-content/uploads/2023/07/SIDDARAMAIAH_CM_BUDGET_1.jpg)
ಇಂದಿನಿಂದ ಬಜೆಟ್ ಅಧಿವೇಶನ ಆರಂಭವಾಗ್ತಿದೆ. ಸರ್ಕಾರದ ಜೊತೆ ಶೀತಲ ಸಮರದ ನಡುವೆ ರಾಜ್ಯದ ಚಿತ್ತ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಮಾಡುವ ಭಾಷಣದತ್ತ ನೆಟ್ಟಿದೆ. ಸಿಎಂ ಸಿದ್ದರಾಮಯ್ಯ ಶುಕ್ರವಾರ ದಾಖಲೆಯ ಬಜೆಟ್ ಮಂಡಿಸ್ತಿದ್ದು, ಸರ್ಕಾರದ ಮೇಲೆ ಮುಗಿಬೀಳಲು ತೆನೆ-ಕಮಲ ಸಜ್ಜಾಗಿವೆ.
ಇಂದಿನಿಂದ ವಿಧಾನಮಂಡಲದ ಬಜೆಟ್ ಅಧಿವೇಶನ ಆರಂಭವಾಗ್ತಿದೆ.. ಮಾರ್ಚ್ 7ರಂದು ರಾಜ್ಯದ ಮಟ್ಟಿಗೆ ಅತ್ಯಧಿಕ 16ನೇ ಬಜೆಟ್ ಮಂಡಿಸಿ ದಾಖಲೆ ಬರೆಯಲಿರುವ ಸಿದ್ದರಾಮಯ್ಯ, ಆರ್ಥಿಕ ಇತಿಮಿತಿಗಳಲ್ಲಿ ಯಾವ ರೀತಿಯ ಬಜೆಟ್ ನೀಡ್ತಾರೆ ಕುತೂಹಲ ಇದೆ.. ಗ್ಯಾರಂಟಿಗಳ ಒತ್ತಡದ ನಡುವೆ ಸಿದ್ದು ಬಜೆಟ್ ಹೇಗಿರಲಿದೆ? ಯಾವೆಲ್ಲ ಹೊಸ ಕಾರ್ಯಕ್ರಮಗಳನ್ನ ನೀಡಲಿದ್ದಾರೆ ಅನ್ನೋ ಎಂಬ ಕಾತರ ಜನರಿಗೆ ಕಾಡ್ತಿದೆ.
ಇದನ್ನೂ ಓದಿ:ಡಿ.ಕೆ ಶಿವಕುಮಾರ್ ನಡೆ- ನುಡಿಯಿಂದ ರಾಜಕೀಯದಲ್ಲಿ ಸಂಚಲನ.. ಕಾಂಗ್ರೆಸ್ ನಾಯಕರು ಹೇಳುವುದೇನು?
ಬೆಳಗ್ಗೆ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಭಾಷಣ ಮಾಡಲಿದ್ದಾರೆ. ವಿಧೇಯಕಗಳ ಬಗ್ಗೆ ಸರ್ಕಾರದ ಧೋರಣೆ ಖಂಡಿಸಿ ಪತ್ರ, ಮಸೂದೆಗಳ ವಾಪಸ್ ಮಾಡಿರುವ ರಾಜ್ಯಪಾಲರ ಭಾಷಣ ಹೇಗಿರಲಿದೆ ಎಂಬ ಕುತೂಹಲ ಇದೆ. ಬಳಿಕ ಮೂರು ದಿನಗಳ ಕಾಲ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯಲಿದ್ದು, ಮಾರ್ಚ್ 6 ರಂದು ಸರ್ಕಾರ ಉತ್ತರ ನೀಡಲಿದೆ. ಇತ್ತ, ಸರ್ಕಾರದ ವಿರುದ್ಧ ಹೋರಾಟಕ್ಕೆ ವಿರೋಧ ಪಕ್ಷಗಳು ಸಜ್ಜಾಗಿ ನಿಂತಿವೆ. ಇವತ್ತು ಮತ್ತು 7ನೇ ತಾರೀಖು ಅಭಿವೃದ್ಧಿ ಶೂನ್ಯ ಪ್ರತಿಭಟನೆಗೆ ವಿಪಕ್ಷಗಳು ರೆಡಿ ಆಗಿವೆ.
ಇನ್ನು, ಬಜೆಟ್ ಅಧಿವೇಶನಕ್ಕೆ ಪೂರ್ವಭಾವಿಯಾಗಿ ಇಂದು ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ಜೊತೆಗೆ ಜೆಡಿಎಸ್ ಕೂಡ ಬೃಹತ್ ಪ್ರತಿಭಟನೆಗೆ ಸಜ್ಜಾಗಿದೆ. ಜೆಡಿಎಲ್ಪಿ ನಾಯಕ ಸುರೇಶ್ ಬಾಬು ಮತ್ತು ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ 11 ಗಂಟೆಗೆ ಧರಣಿ ನಡೆಯಲಿದೆ. ಗೃಹ ಲಕ್ಷ್ಮಿ ಹಣ ಬಿಡುಗಡೆ ಸ್ಥಗಿತವನ್ನೇ ಜೆಡಿಎಸ್ ಅಸ್ತ್ರಮಾಡಿಕೊಳ್ಳಲು ಪ್ಲಾನ್ ಮಾಡಿದೆ.
ಇದನ್ನೂ ಓದಿ:ಕಮಲ ಮುಡಿಯೋ ನಾರಿ ಯಾರು..? ಬಿಜೆಪಿ ರಾಷ್ಟ್ರೀಯ ಅಧ್ಯಕ್ಷೆ ರೇಸ್ನಲ್ಲಿ ಮೂವರು ಮಹಿಳೆಯರು
ವಿಪಕ್ಷಗಳ ಬಳಿ ಇರುವ ಅಸ್ತ್ರಗಳೇನು?
ಈ ಬಾರಿ ಸರ್ಕಾರಕ್ಕೆ ಸಂಕಷ್ಟ ಸುತ್ಕೊಳ್ಳಲಿದೆ.. ಹತ್ತಾರು ಅಸ್ತ್ರಗಳು ವಿಪಕ್ಷಗಳ ಬತ್ತಳಿಕೆ ಸೇರಿವೆ.ಗ್ಯಾರಂಟಿಗಳ ಹಣ ಬಿಡುಗಡೆ ವಿಳಂಬವೇ ವಿಪಕ್ಷಗಳಿಗೆ ದೊಡ್ಡ ಅಸ್ತ್ರ ಆಗಿದೆ.. ಅಭಿವೃದ್ಧಿ ಕಾಮಗಾರಿಗಳಲ್ಲಿ ಶಾಸಕರ ಅನುದಾನ ಕೊರತೆ ಪ್ರಸ್ತಾಪ ಆಗ್ಲಿದೆ.. ಇನ್ನು, ಬಸ್ ಪ್ರಯಾಣ ದರ, ಮೆಟ್ರೋ ದರ ಏರಿಕೆ ಸದನ ಕದನವಾಗಿಸುವ ಸಾಧ್ಯತೆ ಇದೆ.. ವಿದ್ಯುತ್, ನೀರು, ಹಾಲಿನ ದರ ಏರಿಕೆ ಸಹ ಸದ್ದು ಮಾಡಲಿದೆ.. ರಾಜ್ಯದ ವಿಶ್ವವಿದ್ಯಾಲಯಗಳ ಮುಚ್ಚುವ ವದಂತಿ, ಇನ್ನು, ಮೈಕ್ರೋ ಫೈನಾನ್ಸ್ ಕಿರುಕುಳ, ರಾಜ್ಯಪಾಲ-ಸರ್ಕಾರದ ನಡುವಿನ ಜಟಾಪಟಿ, ಬಿಬಿಎಂಪಿ ಎಲೆಕ್ಷನ್ ದೃಷ್ಟಿಯಿಂದ ಬೆಂಗಳೂರಿನ ಸಮಸ್ಯೆಗಳನ್ನ ಮುಖ್ಯ ಅಸ್ತ್ರವಾಗಿಸಿ ಸರ್ಕಾರದ ಮೇಲೆ ಮುಗಿಬೀಳಲು ಬಿಜೆಪಿ-ಜೆಡಿಎಸ್ ಸಜ್ಜಾಗಿವೆ..
ಇದಕ್ಕೆ ಕೌಂಟರ್ ಕೊಡಲು ಕಾಂಗ್ರೆಸ್ ಸಹ ರೆಡಿ ಆಗಿದೆ. ಕೇಂದ್ರದಿಂದ ತೆರಿಗೆ ಹಂಚಿಕೆಯಲ್ಲಿ ಆಗಿರುವ ಅನ್ಯಾಯ, ವಿವಿಧ ಯೋಜನೆಗಳಿಗೆ ಕೇಂದ್ರ ಅಂಗೀಕಾರ ನೀಡದಿರುವುದು ಸೇರಿ ಹತ್ತು ಹಲವು ವಿಷಯಗಳನ್ನ ಎತ್ತಿ ವಾಗ್ವಾದಕ್ಕೆ ಸಜ್ಜಾಗ್ತಿದೆ. ಒಟ್ಟಾರೆ, ಮಾರ್ಚ್ 21ರ ವರೆಗೆ ನಡೆಯುವ ಅಧಿವೇಶನ ಹಲವು ವಿಶೇಷಗಳಿಗೆ ಕಾರಣ ಆಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ