CET ಪರೀಕ್ಷೆ ಫುಲ್​ ಸ್ಟ್ರಿಕ್ಟ್.. ಸಿಸಿಟಿವಿ ಕಣ್ಗಾವಲಲ್ಲಿ ವೆಬ್ ಕಾಸ್ಟಿಂಗ್, QR ಕೋಡ್ ಅಸ್ತ್ರ..!

author-image
Ganesh
Updated On
CET Exam: ಇಂದಿನಿಂದ ಸಿಇಟಿ ಪರೀಕ್ಷೆ; ಪರೀಕ್ಷಾರ್ಥಿಗಳಿಗೆ ಡ್ರೆಸ್​ಕೋಡ್, ಮಾರ್ಗಸೂಚಿ..!
Advertisment
  • ಪರೀಕ್ಷಾ ಅಕ್ರಮಗಳಿಗೆ ಬ್ರೇಕ್ ಹಾಕಲು KEA ಪ್ಲಾನ್​​
  • ಫೇಶಿಯಲ್ ರೆಕಗ್ನಿಷನ್ ಕ್ಯೂ ಆರ್ ಕೋಡ್ ಅಸ್ತ್ರ ಬಳಕೆ
  • ಫ್ರಿಸ್ಕಿಂಗ್ ಪ್ರಕ್ರಿಯೆಯಲ್ಲಿ ಪರೀಕ್ಷಾ ಕೇಂದ್ರ ಪ್ರವೇಶ

ಬೆಂಗಳೂರು: ಪರೀಕ್ಷಾ ಅಕ್ರಮಗಳಿಗೆ ಬ್ರೇಕ್ ಹಾಕಲು KEA (ಕರ್ನಾಟಕ ಪರೀಕ್ಷಾ ಪ್ರಾಧಿಕಾರ) ಮಾಸ್ಟರ್ ಪ್ಲಾನ್ ಮಾಡಿದೆ. ಮೊನ್ನೆಯಷ್ಟೇ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಮುಂದಿನ ವೃತ್ತಿಪರ ಕೋರ್ಸ್​​ಗಳಿಗೆ ಏಪ್ರಿಲ್ 15, 16, 17 ರಂದು ಸಿಇಟಿ (CET) ನಡೆಯಲಿದೆ.

ಇದೇ ಮೊದಲ ಬಾರಿಗೆ CCTV ಕಣ್ಗಾವಲಲ್ಲಿ ವೆಬ್ ಕಾಸ್ಟಿಂಗ್ ಮೂಲಕ CET ಪರೀಕ್ಷೆ ನಡೆಸಲಾಗುತ್ತಿದೆ. ಫೇಶಿಯಲ್ ರೆಕಗ್ನಿಷನ್ ಕ್ಯೂ ಆರ್ ಕೋಡ್ ಅಸ್ತ್ರ ಪ್ರಯೋಗ ಆಗಲಿದೆ. ಪರೀಕ್ಷಾರ್ಥಿಗಳನ್ನು ಫ್ರಿಸ್ಕಿಂಗ್ ಪ್ರಕ್ರಿಯೆಯಲ್ಲಿ ಪರೀಕ್ಷಾ ಕೇಂದ್ರದ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಇದರಿಂದ ಪರೀಕ್ಷಾ ಕೇಂದ್ರದಲ್ಲಿ ಉಂಟಾಗುವ ನೂಕು, ನುಗ್ಗಲಿಗೆ ಬ್ರೇಕ್ ಬೀಳಲಿದೆ.

ಇದನ್ನೂ ಓದಿ: ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ವಿಶೇಷ ತರಬೇತಿ, ಔದ್ಯೋಗಿಕ ಕಾರ್ಯಕ್ರಮ

publive-image

ಈಗಾಗಲೇ ಹಾಲ್ ​ಟಿಕೆಟ್ ಬಿಡುಗಡೆ ಮಾಡಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು, OMR ಮಾದರಿ ಶೀಟ್ ಬಿಡುಗಡೆ ಮಾಡಿದೆ. ಪರೀಕ್ಷಾರ್ಥಿಗಳಿಗೆ ಯಾವುದೇ ಗೊಂದಲ ಆಗೋದು ಬೇಡ ಎಂಬುವ ಉದ್ದೇಶದಿಂದ ಮುಂಚಿತವಾಗಿಯೇ ಒಎಂಆರ್​ ಶೀಟ್ ಬಿಡುಗಡೆ ಮಾಡಿದೆ. ಜೊತೆಗೆ ಹಾಲ್​ ಟಿಕೆಟ್​ನಲ್ಲಿ QR ಕೂಡ ನೀಡಲಾಗಿದೆ. QR ಸ್ಕ್ಯಾನ್ ಮಾಡಿದಾಗ ಅಭ್ಯರ್ಥಿಯ ಫೋಟೋ ಜೊತೆಗೆ ಸಂಪೂರ್ಣ ಮಾಹಿತಿ ಅದರಲ್ಲಿ ಸಿಗಲಿದೆ.

ಇನ್ನು, ಪರೀಕ್ಷೆ ಬರೆಯೋರಿಗೆ ನೀಟ್ ಮಾದರಿಯಲ್ಲೇ ವಸ್ತ್ರ ಸಂಹಿತೆ ಜಾರಿಗೆ ತರಲಾಗಿದೆ. ವಾಚ್ ಧರಿಸುವಂತಿಲ್ಲ, ರೂಮ್ ಗೋಡೆಯಲ್ಲೇ ಗಡಿಯಾರ ಇರಲಿದೆ. ಫುಲ್ ಸ್ಲೀವ್ ಬಟ್ಟೆಗಳನ್ನ ಯಾವುದೇ ಕಾರಣಕ್ಕೂ ಧರಿಸುವಂತಿಲ್ಲ. ಮೊದಲ ಬಾರಿಗೆ ಸಿಸಿಟಿವಿ ಕಣ್ಗಾವಲಲ್ಲಿ ಲೈವ್ ಸ್ಟ್ರೀಮಿಂಗ್​ ಇರುತ್ತದೆ. ಮೂರು ದಿನಗಳ ಕಾಲ ನಡೆಯುವ ಪರೀಕ್ಷೆಗೆ ಒಟ್ಟು 3.30 ಲಕ್ಷ ವಿದ್ಯಾರ್ಥಿಗಳ ನೋಂದಣಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಫಲಿತಾಂಶ ಬೆನ್ನಲ್ಲೇ ದ್ವಿತೀಯ ಪಿಯುಸಿ ಪರೀಕ್ಷೆ-2 ದಿನಾಂಕ ಪ್ರಕಟ.. ಪರೀಕ್ಷಾ ವೇಳಾಪಟ್ಟಿ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment