/newsfirstlive-kannada/media/post_attachments/wp-content/uploads/2024/11/CONGRESS-NEW-PLAN.jpg)
ರಾಜ್ಯದಲ್ಲಿ ನಡೆದ ಮೂರು ವಿಧಾನಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಳ್ಳುವ ಮೂಲಕ ಕಾಂಗ್ರೆಸ್ ಸರ್ಕಾರ ಮತ್ತಷ್ಟು ಆತ್ಮವಿಶ್ವಾಸದಲ್ಲಿದೆ. ಈ ವೇಳೆ ಮಹಿಳಾ ಮತಾದಾರರು ಹೆಚ್ಚು ಹೆಚ್ಚು ಕಾಂಗ್ರೆಸ್ ಕೈ ಹಿಡಿದ ಕಾರಣ. ಅದು ಮುಂದಿನ 2028ರ ಚುನಾವಣೆಗೂ ಎನ್ಕ್ಯಾಶ್ ಮಾಡಿಕೊಳ್ಳಲು ಕಾಂಗ್ರೆಸ್ ಪಾಳಯ ಪ್ಲಾನ್ ಮಾಡಿದೆ. ರಾಜ್ಯದಲ್ಲಿ ಗೃಹಲಕ್ಷ್ಮೀ ಯೋಜನೆಗಳ ಮೇಲೆ ಮಹಿಳೆಯರು ಹೆಚ್ಚಿನ ಒಲವು ಹೊಂದಿದ್ದಾರೆ. ಇದನ್ನೆ ಲಾಭವಾಗಿಸಿಕೊಳ್ಳಲು ಕಾಂಗ್ರೆಸ್ ಸರ್ಕಾರ ಚಿಂತನೆ ನಡೆಸಿದೆ. ಯುವಕರ ಜನಸಂಘದಂತೆ ಗೃಹಲಕ್ಷ್ಮೀ ಸಂಘಗಳ ರಚನೆಗೆ ಕಾಂಗ್ರೆಸ್ ಮುಂದಾಗಿದೆ.
ಇದನ್ನೂ ಓದಿ:ಚನ್ನಪಟ್ಟಣದಲ್ಲಿ ಮೈತ್ರಿ ಅಭ್ಯರ್ಥಿ ಸೋಲು.. ನಿಖಿಲ್ ರಾಜಕೀಯದ ಬಗ್ಗೆ ಸುಮಲತಾ ಅಂಬರೀಶ್ ಹೇಳಿದ್ದೇನು?
ಈ ಹಿಂದೆ ರಾಜೀವ್ ಯುವಕರ ಜನ ಸಂಘ ರಚನೆ ಮಾಡಿದ್ದ ಕಾಂಗ್ರೆಸ್ ಪ್ರತಿ ಊರಲ್ಲೂ ಹೊಸ ನೆಟ್ವರ್ಕ್ ರೂಪಿಸಲು ರಾಜೀವ್ ಯುವಕರ ಸಂಘ ರಚನೆ ಮಾಡಿತ್ತು. ದಶಕದ ಹಿಂದೆಯೇ ಸ್ತ್ರೀ ಸಂಘಗಳನ್ನು ಕಾಂಗ್ರೆಸ್ ಅಸ್ತಿತ್ವಕ್ಕೆ ತಂದಿತ್ತು. ಆದ್ರೆ ಈಗ ಪ್ರತಿ ಗ್ರಾಮಗಳಲ್ಲಿಯೂ ಕೂ ಗೃಹಲಕ್ಷ್ಮೀ ಸಂಘ ಹುಟ್ಟು ಹಾಕಲು ತಂತ್ರ ರೂಪಿಸಿದೆ. ಗ್ಯಾರಂಟಿ ಯೋಜನೆಯಿಂದ ಜನರಿಗೆ ಹೆಚ್ಚು ಅನುಕೂಲವಾದ ಲೆಕ್ಕಾಚಾರದಲ್ಲಿ ಅದರಲ್ಲೂ ಗೃಹಲಕ್ಷ್ಮೀ ಯೋಜನೆಯ ಬಗ್ಗೆ ಮಹಿಳೆಯರ ಪಾಸಿಟಿವ್ ಒಲವು ಇದ್ದ ಕಾರಣ, ಇದನ್ನೆ ರಾಜಕೀಯವಾಗಿ ಲಾಭ ಮಾಡಿಕೊಳ್ಳಲು ಚಿಂತನೆ ನಡೆಸಿದೆ.
ಗೃಹಲಕ್ಷ್ಮೀ ಸಂಘಗಳಿಗೆ ಅಗತ್ಯವಾದ ಸಾಲ ಹಾಗೂ ಸೌಲಭ್ಯ ಕಲ್ಪಿಸುವುದು ಆರ್ಥಿಕ ಸಬಲೀಕರಣ ಮಾಡುವ ಮೂಲಕ ಮಹಿಳಾ ಮತಗಳನ್ನು ಕೈ ಬಿಟ್ಟು ಹೋಗಲಾರದಂತೆ ನೋಡಿಕೊಳ್ಳುವ ಹಾಗೂ ಇನ್ನೂ ಹೆಚ್ಚು ಮತಗಳನ್ನು ಪಡೆಯುವ ಹಿನ್ನೆಲೆಯಲ್ಲಿ ಕೈ ಪಾಳಯ ಲೆಕ್ಕಾಚಾರ ಹಾಕಿಕೊಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ