newsfirstkannada.com

ಪಠ್ಯ ಪರಿಷ್ಕರಣೆಗೆ ಮುಂದಾದ ಸರ್ಕಾರ; ಹೆಡ್ಗೆವಾರ್, ಸಾವರ್ಕರ್, ಸೂಲಿಬೆಲೆ ಪಾಠಕ್ಕೆ ಕೊಕ್

Share :

15-06-2023

    ಪಠ್ಯ ಪುಸ್ತಕ ಪರಿಷ್ಕರಣೆಗೆ ಮುಂದಾದ ಸಿದ್ದರಾಮಯ್ಯ ಸರ್ಕಾರ

    6 ರಿಂದ 10ನೇ ತರಗತಿವರೆಗಿನ ಪಠ್ಯಗಳಲ್ಲಿ ಮಹತ್ವದ ಬದಲಾವಣೆ

    ಗದ್ಯ ಮತ್ತು ಪದ್ಯಗಳಲ್ಲಿ ಏನೆಲ್ಲಾ ಬದಲಾವಣೆ ಮಾಡುತ್ತಾರೆ ಗೊತ್ತಾ?

ಪಠ್ಯ ಪುಸ್ತಕ ಪರಿಷ್ಕರಣೆ ಮಾಡುತ್ತೇವೆಂದು ಶಿಕ್ಷಣ ಸಚಿವ ಮಧು‌ ಬಂಗಾರಪ್ಪ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು 6 ರಿಂದ 10 ತರಗತಿವರೆಗಿನ ಪಠ್ಯದಲ್ಲಿ ಬದಲಾವಣೆ ಮಾಡುವ ಬಗ್ಗೆ ಹೇಳಿದ್ದಾರೆ.

ಸಂಪುಟ ಸಭೆಯಲ್ಲಿ ಒಪ್ಪಿಗೆ ಸಿಕ್ಕಿದೆ. ಬಿಜೆಪಿ ಸರ್ಕಾರವಿದ್ದಾಗ ಸಾವಿತ್ರಿ ಪುಲೆ ಪಠ್ಯ, ಅಂಬೇಡ್ಕರ್ ಕವನ ತೆಗೆದಿದ್ದರು. ಈಗ ನಾವು ಅದನ್ನ ಮರು ಸೇರಿಸಿದ್ದೇವೆ ಎಂದು ಮಧು ಬಂಗಾರಪ್ಪನವರು ಹೇಳಿದ್ದಾರೆ.

ಐವರು ತಜ್ಞರ ಸಮಿತಿ

ನಂತರ ಮಾತನಾಡಿದ ಅವರು, ಸಿಎಂ ಮಾರ್ಗದರ್ಶನದ ಮೇಲೆ ಚರ್ಚೆಯಾಗಿದೆ. ಪ್ರಣಾಳಿಕೆಯಲ್ಲೂ ನಮ್ಮ‌ ಕಮಿಟ್ ಮೆಂಟ್ ಇತ್ತು. ನಮ್ಮ ಸರ್ಕಾರ ಬರುವಾಗ ಪುಸ್ತಕ ಮಕ್ಕಳ‌ ಕೈ ಸೇರಿದೆ. ವಾಪಸ್ ತರಿಸೋಕೆ ನೂರಾರು ಕೋಟಿ ಖರ್ಚಾಗಲಿದೆ. ಹಾಗಾಗಿ ಮಕ್ಕಳಿಗೆ ಏನನ್ನ ಹೇಳಿಕೊಡಬೇಕು. ಏನನ್ನ ತೆಗೆಯಬೇಕು ಅದನ್ನ ನಿರ್ಣಯಿಸುತ್ತೇವೆ. ಸಾಹಿತಿಗಳು ಸಿಎಂ, ನಮ್ಮನ್ನ ಭೇಟಿ ಮಾಡಿದ್ದರು. ಐವರು ತಜ್ಞರ ಸಮಿತಿ ರಚಿಸಿದ್ದೆವು. ರಾಜಪ್ಪ ದಳವಾಯಿ, ಅಶ್ವಥ್ ನಾರಾಯಣ್, ಚಂದ್ರಶೇಖರ್, ರಾಜೇಶ್ ಸೇರಿ ಐವರ ಸಮಿತಿ ರಚಿಸಿದ್ದೆವು ಎಂದು ಹೇಳಿದ್ದಾರೆ.

15 ಪೇಜುಗಳ ಪುಸ್ತಕ

ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ಪದಗಳ ಬದಲಾವಣೆ, ವಾಕ್ಯ ಬದಲಾವಣೆ ಮಾಡಬೇಕು. 6 ರಿಂದ 10ನೇ ತರಗತಿಯವರೆಗೆ ಪಠ್ಯ ಬದಲಾವಣೆ. ಯಾವುದು ಬೇಕು, ಬೇಡ ಅಂತ ಸಪ್ಲಿಮೆಂಟರಿ ಬುಕ್ ಮಾಡ್ತೇವೆ. 12 ಲಕ್ಷ ಇದಕ್ಕೆ ಖರ್ಚು ಬರಬಹುದು ಎಂದು ಹೇಳಿದ್ದಾರೆ.ಒಂದು ತಿಂಗಳಲ್ಲೇ ಸಪ್ಲಿಮೆಂಟರಿ ಬುಕ್ ನೀಡುತ್ತೇವೆ. 15 ಪೇಜುಗಳ ಪುಸ್ತಕ ಇರಬಹುದು ಎಂದು ಹೇಳಿದ್ದಾರೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪಠ್ಯ ಪರಿಷ್ಕರಣೆಗೆ ಮುಂದಾದ ಸರ್ಕಾರ; ಹೆಡ್ಗೆವಾರ್, ಸಾವರ್ಕರ್, ಸೂಲಿಬೆಲೆ ಪಾಠಕ್ಕೆ ಕೊಕ್

https://newsfirstlive.com/wp-content/uploads/2023/06/Madhu-Bangarappa.jpg

Load More