Advertisment

ಕೆಆರ್​ಎಸ್​ ಡ್ಯಾಂ ನೀರಿನ ಮಟ್ಟದಲ್ಲಿ ಏರಿಕೆ.. ರೈತರಲ್ಲಿ ಮೂಡಿದ ಮಂದಹಾಸ

author-image
Ganesh
Updated On
Kaveri Water: ಇಂದು ಕಾವೇರಿ ನೀರು ನಿರ್ವಹಣಾ ಸಮಿತಿ ಸಭೆ.. ಆತಂಕದಲ್ಲಿ ಮಂಡ್ಯ ರೈತರು
Advertisment
  • ಕೊಡಗು ಭಾಗದಲ್ಲಿ ಕಳೆದ ಎರಡು ದಿನ ಮಳೆ ಹಿನ್ನೆಲೆ
  • ಮೊದಲ ಬಾರಿಗೆ ಒಳಹರಿವು 2 ಸಾವಿರ ಕ್ಯೂಸೆಕ್ ದಾಟಿದೆ
  • ಮೈಸೂರಲ್ಲಿ ಬಾಗಿನ ಅರ್ಪಿಸಿ ಸಂಭ್ರಮಿಸಿದ ಗ್ರಾಮಸ್ಥರು

ಮಂಡ್ಯ: ಕೆಆರ್​ಎಸ್​ ಡ್ಯಾಂನ ಒಳಹರಿವು ಅಲ್ಪ ಏರಿಕೆಯಾಗಿದೆ. 2024ರಲ್ಲಿ ಒಳ ಹರಿವಿನಲ್ಲಿ ಮೊದಲ ಬಾರಿ 2 ಸಾವಿರ ಕ್ಯೂಸೆಕ್ ದಾಟಿದೆ.

Advertisment

2509 ಕ್ಯೂಸೆಕ್ ನೀರು ಡ್ಯಾಂಗೆ ಹರಿದು ಬರುತ್ತಿದೆ. ಡ್ಯಾಂನಿಂದ ಕುಡಿಯುವ ನೀರಿಗೆ 525 ಕ್ಯೂಸೆಕ್ ಬಳಕೆ ಮಾಡಲಾಗಿದೆ. ಕೊಡಗು ಭಾಗದಲ್ಲಿ ಕಳೆದ ಎರಡು ದಿನ ಮಳೆ ಹಿನ್ನಲೆ ಕೆ.ಆರ್.ಎಸ್ ಡ್ಯಾಂನ ನೀರಿನ ಮಟ್ಟದಲ್ಲಿ ಅಲ್ಪ ಏರಿಕೆಯಾಗಿದೆ. 124.80 ಅಡಿ ಗರಿಷ್ಟ ಮಟ್ಟದ ಡ್ಯಾಂನಲ್ಲಿ ಸದ್ಯ 81.80 ಅಡಿ ನೀರು ಮಾತ್ರ ಸಂಗ್ರಹ ಆಗಿದೆ. 49.452 ಟಿಎಂಸಿ ಸಾಮರ್ಥ್ಯದ ಡ್ಯಾಂನಲ್ಲಿ ಕೇವಲ 11.602 ಟಿಎಂಸಿ ನೀರು ಸಂಗ್ರಹವಾಗಿದೆ.

ಇದನ್ನೂ ಓದಿ‘ಸೋಲಿನಲ್ಲಿ ನೋವು ಇರುತ್ತದೆ, ಆದರೆ..’ RCB ಸೋತ ಬಗ್ಗೆ ಎಬಿಡಿ ಹೇಳಿದ್ದೇನು..?

ಇಂದಿನ ಕೆಆರ್‌ಎಸ್ ನೀರಿನ ಮಟ್ಟ

  • ಗರಿಷ್ಠ ಮಟ್ಟ-124.80 ಅಡಿ
  • ಇಂದಿನ ಮಟ್ಟ-81.80 ಅಡಿ
  • ಗರಿಷ್ಠ ಸಾಂದ್ರತೆ- 49.452 ಟಿಎಂಸಿ
  • ಇಂದಿನ ಸಾಂದ್ರತೆ- 11.602 ಟಿಎಂಸಿ
  • ಒಳ ಹರಿವು- 2509 ಕ್ಯೂಸೆಕ್
  • ಹೊರ ಹರಿವು- 525 ಕ್ಯೂಸೆಕ್
Advertisment

ಇತ್ತ ಮೈಸೂರು ಜಿಲ್ಲೆಯಲ್ಲೂ ಉತ್ತಮ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ರೈತರಲ್ಲಿ ಮೊಗದಲ್ಲಿ ಮಂದಹಾಸ ಮೋಡಿದೆ. ನಂಜನಗೂಡು ತಾಲ್ಲೂಕಿನ ಈಶ್ವರಗೌಡನಹಳ್ಳಿ ಗ್ರಾಮದಲ್ಲಿ ತುಂಬಿದ ಕೆರೆಗೆ ಬಾಗಿನ ಅರ್ಪಣೆ ಮಾಡಲಾಗಿದೆ. ಧಾರಾಕಾರ ಮಳೆಗೆ ಕೆರೆ ಸಂಪೂರ್ಣ ಭರ್ತಿಯಾಗಿದೆ.

ಇದನ್ನೂ ಓದಿ:ಕರ್ನಾಟಕದಿಂದ ತಿರುಪತಿಗೆ ಹೊರಟಿದ್ದ ಕಾರು ಭೀಕರ ಅಪಘಾತ.. ನಾಲ್ವರು ಸಾವು

ಗ್ರಾಮಸ್ಥರು ಭರ್ತಿಯಾದ ಕೆರೆಗೆ ಬಾಗಿನ ಅರ್ಪಿಸಿ ಪೂಜೆ ಸಲ್ಲಿಸಿದ್ದಾರೆ. ಕಳೆದ ಮೂರ್ನಾಲ್ಕು ತಿಂಗಳಿಂದ ಬಿಸಿಲಿನ ತಾಪಕ್ಕೆ ಗ್ರಾಮಸ್ಥರು ಕಂಗೆಟ್ಟಿದ್ದಾರೆ. ಜನ-ಜಾನುವಾರುಗಳಿಗೆ ನೀರಿಲ್ಲದೇ ಪರದಾಡುವ ಪರಿಸ್ಥಿತಿ ಉಂಟಾಗಿದೆ. ಇದೀಗ ಉತ್ತಮ ಮಳೆಯಿಂದ ಗ್ರಾಮದ ಕೆರೆ ಭರ್ತಿಯಾಗಿದೆ. ಉತ್ತಮ ಮಳೆಯಿಂದ ರೈತರಲ್ಲಿ ಮಂದಹಾಸ ಮೂಡಿದ್ದು, ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ.

Advertisment

ಇದನ್ನೂ ಓದಿ:ಆರ್​ಸಿಬಿಯಲ್ಲಿ ಕಾರ್ತಿಕ್​​ಗೆ ಮಹತ್ವದ ಜವಾಬ್ದಾರಿ..? ಕುತೂಹಲ ಮೂಡಿಸಿದ RCB ಮುಖ್ಯ ಕೋಚ್ ನೀಡಿದ ಹೇಳಿಕೆ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment