/newsfirstlive-kannada/media/post_attachments/wp-content/uploads/2024/07/krs-2.jpg)
ಕರ್ನಾಟಕ ಹಾಗೂ ನೆರೆಯ ರಾಜ್ಯಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಜಲಾಶಯಗಳು ಭರ್ತಿ ಆಗುತ್ತಿವೆ. ಅಂತೆಯೇ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಅಬ್ಬರ ಮುಂದುವರಿದ ಹಿನ್ನೆಲೆಯಲ್ಲಿ ಕೆಆರ್‌ಎಸ್ ಡ್ಯಾಂಗೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.
ಖುಷಿಯ ವಿಚಾರ ಏನೆಂದರೆ ಎರಡು ದಿನದಲ್ಲಿ 6 ಅಡಿ ನೀರು ಭರ್ತಿ ಆಗಿದೆ. ಆ ಮೂಲಕ ಒಳಹರಿವಿನಲ್ಲಿ 26,424 ಕ್ಯೂಸೆಕ್ ನೀರು ಏರಿಕೆ ಕಂಡಿದೆ. ಡ್ಯಾಂನಲ್ಲಿ ನೀರಿನ ಮೊಟ್ಟ ಮೊನ್ನೆ 89 ಅಡಿ ಇತ್ತು. ನಿನ್ನೆ ಅಂತ್ಯದ ವೇಳೆಗೆ ಅದು 92 ಅಡಿಗೆ ಏರಿಕೆ ಕಂಡಿದೆ. ಇದೀಗದ ಅದರ ಮೊಟ್ಟ 95.35 ಅಡಿಗೆ ಏರಿಕೆ ಆಗಿದೆ.
ಇದನ್ನೂ ಓದಿ: ಅಬ್ದುಲ್ ರಹೀಮಾನ್ ಪ್ರಕರಣ.. ಪೊಲೀಸ್ ವರಿಷ್ಠಾಧಿಕಾರಿ ನೀಡಿದ ಮಾಹಿತಿ ಏನು..?
ಕೆಆರ್‌ಎಸ್ ಡ್ಯಾಂ ನೀರಿನ ಮಟ್ಟ
- ಗರಿಷ್ಠ ಮಟ್ಟ: 124.80 ಅಡಿ
- ಇಂದಿನ ಮಟ್ಟ: 95.35 ಅಡಿ
- ಗರಿಷ್ಠ ಸಾಮರ್ಥ್ಯ: 49.452 ಟಿಎಂಸಿ
- ಇಂದಿನ ಸಾಮರ್ಥ್ಯ: 19.382 ಟಿಎಂಸಿ
- ಒಳ ಹರಿವು: 26,424 ಕ್ಯೂಸೆಕ್
- ಹೊರ ಹರಿವು: 579 ಕ್ಯೂಸೆಕ್
ಇನ್ನು, ಜಿಲ್ಲೆಯ ಮಲೆನಾಡು ಭಾಗ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಹೇಮಾವತಿ ನದಿಗೆ ಹೆಚ್ಚಿನ ನೀರು ಹರಿದು ಬಂದಿದೆ. ಒಂದೇ ದಿನಕ್ಕೆ 4,293 ಕ್ಯೂಸೆಕ್ ಒಳಹರಿವು ಹೆಚ್ಚಳವಾಗಿದೆ. 37.103 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಹೇಮಾವತಿ ಜಲಾಶಯದಲ್ಲಿ ಸದ್ಯ 22.478 ಟಿಎಂಸಿ ನೀರು ಸಂಗ್ರಹ ಆಗಿದೆ. 22105 ಕ್ಯೂಸೆಕ್ ಒಳಹರಿವು ಇದ್ದು, 3,225 ಕ್ಯೂಸೆಕ್ ಹೊರಹರಿವು ಇದೆ. ಹೇಮಾವತಿ ಜಲಾಶಯದ ಗರಿಷ್ಠ ಮಟ್ಟ 2922.00 ಅಡಿಗಳಾಗಿದೆ.
ಇದನ್ನೂ ಓದಿ: ಮಂಗಳೂರಲ್ಲಿ ಮತ್ತೆ ಹರಿದ ನೆತ್ತರು.. ತಲ್ವಾರ್ನಿಂದ ಕೊಚ್ಚಿ ಅಬ್ದುಲ್ ರಹಿಮಾನ್ನ ಭೀಕರ ಹತ್ಯೆ
ಕೇರಳದ ವೈನಾಡಿನಲ್ಲಿ ಮಳೆ ಹೆಚ್ಚಾಗಿರೋ ಹಿನ್ನೆಲೆಯಲ್ಲಿ ಕಬಿನಿ ಡ್ಯಾಂ ನೀರಿನ ಮಟ್ಟದಲ್ಲೂ ಏರಿಕೆ ಕಂಡಿದೆ. ನೆನ್ನೆ ಸಂಜೆ ವೇಳೆಗೆ 67.50 ಅಡಿಯಿದ್ದ ನೀರು, ಇಂದು ಬೆಳಗ್ಗೆ ವೇಳೆಗೆ 72.80 ಅಡಿಗೆ ಏರಿಕೆ ಆಗಿದೆ. ಕಬಿನಿ ಜಲಾಶಯದಲ್ಲಿ 23,500 ಸಾವಿರ ಕ್ಯೂಸೆಕ್ ಒಳ ಹರಿವು ಇದೆ.
84 ಅಡಿ ಸಾಮರ್ಥ್ಯದ ಜಲಾಶಯದಲ್ಲಿ 71.80 ಅಡಿ ನೀರು ಸಂಗ್ರಹವಾಗಿದೆ. ಒಟ್ಟು 19.52 ಟಿಎಂಸಿ ನೀರನ್ನ ಸಂಗ್ರಹಿಸುವ ಸಾಮರ್ಥ್ಯ ಕಬಿನಿ ಡ್ಯಾಂ ಹೊಂದಿದೆ. ವರ್ಷಕ್ಕೆ ಎರೆಡು ಬಾರಿ ತುಂಬುವ ರಾಜ್ಯದ ಏಕೈಕ ಜಲಾಶಯ ಇದಾಗಿದೆ. ಇದು ಮೈಸೂರು, ಬೆಂಗಳೂರು, ಚಾಮರಾಜನಗರ ಜಿಲ್ಲೆಗೆ ನೀರನ್ನ ಪೂರೈಸುತ್ತದೆ.
ಇದನ್ನೂ ಓದಿ: ಕನ್ನಡ ಭಾಷೆ ಬಗ್ಗೆ ನಾಲಿಗೆ ಹರಿಬಿಟ್ಟಿರುವ ಕಮಲ್ ಹಾಸನ್ ವಿರುದ್ಧ ಭುಗಿಲೆದ್ದ ಆಕ್ರೋಶ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ