Advertisment

ರಾಜ್ಯದ ಜಿಲ್ಲೆಗಳಲ್ಲಿ ವರುಣಾರ್ಭಟ.. ಮನೆ ಮೇಲೆ ಮರ ಬಿದ್ದು ಮಹಿಳೆ ಗಂಭೀರ; ಇಂದು ಮಳೆಯ ಎಚ್ಚರಿಕೆ?

author-image
Bheemappa
Updated On
ರಾಜ್ಯದ ಜಿಲ್ಲೆಗಳಲ್ಲಿ ವರುಣಾರ್ಭಟ.. ಮನೆ ಮೇಲೆ ಮರ ಬಿದ್ದು ಮಹಿಳೆ ಗಂಭೀರ; ಇಂದು ಮಳೆಯ ಎಚ್ಚರಿಕೆ?
Advertisment
  • ಮಳೆರಾಯನ ಆರ್ಭಟಕ್ಕೆ ಸುಸ್ತಾದ ಬೀದಿ ಬದಿ ವ್ಯಾಪಾರಸ್ಥರು, ಜನರು
  • ನಗರದ ಹಲವು ರಸ್ತೆಗಳ ಮೇಲೆ ಮಳೆ ನೀರು ನದಿಯಂತೆ‌ ಹರಿಯುತ್ತಿದೆ
  • ಮಳೆಯಿಂದ ರೈತರಿಗೆ ಖುಷಿ.. ಪಾದಚಾರಿಗಳು, ಸವಾರರು ಪರದಾಟ

ರಾಜ್ಯದ ಕರಾವಳಿ ಮತ್ತು ಉತ್ತರ ಒಳನಾಡಿಲ್ಲಿ ನೈಋುತ್ಯ ಮುಂಗಾರು ಚುರುಕಾಗಿದ್ದು, ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿದೆ. ಬತ್ತಿ ಹೋಗಿದ್ದ ನದಿಗಳಿಗೆ ಜೀವ ಬಂದಿದೆ. ಕೆಲವರು ಸಂತಸ ಪಡುತ್ತಿದ್ರೆ ಇನ್ನೂ ಕೆಲವರು ಸಂಕಟ ಅನುಭವಿಸುತ್ತಿದ್ದಾರೆ. ಈ ಕುರಿತ ಡೀಟೇಲ್ಸ್​ ಇಲ್ಲಿದೆ.

Advertisment

ವಿಜಯನಗರ ಜಿಲ್ಲೆಯಲ್ಲಿ ಮುಂದುವರೆದ ಮಳೆ ಅಬ್ಬರ

ವಿಜಯನಗರ ಜಿಲ್ಲೆಯಲ್ಲಿ ಮುಂದುವರೆದ ಮಳೆರಾಯನ ಅಬ್ಬರ ಮುಂದುವರೆದಿದೆ. ಜಿಲ್ಲಾ ಕೇಂದ್ರ ಹೊಸಪೇಟೆಯ ಸುತ್ತಮುತ್ತಲಿನ ಏರಿಯಾಗಳಾದ ಹಂಪಿ, ಕಮಲಾಪೂರ, ಚಿತ್ತವಾಡಗಿ, ಶಾನಭಾಗ ಸರ್ಕಲ್ ಸೇರಿ ಹಲವು ಕಡೆ ಉತ್ತಮ ಮಳೆಯಾಗಿದೆ. ಕಂಟಿನ್ಯೂ ಮಳೆ ಬತ್ತಿರೋದ್ರಿಂದ ರೈತರು ಖುಷಿಪಟ್ರೆ.. ಪಾದಚಾರಿಗಳು.. ವಾಹನ ಸವಾರರು ಪರದಾಡಿದ್ರು.

publive-image

ಮರ ಬಿದ್ದು ಗಂಭೀರವಾಗಿ ಗಾಯಗೊಂಡ ಮಹಿಳೆ

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನಲ್ಲಿ ನಿರಂತರ ಮಲೆಯಾಗ್ತಿದೆ. ತಾಲೂಕಿನ ಹತ್ತಿಕುಡಿಗೆ ಗ್ರಾಮದಲ್ಲಿ ರತ್ನಮ್ಮ ಎನ್ನುವರು ಕೂಲಿ ಕೆಲಸ ಮುಗಿಸಿ ಮನೆಗೆ ಅಗಮಿಸುವ ವೇಳೆ ಮನೆಯ ಮುಂಭಾಗದಲ್ಲಿದ್ದ ಬೃಹತ್​ ಮರ ಧರೆಗುರುಳಿದೆ. ಮರ ಬಿದ್ದ ಹಿನ್ನೆಲೆ ಮನೆಗೆ ಸಂಪೂರ್ಣ ಹಾನಿಯಾಗಿದ್ದು, ರತ್ನಮ್ಮಗೂ ಗಾಯಗಳಾಗಿದೆ. ರತ್ನಮ್ಮಗೆ ಕಳಸ ಅಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಮಂಗಳೂರಿಗೆ ರವಾನಿಸಲಾಗಿದೆ.

ಬಳ್ಳಾರಿಯಲ್ಲಿ ಮಳೆ, ಬಿತ್ತನೆ ಮಾಡಿದ ರೈತರು ಫುಲ್ ಖುಷ್​

ಬಳ್ಳಾರಿ ನಗರದಲ್ಲಿ ಸೇರಿದಂತೆ ಗ್ರಾಮೀಣ ಭಾಗಗಳಿಗೂ ವರುಣನ ಆಗಮನವಾಗಿದೆ. ನಗರದ ಹಲವು ರಸ್ತೆಗಳ ಮೇಲೆ ಮಳೆ ನೀರು ನದಿಯಂತೆ‌ ಹರಿಯುತ್ತಿದ್ದು, ಪಾರ್ಕಿಂಗ್ ಜಾಗದಿಂದ ವಾಹನ ತೆಗೆಯಲು ಸವಾರರು ಹರಸಾಹಸ ಪಟ್ಟಿದ್ದಾರೆ. ಶಾಲಾ ಆವರಣಕ್ಕೆ ಮಳೆ ನೀರು ನಗ್ಗಿದ ಕಾರಣ ಶಾಲಾ ವಿದ್ಯಾರ್ಥಿ ಓಡಾಟಕ್ಕೂ ಪರದಾಡಿದ್ದಾರೆ.

Advertisment

ಇದನ್ನೂ ಓದಿ:ಸಿನಿಮಾ ಇಂಡಸ್ಟ್ರಿಯಿಂದ ಬ್ಯಾನ್​ ಆಗ್ತಾರಾ ದರ್ಶನ್.. ರಾಕ್​ಲೈನ್ ವೆಂಕಟೇಶ್ ಹೇಳುವುದು ಏನು?

publive-image

ಕೊಪ್ಪಳ ಜಿಲ್ಲೆಯಾದ್ಯಂತ ಮುಂದುವರೆದ ವರುಣನ ಅಬ್ಬರ

ವರುಣನ ಅಬ್ಬರಕ್ಕೆ ಕೊಪ್ಪಳ ನಗರದ ಕೇಂದ್ರಿಯ ಬಸ್ ನಿಲ್ದಾಣ, ವಾಣಿಜ್ಯ ಮಳಿಗೆಗಳಿಗೆ, 26 ನೇ ವಾರ್ಡಿನಲ್ಲಿ ಮನೆಗಳಿಗೆ ಸೇರಿದಂತೆ ಹಲವು ಬಡಾವಣೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿ ಮಾಡಿದೆ. ಮಳೆರಾಯನ ಆರ್ಭಟಕ್ಕೆ ಬೀದಿ ಹಾಗೂ ರಸ್ತೆ ಬದಿ ವ್ಯಾಪಾರಸ್ಥರು ತತ್ತರಿಸಿದ್ದಾರೆ. ಇನ್ನೂ ಮಳೆ ನೀರಿನ ಜೊತೆ ಚರಂಡಿ ನೀರು ಹರಿಯುತ್ತಿರುವುದರ ಬಗ್ಗೆ ಸ್ಥಳೀಯರು ಬೇಸರ ವ್ಯಕ್ತಿಪಡಿಸಿದ್ದಾರೆ. ಇತ್ತ ಹುಲಿಗೆಮ್ಮ ದೇವಸ್ಥಾನ‌ದ ಜಾತ್ರೆಯಲ್ಲೂ ಜನಜೀವನ ಅಸ್ತವ್ಯಸ್ತವಾಗಿದೆ.

ನಿರಂತರ ಸುರಿಯುತ್ತಿರೋ ಮಳೆ, ಕೆಸರು ಗದ್ದೆಯಂತಾದ ರಸ್ತೆಗಳು

ನಿರಂತರವಾಗಿ ಸುರಿಯುತ್ತಿರೋ ಮಳೆಯಿಂದಾಗಿ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಕೊಂಡಗುಳಿ ಗ್ರಾಮದಲ್ಲಿ ರಸ್ತೆಗಳು ಕೆಸರು ಗದ್ದೆಯಂತಾಗಿ ಜನರು ಓಡಾಡುವುದಕ್ಕೆ ಹರಸಾಹಸ ಪಡುತ್ತಿದ್ದಾರೆ. ಮಳೆಗಾಲ ಬಂದರೆ ಸಾಕು ರಸ್ತೆಗಳೆಲ್ಲ ಕೆಸರು ಗದ್ದೆಯಂಥಾಗಿ ಬಿಡುತ್ತವೆ. ಈ ರಸ್ತೆಯಲ್ಲಿಯೇ ಮಕ್ಕಳು ಶಾಲೆಗೆ ಹೋಗಬೇಕಾದ ಪರಿಸ್ಥಿತಿಯಿದೆ. ಪಂಚಾಯತ್ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರೋ ನಡೆಗೆ ಗ್ರಾಮಸ್ತರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment