/newsfirstlive-kannada/media/post_attachments/wp-content/uploads/2025/07/HEART_ATTACK.jpg)
ಮನುಷ್ಯನ ಹೃದಯ ಬಡಿತ ಸಾಮಾನ್ಯ. ಆದ್ರೆ ಅದು ಅಸಹಜ ಆದಾಗಲೇ ಅಯೋಮಯ ಆಗಿಬಿಡುತ್ತೆ. ರಾಜ್ಯದಲ್ಲಿ ಹೃದಯಗಳ ಸಾವಿನ ಮೆರವಣಿಗೆ ನಿಲ್ಲದ ಪಯಣ. ಬಡವ-ಬಲ್ಲಿದ, ಲಿಂಗ ಭೇದವಿಲ್ಲದೆ ರೈತರು, ಮಹಿಳೆಯರು ಸೇರಿ ಎಳೆಯ ಮಕ್ಕಳ ಜೀವವನ್ನು ಬಲಿ ಹಾಕ್ತಿದೆ. ಇವತ್ತು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 8 ಮಂದಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಇದು ಹೃದಯಗಳ ಸಾವಿನ ಯಾತ್ರೆ. ಕುಂತಲ್ಲಿ, ನಿಂತಲ್ಲಿ, ನಿದ್ದೆಯಲ್ಲಿರುವಾಗಲೇ, ವಾಕಿಂಗ್ ಮಾಡುತ್ತಿರುವಾಗಲೇ, ಬಸ್ನಲ್ಲಿ ಹೋಗುವಾಗಲೇ ಹೃದಯ ತಲ್ಲಣಿಸ್ತಿದೆ. ಆಹಾರ ಪದ್ಧತಿಯಲ್ಲಿ ಬದಲಾವಣೆ, ಪರಿಸರ ಮಾಲಿನ್ಯ, ಬದಲಾದ ಜೀವನಶೈಲಿ ಹೃದ್ರೋಗ ಹೆಚ್ಚುವಂತೆ ಮಾಡಿದ್ದು ಉಸಿರು ಹಿಂಡುತ್ತಿದೆ.
[caption id="attachment_131036" align="alignnone" width="800"] ಸಂಪಾದಕ ಕೆ.ಬಿ ಗಣಪತಿ[/caption]
ಬಸ್ನಲ್ಲಿ ಹೋಗುತ್ತಿರುವಾಗಲೇ ಬದುಕು ಬಲಿ!
ರಾಜ್ಯದಲ್ಲಿ ಹೃದಯಾಘಾತಗಳ ಸಾವಿನ ಯಾತ್ರೆಗೆ ಬ್ರೇಕ್ ಇಲ್ಲದಂತಾಗಿದೆ. ಇವತ್ತು 4 ಜಿಲ್ಲೆಗಳಲ್ಲಿ 50 ವರ್ಷ ಒಳಗಿನವರನ್ನೇ ಹಾರ್ಟ್ ಅಟ್ಯಾಕ್ ಬಲಿ ಹಾಕಿದೆ. ಮೈಸೂರಲ್ಲಿ ಬಸ್ನಲ್ಲಿ ತೆರಳುತ್ತಿದ್ದ ವೇಳೆಯೇ 44 ವರ್ಷದ ಅರುಣ್ ಎಂಬುವರು ಹೃದಯಾಘಾತಕ್ಕೆ ಬಲಿಯಾಗಿದ್ಧಾರೆ. ಮೂಲತಃ ಮಂಡ್ಯದ ಕಿಲ್ಹಾರ ಗ್ರಾಮದ ನಿವಾಸಿ ಅರುಣ್, ಕುಟುಂಬದೊಂದಿಗೆ ಮೈಸೂರಿನಲ್ಲಿ ವಾಸವಿದ್ದರು. ಟಿ ನರಸೀಪುರ ತಾಲ್ಲೂಕು ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿದ್ದ ಅರುಣ್ ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಎದೆನೋವು ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ಕರೆದೋಯ್ಯುವಾಗ ಮಾರ್ಗ ಮಧ್ಯೆ ಅರುಣ್ ಉಸಿರು ನಿಂತಿದೆ.
ಹಿರಿಯ ಪತ್ರಕರ್ತ ಹೃದಯಾಘಾತದಿಂದ ಸಾವು
ಮತ್ತೊಂದೆಡೆ ಮೈಸೂರು ಜಿಲ್ಲೆಯ ಹಿರಿಯ ಪತ್ರಕರ್ತ, ಸಂಪಾದಕ ಕೆ.ಬಿ ಗಣಪತಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕೆ.ಬಿ ಗಣಪತಿ ಸ್ಟಾರ್ ಆಫ್ ಮೈಸೂರು ಹಾಗೂ ಮೈಸೂರು ಮಿತ್ರ ಪತ್ರಿಕೆ ಸಂಪಾದಕರಾಗಿದ್ದರು. ಕಳೆದ 50 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಅಪಾರ ಸೇವೆ ಸಲ್ಲಿಸಿದ್ದದ್ದ ಗಣಪತಿ ಇಂದು ಹಠಾತ್ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಹಿರಿಯ ಪತ್ರಕರ್ತ ಗಣಪತಿ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.
ರಾಯಚೂರು ಮೂಲದ ಬಸವರಾಜ್ ಬೆಂಗಳೂರಲ್ಲಿ ನಿಧನ
ಮಾರಿ ಕಣ್ಣು ಹೋರಿ ಮ್ಯಾಗೆ ಹಾಡಿಗೆ ಡ್ಯಾನ್ಸ್ ಮಾಡುವಾಗಲೇ ಹೃದಯಘಾತ ಅಪ್ಪಳಿಸಿದೆ. ಬೆಂಗಳೂರಲ್ಲಿ ವಾಸವಿದ್ದ ರಾಯಚೂರು ಮೂಲದ 46 ವರ್ಷದ ಬಸವರಾಜ್ ಸಾವಿನ ಮನೆ ಸೇರಿದ್ದಾರೆ. ಡ್ಯಾನ್ಸ್ ಮಾಡುವಾಗಲೇ ಜವರಾಯ ಪ್ರಾಣ ಕಸಿದುಕೊಂಡಿದ್ದಾನೆ.
[caption id="attachment_131125" align="alignnone" width="800"] ಬೆಂಗಳೂರಿನ ಯುವಕ ರಾಹುಲ್[/caption]
ವಾಕ್ ಮಾಡುವಾಗಲೇ ವಕ್ಕರಿಸಿದ ಹೃದಯ ಭೂತ!
ದಾವಣಗೆರೆಯಲ್ಲಿ ಶಕ್ತಿನಗರದ ನಿವಾಸಿ ಅನಿಲ್ ಕುಮಾರ್ ವಾಕಿಂಗ್ ಮಾಡುವಾಗ ಹಾರ್ಟ್ ಅಟ್ಯಾಕ್‌ಗೆ ಬಲಿಯಾಗಿದ್ದಾರೆ. ಎಸ್ ಎಸ್ ರಸ್ತೆ ಪಕ್ಕದ ಡಿಆರ್ ಸರ್ಕಲ್ ದಾರಿಯಲ್ಲಿ ವಾಕ್ ಮಾಡುವ ದುರಂತ ಸಂಭವಿಸಿದ್ದು ಪಕ್ಕದ ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿದೆ.
ಇನ್ನು, ಚಿಕ್ಕಮಗಳೂರಿನ ಕರ್ತಿಕೆರೆ ಗ್ರಾಮದ 48 ವರ್ಷದ ದ್ರಾಕ್ಷಾಯಿಣಿ ಹಾರ್ಟ್ ಅಟ್ಯಾಕ್‌ಗೆ ಬಲಿಯಾಗಿದ್ದಾರೆ. 15 ದಿನಗಳ ಹಿಂದೆ ಬೈಕ್ ಡಿಕ್ಕಿಯಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ರು. ಇವತ್ತು ವಾಶ್ ರೂಂಗೆ ಹೋಗುವಾಗ ಹೃದಯಾಘಾತದಿಂದ ಕುಸಿದು ಸಾವನ್ನಪ್ಪಿದ್ದಾರೆ.
ಬೆಂಗಳೂರಿನ ಯುವಕ ಚಿಕ್ಕಮಗಳೂರಿನಲ್ಲಿ ನಿಧನ
ಬೆಂಗಳೂರಿನ ಯುವಕ ರಾಹುಲ್ (30) ಹಾರ್ಟ್ ಅಟ್ಯಾಕ್ನಿಂದ ನಿಧನರಾಗಿದ್ದಾರೆ. ಕಾಫಿನಾಡು ಚಿಕ್ಕಮಗಳೂರಿನ ಪ್ರವಾಸಿ ತಾಣಗಳ ಸೌಂದರ್ಯ ಸವಿಯಲು ಎಂದು ಸಿಲಿಕಾನ್ ಸಿಟಿಯಿಂದ ಬಂದಿದ್ದನು. ಕಳೆದ 2 ದಿನಗಳ ಹಿಂದೆ ಚಿಕ್ಕಮಗಳೂರಿಗೆ ಬಂದು ತಾಲೂಕಿನ ನಲ್ಲೂರು ಗ್ರಾಮದ ಖಾಸಗಿ ಹೋಂ ಸ್ಟೇಯಲ್ಲಿ ತಂಗಿದ್ದ. ಯುವಕ ಮೂರ್ಛೆ ರೋಗದಿಂದ ಮುಂಜಾನೆಯಿಂದ ರೂಮಿನಿಂದ ಹೊರಗೆ ಬಂದಿರಲಿಲ್ಲ. ಹೀಗಾಗಿ ಆಸ್ಪತ್ರೆಗೆ ದಾಖಲಿಸಬೇಕು ಎಂದು ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ ಎದೆನೋವು ಕಾಣಿಸಿದ್ದು ಹೃದಯಘಾತದಿಂದ ನಿಧನ ಹೊಂದಿದ್ದಾನೆ.
ಇದನ್ನೂ ಓದಿ: ಹೊಸ ಸಿನಿಮಾ ಶೂಟಿಂಗ್.. ಕಾರು ಸ್ಟಂಟ್ ಮಾಡುವಾಗ ಉಸಿರು ಚೆಲ್ಲಿದ ಸಾಹಸ ಕಲಾವಿದ ರಾಜು
[caption id="attachment_131107" align="alignnone" width="800"] ಚಂದ್ರಕಾಂತ್ ವಡ್ಡಿಗೇರಿ[/caption]
ಶಾಸಕ ದೊಡ್ಡನಗೌಡ ಆಪ್ತ ಸಹಾಯಕ ಸಾವು
ಕೊಪ್ಪಳದ ಕುಷ್ಟಗಿಯಲ್ಲಿ ಶಾಸಕ ದೊಡ್ಡನಗೌಡ ಪಾಟೀಲ್ ಆಪ್ತ ಸಹಾಯಕ 46 ವರ್ಷದ ಚಂದ್ರಕಾಂತ್ ವಡ್ಡಿಗೇರಿ ಹೃದಯಾಘಾತಕ್ಕೆ ಆಹುತಿಯಾಗಿದ್ದಾರೆ. ಪುರಸಭೆಯ ಮಾಜಿ ಸದಸ್ಯರಾಗಿದ್ದ ವಡ್ಡಿಗೇರಿ ಕಳೆದ 20 ವರ್ಷಗಳಿಂದ ಶಾಸಕರ ಬಳಿ ಪಿಎ ಆಗಿ ಕೆಲಸ ಮಾಡ್ತಿದ್ದರು.
'ಒಂದು ವಿಶ್ವ, ಒಂದು ಕುಟುಂಬ ಒಂದು ಹೃದಯ’ ಇದು ವಿಶ್ವ ಹೃದಯ ದಿನಾಚರಣೆಯ ಘೋಷವಾಕ್ಯ. ಆದ್ರೆ, ಹೃದಯದ ಬಗ್ಗೆ ಮಾಯವಾಗಿರೋ ಕಾಳಜಿಯಿಂದ ಹೃದಯ ಬಡಿತದ ಹಿಡಿತ ತಪ್ಪಿ ಆಘಾತ ಸೃಷ್ಟಿಸ್ತಿರೋದು ಮಾತ್ರ ದೃರದುಷ್ಟಕರ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ