‘ಕರ್ನಾಟಕ ನೀರು ಬಿಡದಿದ್ರೆ ಇಲಿಗಳನ್ನ ತಿನ್ನಬೇಕಾಗುತ್ತೆ’- ಕಾವೇರಿಗಾಗಿ ತಮಿಳುನಾಡು ರೈತರ ಪ್ರೊಟೆಸ್ಟ್

author-image
admin
Updated On
Breaking News: ವಿರೋಧದ  ನಡುವೆಯೂ ಮತ್ತೆ ತಮಿಳುನಾಡಿಗೆ 3000 ಕ್ಯೂಸೆಕ್​​ ನೀರು ಬಿಡಲು ಆದೇಶ
Advertisment
  • ಕರ್ನಾಟಕ ಸರ್ಕಾರದ ವಿರುದ್ಧ ತಮಿಳುನಾಡು ರೈತರ ಆಕ್ರೋಶ
  • ನಮಗೆ ಇಲಿಗಳನ್ನು ಹಿಡಿದು ತಿಂದು ಬದುಕುವ ಪರಿಸ್ಥಿತಿ ಬರಲಿದೆ
  • ಕಾವೇರಿ ನೀರು ಬಿಡದಿದ್ರೆ ಇಲಿಗಳನ್ನ ತಿಂದು ಪ್ರಾಣ ಬಿಡುತ್ತೇವೆ

ಚೆನ್ನೈ: ತಮಿಳುನಾಡಿಗೆ ಕಾವೇರಿ ನೀರು ಬಿಡೋದನ್ನ ವಿರೋಧಿಸಿ ಕರ್ನಾಟಕದಲ್ಲಿ ಉಗ್ರ ಹೋರಾಟಗಳು ನಡೆಯುತ್ತಿದೆ. ದಿನದಿಂದ ದಿನಕ್ಕೆ ಪ್ರತಿಭಟನೆಯ ಕಾವು ತೀವ್ರಗೊಂಡಿದೆ. ಕರ್ನಾಟಕದಂತೆ ತಮಿಳುನಾಡಿನಲ್ಲೂ ಕಾವೇರಿಗಾಗಿ ರೈತರು ಹೋರಾಟ ನಡೆಸುತ್ತಿದ್ದಾರೆ. ತಮಿಳುನಾಡು ರೈತರು ಕರ್ನಾಟಕ ಕಾವೇರಿ ನೀರು ಬಿಡದಿದ್ರೆ ಇಲಿಗಳನ್ನ ತಿಂದು ಪ್ರಾಣ ಬಿಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.

ಸತ್ತ ಇಲಿಗಳನ್ನು ಬಾಯಲ್ಲಿ ಹಿಡಿದು ಪ್ರತಿಭಟನೆ ನಡೆಸಿರೋ ತಮಿಳುನಾಡು ರೈತರು ಕಾವೇರಿ ನೀರು ಬಿಡುವಂತೆ ಕರ್ನಾಟಕಕ್ಕೆ ಒತ್ತಾಯಿಸಿದ್ದಾರೆ. ಪ್ರತಿಭಟನಾಕಾರರು ಕರ್ನಾಟಕ ಕಾವೇರಿ ನೀರು ಬಿಡದೇ ಅನ್ಯಾಯ ಮಾಡದೆ. ಇದರಿಂದ ನಮ್ಮ ಬದುಕು ಸಂಕಷ್ಟಕ್ಕೆ ಸಿಲುಕಲಿದ್ದು, ಇಲಿಗಳನ್ನು ಹಿಡಿದು ತಿಂದು ಬದುಕುವ ಪರಿಸ್ಥಿತಿ ಬರಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿ ರೈತರು ಈ ಪ್ರತಿಭಟನೆ ಮಾಡಿದ್ದು, ಸಾಂಕೇತಿಕವಾಗಿ ಸತ್ತ ಇಲಿಗಳನ್ನು ಬಾಯಲ್ಲಿ ಹಿಡಿದು ಘೋಷಣೆ ಕೂಗಿದ್ದಾರೆ.

publive-image

ಇದನ್ನೂ ಓದಿ: ಕಾವೇರಿ ವಿವಾದ.. ಕಿಡಿ ಹೊತ್ತಿಸಿದ ನಟ ದರ್ಶನ್​​ ಹೇಳಿಕೆ; ಯಾವುದು ಆ ತಮಿಳು ಸಿನಿಮಾ..?

ಕಾವೇರಿಗಾಗಿ ತಮಿಳುನಾಡು ರೈತರು ಸತ್ತ ಇಲಿ ಹಿಡಿದು ಪ್ರತಿಭಟನೆ ಮಾಡಿರೋದು ಇದೇ ಮೊದಲಲ್ಲ. 2017ರಲ್ಲಿ 65 ವರ್ಷದ ಚಿನ್ನಗೊಡಂಗಿ ಪಳನಿಸಾಮಿ ಎಂಬುವವರು ಜೀವಂತ ಇಲಿಯನ್ನು ಬಾಯಲ್ಲಿ ಹಿಡಿದು ಹೋರಾಟ ಮಾಡಿದ್ದರು. 2016ರಲ್ಲಿ 30ಕ್ಕೂ ಹೆಚ್ಚು ತಿರುಚ್ಚಿ ಮೂಲದ ರೈತರು ಸತ್ತ ಇಲಿಗಳನ್ನು ಬಾಯಲ್ಲಿ ಇಟ್ಟುಕೊಂಡು ಕಾವೇರಿಗಾಗಿ ಹೋರಾಟ ನಡೆಸಿದ್ದಾರೆ. ಕರ್ನಾಟಕ ಕಾವೇರಿ ನೀರು ಬಿಡದೆ ನಮ್ಮ ಭತ್ತದ ಬೆಳೆ ಹಾನಿಯಾಗಿದೆ. ಕೂಡಲೇ ನೀರು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಸರ್ಕಾರದ ಗಮನ ಸೆಳೆದಿದ್ದರು. ಇಂದೂ ಕರ್ನಾಟಕದಲ್ಲಿ ಕಾವೇರಿ ಹೋರಾಟ ನಡೆಯುತ್ತಿರುವ ಸಂದರ್ಭದಲ್ಲೇ ತಮಿಳುನಾಡಿನ ರೈತರು ಪ್ರತಿಭಟನೆ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment