/newsfirstlive-kannada/media/post_attachments/wp-content/uploads/2025/05/CM_SIDDARAMAIAH_SCHOOL.jpg)
ರಾಜ್ಯದಲ್ಲಿ ಸದ್ಯ ದ್ವಿ ಭಾಷಾ ಸೂತ್ರದ ಕಿಚ್ಚು ಜೋರಾಗಿದೆ. ಮಕ್ಕಳ ಕಲಿಕಾ ಬಲವರ್ಧನೆಗೆ ಉತ್ತಮ ಅಂಕಕ್ಕೆ ದ್ವಿ ಭಾಷಾ ಸೂತ್ರ ಜಾರಿಗೆ ಪಟ್ಟು ಹೆಚ್ಚಾಗಿದೆ. ಈ ಬಗ್ಗೆ ಶಿಕ್ಷಣ ಇಲಾಖೆ ನಿಲುವೇನು, ದ್ವಿಭಾಷಾ ಸೂತ್ರ ಜಾರಿಯಾಗುತ್ತಾ ಈ ಬಗ್ಗೆ ಡಿಟೇಲ್ಸ್ ಇಲ್ಲಿದೆ..!
ಮಧು ಬಂಗಾರಪ್ಪ ಶಿಕ್ಷಣ ಸಚಿವರಾಗಿ ಜವಾಬ್ದಾರಿ ವಹಿಸಿ ಕೊಂಡಾಗಿನಿಂದ ಒಂದಿಲ್ಲೊಂದು ಬದಲಾವಣೆ ಮತ್ತು ಹೊಸತನ ಶಿಕ್ಷಣ ಇಲಾಖೆಯಲ್ಲಿ ಆಗುತ್ತಲೇ ಇದೆ. ನಕಲು ತಡೆಗೆ ವೆಬ್ ಕಾಸ್ಟಿಂಗ್ ಆಗಿರಬಹುದು. ಮೂರು -ಮೂರು ಪರೀಕ್ಷೆ ಪರಿಚಯ ಮಾಡಿ ಪರೀಕ್ಷಾ ಪದ್ಧತಿಯಲ್ಲಿ ತಂದ ಬದಲಾವಣೆ ಆಗಿರಬಹುದು. ವಿದ್ಯಾರ್ಥಿಗಳ ಪಾಸಿಂಗ್ ಅಂಕ 35 ರಿಂದ 33ಕ್ಕೆ ಇಳಿಕೆ ಮಾಡಿದ್ದಾಗಿರಬಹುದು. ಹೀಗೆ ಹಲವು ಬದಲಾವಣೆ ತರಲಾಗಿದೆ.
ಸದ್ಯ ಅಂತಹದ್ದೇ ಸಾಲಿಗೆ ಮತ್ತೊಂದು ಐತಿಹಾಸಿಕ ನಿರ್ಧಾರ ಸೇರ್ಪಡೆ ಆಗುವ ಸಾಧ್ಯತೆ ಇದೆ. ರಾಜ್ಯದ ಶೈಕ್ಷಣಿಕ ನೀತಿಯಲ್ಲಿ ಬದಲಾವಣೆ ತರಲಿದ್ದು, ತ್ರಿ ಭಾಷಾ ಸೂತ್ರಕ್ಕೆ ತಿಲಾಂಜಲಿ ಇಡುವ ಸಾಧ್ಯತೆ ದಟ್ಟವಾಗಿದೆ. ರಾಜ್ಯದಲ್ಲಿ ದ್ವಿಭಾಷಾ ಸೂತ್ರ ಜಾರಿಗೆ ಶಿಕ್ಷಣ ಇಲಾಖೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಸ್ಟೇಟ್ ಎಜುಕೇಶನ್ ಪಾಲಿಸಿ ಕಮಿಟಿ ಕೂಡ ಈ ವಿಚಾರದಲ್ಲಿ ಪಾಸಿಟಿವ್ ಆಗಿ ಉತ್ತರಿಸಿದ್ಯಂತೆ. ಸದ್ಯ ಸಿಎಂ ಅಂಗಳದಲ್ಲಿ ದ್ವಿಭಾಷಾ ಸೂತ್ರ ಜಾರಿ ವಿಚಾರದ ಚರ್ಚೆ ನಡೆಯುತ್ತಿದೆ.
ಸರ್ಕಾರ ಮಟ್ಟದಲ್ಲಿ ಸಭೆ ನಡೆಸಿ ಸಿಎಂ ಸೂಚನೆ ಕೊಟ್ಟರೆ ರಾಜ್ಯದಲ್ಲಿ ಮುಂದಿನ ವರ್ಷದಿಂದ ದ್ವಿಭಾಷಾ ಸೂತ್ರ ಜಾರಿಗೆ ಬರುವುದರಲ್ಲಿ ಅನುಮಾನ ಇಲ್ಲ. ಮಕ್ಕಳಿಗೆ ಅನೂಕೂಲ ಆಗುವ ನಿಟ್ಟಿನಲ್ಲಿ ಈ ನಿರ್ಣಯಕ್ಕೆ ಶಿಕ್ಷಣ ಇಲಾಖೆ ಬದ್ಧ ಅನ್ನೋ ಮೂಲಕ ದ್ವಿಭಾಷಾ ಸೂತ್ರದ ಪರ ಶಿಕ್ಷಣ ಸಚಿವರು ಬ್ಯಾಟ್ ಬೀಸಿದ್ದಾರೆ.
ಇದನ್ನೂ ಓದಿ: AI ಸ್ವಯಂಚಾಲಿತ ಕೆಲಸ.. ಹಲವು ಉದ್ಯೋಗಗಳಿಗೆ ಭಾರೀ ಹೊಡೆತ- Amazon CEO
ಏನಿದು ದ್ವಿ ಭಾಷಾ ಸೂತ್ರದ ವಿವಾದ?
ಸದ್ಯ ರಾಜ್ಯ ಪಠ್ಯಕ್ರಮದಲ್ಲಿ ತ್ರಿಭಾಷಾ ಸೂತ್ರ ಜಾರಿಯಾಗಿದೆ. ಕನ್ನಡ, ಇಂಗ್ಲೀಷ್ ಜೊತೆ ಹಿಂದಿಯನ್ನು ಕೂಡ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಇದೊಂದು ಹೆಚ್ಚಿನ ಹೊರೆಯಂತ ತಜ್ಞರು ಅಭಿಪ್ರಾಯ ವ್ಯಕ್ತ ಪಡಿಸಿದ್ದು ಓದಲು ಸಮಯ ಸಿಗದೇ ಪರೀಕ್ಷೆಯಲ್ಲೂ ಕಡಿಮೆ ಅಂಕ ಬರುವ ಸಾಧ್ಯತೆ ಇದೆ. ತಮಿಳುನಾಡು ಹಾಗೂ ಉತ್ತರ ಭಾರತದ ರಾಜ್ಯಗಳಲ್ಲಿ ಕೇವಲ ಎರಡು ಭಾಷಾ ಪಠ್ಯಕ್ರಮ ಇದೆ. 2 ಭಾಷೆಯ ಜೊತೆಗೆ 3 ಕೋರ್ ಸಬ್ಜೆಕ್ಟ್ ಅನ್ನು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಆದ್ರೆ ರಾಜ್ಯದಲ್ಲಿ 3 ಭಾಷೆಯ ಕಲಿಕೆಯಿಂದ ಹೆಚ್ಚಿನ ಹೊರೆ ಎನ್ನಲಾಗಿದೆ. ಇತ್ತೀಚಿಗಷ್ಟೇ ಕಾರ್ಯಕ್ರಮವೊಂದರಲ್ಲಿ ಸಿಎಂ ಸಿದ್ದರಾಮಯ್ಯ ಅವರಿಂದಲೂ ದ್ವಿಭಾಷಾ ಪದ್ದತಿ ಜಾರಿಗೆ ಒಲವು ತೋರಲಾಗಿತ್ತು.
ವಿದ್ಯಾರ್ಥಿಗಳಿಗೆ ಹಿಂದಿ ಹೇರಿಕೆ ಮಾಡದೇ ಮಕ್ಕಳ ವಾರ್ಷಿಕ ಫಲಿತಾಂಶ ಕೂಡ ಇಂಪ್ರೂವ್ ಆಗಬೇಕು ಅನ್ನೋ ನಿಟ್ಟಿನಲ್ಲಿ ರಾಜ್ಯದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ದ್ವಿ ಭಾಷಾ ನೀತಿ ಜಾರಿಗೆ ಬರುವ ಸಾಧ್ಯತೆ ಬಹುತೇಕ ಖಚಿತವಾಗಿದೆ. ಶಿಕ್ಷಣ ಇಲಾಖೆ ಸಮ್ಮತಿ ಸೂಚಿಸಿದ್ದು ಸರ್ಕಾರ ಮಟ್ಟದಲ್ಲಿ ಸಿಎಂ ಏನ್ ತೀರ್ಮಾನ ಮಾಡ್ತಾರೆ ಅಂತ ಕಾದು ನೋಡಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ