/newsfirstlive-kannada/media/post_attachments/wp-content/uploads/2025/03/MADHU-BANGARAPPA-1.jpg)
ಬೆಂಗಳೂರು: ಕೊನೆಗೂ ಶಿಕ್ಷಣ ಇಲಾಖೆ ಪೋಷಕರಿಗೆ ಗುಡ್ನ್ಯೂಸ್ ನೀಡಿದೆ. ಒಂದನೇ ತರಗತಿ ಸೇರ್ಪಡೆ ವಿಚಾರದಲ್ಲಿದ್ದ ವಯೋಮಿತಿ ಗೊಂದಲಕ್ಕೆ ತೆರೆ ಎಳೆಯೋದಾಗಿ ಶಿಕ್ಷಣ ಸಚಿವರು ತಿಳಿಸಿದ್ದಾರೆ. ಈ ಬಗ್ಗೆ ನಿಮ್ಮ ನ್ಯೂಸ್ಫಸ್ಟ್ ನಿರಂತರವಾಗಿ ವರದಿ ಮಾಡಿತ್ತು. ಕೊನೆಗೂ ಸರ್ಕಾರ ಈ ಗೊಂದಲವನ್ನು ಸರಿಪಡಿಸುವ ಬಗ್ಗೆ ಭರವಸೆ ನೀಡಿದೆ.
ಏನಿದು ಗೊಂದಲ..?
ಶಿಕ್ಷಣ ಇಲಾಖೆಯು 2022ರಲ್ಲಿ ಒಂದು ಆದೇಶ ಹೊರಡಿಸಿತ್ತು. ಜೂನ್ 1 ರಿಂದ ಶೈಕ್ಷಣಿಕ ವರ್ಷ ಆರಂಭ ಆಗೋದು ವಾಡಿಕೆ. ಈ ಅವಧಿಯಲ್ಲಿ ಅಂದರೆ ಜೂನ್ 1 ರಿಂದ 1ನೇ ತರಗತಿಗೆ ಅಡ್ಮಿಷನ್ ಮಾಡಿಸಿಕೊಳ್ಳಲು ಮಗುವಿಗೆ 6 ವರ್ಷ ತುಂಬಿರಬೇಕು ಎಂದು ಆದೇಶ ನೀಡಿತ್ತು. ಇದರಿಂದ ಮಗುವಿಗೆ 6 ವರ್ಷ ತುಂಬಲು ಒಂದೆರಡು ದಿನ ಕಡಿಮೆ ಇದ್ದರೂ ಅಡ್ಮಿಷನ್ ಭಾಗ್ಯ ಸಿಗುತ್ತಿರಲಿಲ್ಲ. ಪರಿಣಾಮ ಮುಂದಿನ ಜೂನ್ 1ರವರೆಗೆ ವಿದ್ಯಾರ್ಥಿ ಅಡ್ಮಿಷನ್ಗಾಗಿ ಕಾಯಬೇಕಾಗಿತ್ತು. ಇದು ಮಗುವಿನ ಕಲಿಕೆ ಮೇಲೂ ಹೊಡೆತ ಬೀಳುತ್ತಿತ್ತು. ಜೊತೆಗೆ ಆ ಒಂದು ವರ್ಷ ವೇಸ್ಟ್ ಆಗುತ್ತಿತ್ತು.
ಇದನ್ನೂ ಓದಿ: NHM ನೇಮಕಾತಿ 2025; ಹಾಸನದ ಆರೋಗ್ಯ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ನ್ಯೂಸ್ಫಸ್ಟ್ ವರದಿಯ ಇಂಪ್ಯಾಕ್ಟ್
ಈ ಬಗ್ಗೆ ನಿಮ್ಮ ನ್ಯೂಸ್ಫಸ್ಟ್ ಮಕ್ಕಳ ಪರವಾಗಿ ಧ್ವನಿ ಎತ್ತಿತ್ತು. ವಯೋಮಿತಿ ಗೊಂದಲದ ವಿಚಾರವಾಗಿ ಸತತವಾಗಿ ವರದಿ ಮಾಡಿತ್ತು. ಕೊನೆಗೂ ಒಂದನೇ ತರಗತಿ ವಯೋಮಿತಿ ಗೊಂದಲ ತೆರೆ ಎಳೆಯಲು ಶಿಕ್ಷಣ ಇಲಾಖೆ ಮುಂದಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಅಡ್ಮಿಷನ್ ಆಗುವ ಮಕ್ಕಳ ವಯೋಮಿತಿಯಲ್ಲಿ ರಿಯಾಯಿತಿ ನೀಡೋದು ಪಕ್ಕಾ ಆಗಿದೆ.
ಸಚಿವರ ಭರವಸೆ ಏನು..?
ಮುಂದಿನ ಎರಡ್ಮೂರು ದಿನಗಳ ಒಳಗಾಗಿ ನಿರ್ಧಾರ ಆಗಲಿದೆ. ಇಷ್ಟು ದಿನ ಕೋರ್ಟ್ ವಿಚಾರ. ಮಕ್ಕಳು ಒಂದನೇ ತರಗತಿಗೆ ಅಡ್ಮಿಷನ್ ಪಡೆಯಲು ಆರು ವರ್ಷ ತುಂಬಿರಬೇಕು ಎಂದು ಹೇಳಲಾಗಿತ್ತು. ಈಗ ಕೋರ್ಟ್ ಬಿಟ್ಟು ರಾಜ್ಯ ಸರ್ಕಾರದ ತೀರ್ಮಾನವೇ ಅಂತಿಮ ಅನ್ನೋದು ಕೂಡ ಇದೆ. ಈ ಬಗ್ಗೆ ಯೋಚನೆ ಮಾಡುತ್ತಿದ್ದೇವೆ. ಮಕ್ಕಳಿಗೆ, ಪೋಷಕರಿಗೆ ತೊಂದರೆ ಆಗಬಾರದು. ಅದರಲ್ಲೂ ಯಾವುದೇ ಮಗುವಿಗೆ ವರ್ಷಗಳು ವೇಸ್ಟ್ ಆಗಬಾರದು. ಈ ಸಂಬಂಧ ಎರಡು ದಿನ ಸಭೆ ಮಾಡಿದ್ದೇನೆ. ಮುಂದಿನ ಎರಡ್ಮೂರು ದಿನಗಳ ಒಳಗೆ ಒಳ್ಳೆಯ ತೀರ್ಮಾನ ಮಾಡುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ: ಶಾಕಿಂಗ್ ವಿಚಾರ ಹಂಚಿಕೊಂಡ ನಯನತಾರಾ; ಅಭಿಮಾನಿಗಳಿಗೆ ಕೈಮುಗಿದು ವಿನಂತಿಸಿದ ನಟಿ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ