newsfirstkannada.com

ಗುಡ್ ನ್ಯೂಸ್! ದರ ಕಡಿತದ ಜೊತೆಗೆ ಇಂದಿನಿಂದ ನೂತನ ವಿದ್ಯುತ್ ದರ ಜಾರಿಗೆ

Share :

Published April 1, 2024 at 9:20am

Update April 1, 2024 at 9:23am

    ಕನ್ನಡಿಗರಿಗೆ ಸಿಹಿ ಸುದ್ದಿ.. 15 ವರ್ಷಗಳ ಬಳಿಕ ಇಳಿಕೆ ಕಂಡ ವಿದ್ಯುತ್ ದರ

    ಇಂದಿನಿಂದ ಜಾರಿಗೆ ಬಂದ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಆದೇಶ

    100 ಯುನಿಟ್ ಗಿಂತ ಹೆಚ್ಚು ವಿದ್ಯುತ್​ ಬಳಕೆ ಮಾಡುವ ಗ್ರಾಹಕರು ಓದಲೇಬೇಕಾದ ಸುದ್ದಿ

ಬೆಂಗಳೂರು: ಲೋಕಸಭಾ ಚುನಾವಣೆ ದಿನಾಂಕ ಘೋಷಣೆ ಬೆನ್ನಲ್ಲೇ ಮತ್ತು ಹೊಸ ಹಣಕಾಸು ವರ್ಷದ ಆರಂಭದಲ್ಲಿ ವಿದ್ಯುತ್ ಬಳಕೆದಾರರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಇಂದಿನಿಂದ ಕೆಇಆರ್​ಸಿ  ನೂತನ ವಿದ್ಯುತ್ ದರ ಜಾರಿಗೆ ಬಂದಿದೆ.

ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ವಿದ್ಯುತ್ ದರ ಪರಿಷ್ಕರಣೆ ಪರಿಷ್ಕರಣೆ ಮಾಡಿದ್ದು, ಇಂದಿನಿಂದ ನೂತನ 100 ಯುನಿಟ್ ಗಿಂತ ಹೆಚ್ಚು ಬಳಕೆ ಮಾಡುವ ಗ್ರಾಹಕರಿಗೆ ಯುನಿಟ್ ಗೆ 1ರೂ 10 ಪೈಸೆ ಕಡಿತ ಮಾಡುವುದಾಗಿ ತಿಳಿದಿದೆ.

15 ವರ್ಷಗಳ ಬಳಿಕ ವಿದ್ಯುತ್ ದರ ಇಳಿಕೆ ಕಂಡಿದೆ. 2024-25ನೇ ಸಾಲಿಗೆ ಅನ್ವಯವಾಗುವಂತೆ ಕೆಇಆರ್​ಸಿ ಆದೇಶ ಇಂದಿನಿಂದ ಜಾರಿಗೆ ಬಂದಿದೆ. ಎಲ್ಲಾ ಎಸ್ಕಾಂಗಳಲ್ಲೂ ಏಕರೂಪದ ದರ ಜಾರಿಗೆ ಬಂದಿದೆ. ಮುಂದಿನ ತಿಂಗಳಿನ ಬಿಲ್ ನಲ್ಲಿ ಹೊಸ ದರ ಪರಿಷ್ಕರಣೆಯಾಗಲಿದೆ.

ಇದನ್ನೂ ಓದಿ: LPG Price Cut: ಎಲ್​ಪಿಜಿ ಸಿಲಿಂಡರ್​ ಬೆಲೆ ಇಳಿಕೆ.. ಹೊಸ ದರಗಳು ಹೀಗಿವೆ

ಈ ಹಿಂದೆ ಪ್ರತಿ ಯುನಿಟ್ ಗೆ 0-100ರ ವರೆಗೆ 4.75 ಪೈಸೆ ಇತ್ತು. 100ರ ಮೇಲಿನ ಬಳಕೆಯ ಪ್ರತಿ ಯುನಿಟ್ ಗೆ 7 ರೂಪಾಯಿ ಇತ್ತು. ಇಂದಿನಿಂದ 100 ಯುನಿಟ್ ಮೇಲಿನ ಬಳಕೆ ದಾರರ ಪ್ರತಿ ಯುನಿಟ್ ಗೆ 5.90 ರೂಪಾಯಿ ಮಾತ್ರ ಪಾವತಿ ಮಾಡಬೇಕು. ಈಗಾಗಲೇ 100 ಯುನಿಟ್ ಗಿಂತ ಕಡಿಮೆ ಬಳಕೆ ಮಾಡುವ ಗ್ರಾಹಕರಿಗೆ ಗೃಹಜ್ಯೋತಿ ಯೋಜನೆ ಅಡಿ ಉಚಿತ ವಿದ್ಯುತ್ ನೀಡಲಾಗ್ತಿದೆ. ಈಗ ಸದ್ಯ ಹೊಸ ದರ ಪರಿಷ್ಕರಣೆ 100 ಯುನಿಟ್ ಗಿಂತ ಹೆಚ್ಚು ಬಳಕೆದಾರರಿಗೆ ಸಿಹಿ ಸುದ್ದಿ ಸಿಕ್ಕಿದಂತಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗುಡ್ ನ್ಯೂಸ್! ದರ ಕಡಿತದ ಜೊತೆಗೆ ಇಂದಿನಿಂದ ನೂತನ ವಿದ್ಯುತ್ ದರ ಜಾರಿಗೆ

https://newsfirstlive.com/wp-content/uploads/2023/06/Electricity-Bill-1.jpg

Load More