4, 5, 6, 7ನೇ ತರಗತಿಗೆ ಇಂದು ಪರೀಕ್ಷೆ ಫಿಕ್ಸ್‌.. ಗೊಂದಲಕ್ಕೆ ಖಾಸಗಿ ಶಾಲೆಗಳ ಒಕ್ಕೂಟ ಸ್ಪಷ್ಟನೆ; ಹೇಳಿದ್ದೇನು?

author-image
Veena Gangani
Updated On
4, 5, 6, 7ನೇ ತರಗತಿಗೆ ಇಂದು ಪರೀಕ್ಷೆ ಫಿಕ್ಸ್‌.. ಗೊಂದಲಕ್ಕೆ ಖಾಸಗಿ ಶಾಲೆಗಳ ಒಕ್ಕೂಟ ಸ್ಪಷ್ಟನೆ; ಹೇಳಿದ್ದೇನು?
Advertisment
  • ಖಾಸಗಿ ಶಾಲೆಗಳ ಒಕ್ಕೂಟ ಗೊಂದಲಕ್ಕೆ ತೆರೆ ಎಳೆದ ರುಪ್ಸ ಅಧ್ಯಕ್ಷ  
  • ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆಗೆ ಇಳಿದ ಹೋರಾಟಗಾರರು
  • ಖಾಸಗಿ ಶಾಲೆಗಳ ಒಕ್ಕೂಟ ರುಪ್ಸ ಅಧ್ಯಕ್ಷ ಹಾಲನೂರು ಲೇಪಾಕ್ಷಿ ಏನಂದ್ರು?

ಬೆಂಗಳೂರು: ಶುಕ್ರವಾರದಿಂದ SSLC ಪರೀಕ್ಷೆ ಶುರುವಾಗಿದೆ. ಮತ್ತೊಂದು ಕಡೆ 4, 5, 6 ಮತ್ತು 7ನೇ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುತ್ತಿವೆ. ಈ ಮಧ್ಯೆ ಇಂದು ಕರ್ನಾಟಕ ಬಂದ್​ಗೆ ಕರೆ ನೀಡಲಾಗಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಹೋರಾಟಗಾರರು ಪ್ರತಿಭಟನೆಗೆ ಇಳಿದಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಬಂದ್! ನಾಳೆ ಏನಿರುತ್ತೆ? ಏನಿರಲ್ಲ? ಕನ್ನಡ ಪರ ಸಂಘಟನೆ ಇಟ್ಟ 20 ಬೇಡಿಕೆಗಳು ಏನೇನು?

publive-image

ಹೀಗಾಗಿ ಸಾಕಷ್ಟು ವಿದ್ಯಾರ್ಥಿಗಳು ಕರ್ನಾಟಕ ಬಂದ್​ ಹಿನ್ನಲೆಯಲ್ಲಿ ಪರೀಕ್ಷೆ ಮುಂದೂಡಿಕೆ ಆಗುತ್ತಾ ಅಂತ ಗೊಂದಲದಲ್ಲಿದ್ದರು. ಆದ್ರೆ ಈಗ ಬಂದ್ ಎಫೆಕ್ಟ್ ಮೌಲ್ಯಾಂಕನ ಪರೀಕ್ಷೆಗೆ ತಟ್ಟಿಲ್ಲ. 4, 5, 6 ಮತ್ತು 7ನೇ ತರಗತಿಗೆ ಮೌಲ್ಯಾಂಕನ ಪರೀಕ್ಷೆ ನಡೆಯಲಿದೆ. ಪೋಷಕರು ಆತಂಕಕ್ಕೆ ಒಳಗಾಗದೇ ಮಕ್ಕಳನ್ನು ಪರೀಕ್ಷೆಗೆ ಕಳುಹಿಸಿ ಎಂದು ಖಾಸಗಿ ಶಾಲೆಗಳ ಒಕ್ಕೂಟ ರುಪ್ಸ ಅಧ್ಯಕ್ಷ ಹಾಲನೂರು ಲೇಪಾಕ್ಷಿ ಅವರು ಮನವಿ ಮಾಡಿಕೊಂಡಿದ್ದಾರೆ.

publive-image

ಈ ಬಗ್ಗೆ ಸ್ಪಷ್ಟನೆ ನೀಡಿದ ಖಾಸಗಿ ಶಾಲೆಗಳ ಒಕ್ಕೂಟ ರುಪ್ಸ ಅಧ್ಯಕ್ಷ ಹಾಲನೂರು ಲೇಪಾಕ್ಷಿ ಅವರು, ನಿನ್ನೆ ಖುಷಿ ಖುಷಿಯಾಗಿ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಅದೇ ರೀತಿ ಇಂದು ಮೌಲ್ಯಾಂಕನ ಪರೀಕ್ಷೆ ನಡೆಯುತ್ತಿವೆ. 4, 5, 6 ಮತ್ತು 7ನೇ ತರಗತಿ ವಿದ್ಯಾರ್ಥಿಗಳು ಗೊಂದಲ ಪಡಬೇಡಿ. ಇಂದು ಬಂದ್​ಗೆ ಸಹಕಾರ ಕೊಟ್ಟಿಲ್ಲ. ಪೋಷಕರು ತಮ್ಮ ತಮ್ಮ ಮಕ್ಕಳನ್ನು ಕರೆದುಕೊಂಡು ಪರೀಕ್ಷೆಗೆ ಹಾಜರು ಪಡಿಸಿ ಅಂತ ಕೇಳಿಕೊಳ್ಳುತ್ತಿದ್ದೇನೆ ಅಂತ ಮನವಿ ಮಾಡುತ್ತಿದ್ದೇವೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment