Advertisment

₹500 ಕೋಟಿ ಲೂಟಿ.. ವಸೂಲಿಗೆ ರೇಟ್ ಫಿಕ್ಸ್? ಅಬಕಾರಿ ಸಚಿವರ ಮೇಲೆ ಲೋಕಾಯುಕ್ತಕ್ಕೆ ದೂರು

author-image
admin
Updated On
₹500 ಕೋಟಿ ಲೂಟಿ.. ವಸೂಲಿಗೆ ರೇಟ್ ಫಿಕ್ಸ್? ಅಬಕಾರಿ ಸಚಿವರ ಮೇಲೆ ಲೋಕಾಯುಕ್ತಕ್ಕೆ ದೂರು
Advertisment
  • ಅಧಿಕಾರಿಗಳಿಂದ ಸಚಿವರು ಮಾಮೂಲಿ ವಸೂಲಿ ಮಾಡುತ್ತಿದ್ದಾರೆ
  • ಟ್ರಾನ್ಸ್​ಫರ್ & ಪ್ರಮೋಷನ್​ಗೆ ಲಕ್ಷ, ಲಕ್ಷ ಲಂಚ ಪಡೆಯಲಾಗ್ತಿದೆ
  • ನವೆಂಬರ್ 20ರಂದು ರಾಜ್ಯ ವ್ಯಾಪಿ ಮದ್ಯ ಮಾರಾಟ ಬಂದ್‌ಗೆ ಕರೆ

ಬೆಂಗಳೂರು: ಮುಡಾ ಅಕ್ರಮ ಸೈಟಿನ ಕೇಸ್ ಸದ್ದು ಮಾಡುತ್ತಿರುವಾಗಲೇ ರಾಜ್ಯ ಸರ್ಕಾರದ ವಿರುದ್ಧ ಮತ್ತೊಂದು ಹಗರಣದ ಗಂಭೀರ ಆರೋಪ ಕೇಳಿ ಬಂದಿದೆ. ಅಬಕಾರಿ ಇಲಾಖೆ ಮೇಲೆ ಸಿಡಿದೆದ್ದ ಮದ್ಯ ಮಾರಾಟಗಾರರು ನೇರವಾಗಿ ಸಚಿವ ಆರ್‌.ಬಿ ತಿಮ್ಮಾಪುರ ವಿರುದ್ಧ ದೂರು ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರಿಗೆ ಅಬಕಾರಿ ಸಚಿವ ಆರ್‌.ಬಿ ತಿಮ್ಮಾಪುರ ಅವರನ್ನು ತಕ್ಷಣವೇ ಬದಲಾವಣೆ ಮಾಡಲು ಒತ್ತಾಯಿಸಿದ್ದಾರೆ.

Advertisment

ಸಚಿವ ಆರ್‌.ಬಿ ತಿಮ್ಮಾಪುರ ಹಾಗೂ ರಾಜ್ಯ ಅಬಕಾರಿ ಇಲಾಖೆ ಅಧಿಕಾರಿಗಳ ವಿರುದ್ಧ ಮದ್ಯದಂಗಡಿ ಮಾಲೀಕರು ಸಮರವನ್ನೇ ಸಾರಿದ್ದಾರೆ. ಅಬಕಾರಿ ಇಲಾಖೆಯಲ್ಲಿ 1 ವರ್ಷಕ್ಕೆ 500 ಕೋಟಿ ರೂಪಾಯಿ ಲೂಟಿ ಮಾಡಲಾಗುತ್ತಿದೆ. ವರ್ಗಾವಣೆ ಹೆಸರಲ್ಲಿ 180-200 ಕೋಟಿ ಅಕ್ರಮ ನಡೆಯುತ್ತಿದೆ ಎಂದು ಆರೋಪಿಸಲಾಗಿದೆ.

publive-image

ಸಚಿವ ಆರ್.ಬಿ ತಿಮ್ಮಾಪುರ ಅವರ ವಿರುದ್ಧ ಫೆಡರೇಶನ್ ಆಫ್ ವೈನ್ ಮರ್ಚಂಟ್ಸ್ ಅಸೋಸಿಯೇಶನ್ ಕರ್ನಾಟಕ ಸಿಎಂ ಸಿದ್ದರಾಮಯ್ಯ, ರಾಜ್ಯಪಾಲರಿಗೆ ಮನವಿ ಮಾಡಿದ್ದು, ಸೂಕ್ತ ಕ್ರಮ ಜರುಗಿಸುವಂತೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದೆ.

ಅಷ್ಟೇ ಅಲ್ಲ ಅಧಿಕಾರಿಗಳ ಲಂಚಾವಾತರದಿಂದ‌ ನಕಲಿ ಅಂತರಾಜ್ಯ ಮದ್ಯ ಮಾರಾಟ ಹೆಚ್ಚಳವಾಗಿದೆ. ಹೀಗಾಗಿ ಅಬಕಾರಿ ಇಲಾಖೆಗೆ ಮಂತ್ರಿಯೇ ಬೇಕಾಗಿಲ್ಲ. ಹಣಕಾಸು ಸಚಿವರಿಗೆ ಅಬಕಾರಿ ಇಲಾಖೆ ಜವಾಬ್ದಾರಿ ನೀಡಬೇಕು. ರಾಜ್ಯದ ಅಬಕಾರಿ ಇಲಾಖೆಯ ಭ್ರಷ್ಟಾಚಾರ ಖಂಡಿಸಿ ಇದೇ ನವೆಂಬರ್ 20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್ ಮಾಡಿ ಮುಷ್ಕರ ನಡೆಸುವ ಎಚ್ಚರಿಕೆಯನ್ನು ನೀಡಲಾಗಿದೆ.

Advertisment

publive-image

‘ಮದ್ಯ’ ಮಾರಾಟಗಾರರ ಆರೋಪಗಳೇನು?

  1. ಟ್ರಾನ್ಸ್​ಫರ್ & ಪ್ರಮೋಷನ್​ಗೆ ಲಕ್ಷ, ಲಕ್ಷ ಲಂಚ ಪಡೆಯಲಾಗ್ತಿದೆ
  2. ಅಧಿಕಾರಿಗಳಿಂದ ಸಚಿವರು ಮಾಮೂಲಿ ವಸೂಲಿ ಮಾಡುತ್ತಿದ್ದಾರೆ
  3. ಮದ್ಯದಂಗಡಿಗಳಿಂದ ಪ್ರತಿ ತಿಂಗಳು ಮಾಮೂಲಿ ವಸೂಲಿಯಾಗುತ್ತಿದೆ
  4. ಟ್ರ್ಯಾಪ್‌ಗೊಳಗಾದ ಅಧಿಕಾರಿಗೆ ಲಾಭದಾಯಕ ಹುದ್ದೆ ನಿಷಿದ್ಧ
  5. ಇಲಾಖೆಯಲ್ಲಿ ಅಕ್ರಮ ಸರಿಪಡಿಸಲು ಹೊಸ ನೀತಿ ತರಲು ಹಿಂದೇಟು
  6. ಇಲಾಖೆಯಲ್ಲಿ ಒಂದೇ ಸಮುದಾಯದ ಅಧಿಕಾರಿಗಳ ದರ್ಬಾರ್
  7. ಕೇಳಿದಷ್ಟು ಹಣ ಕೊಟ್ಟರೆ ಯಾವ ಸ್ಥಳಗಳಿಗೆ ಬೇಕಾದರೂ ಟ್ರಾನ್ಸ್​ಫರ್
  8. ಬೇಡಿಕೆ ಇರುವ ಸ್ಥಳಗಳ ನಿಯುಕ್ತಿಗಾಗಿ ಇನ್ನಷ್ಟು ಹಣ ಪಡೆದು ಟ್ರಾನ್ಸಫರ್
  9. ಹಣ ಕೊಡದಿದ್ದರೆ ಡಿಸ್ಟಿಲರಿ, ಬ್ರಿವರಿ ವೈನರಿ, ಮೈಕ್ರೋ ಬ್ರಿವರಿ ಹುದ್ದೆ ಮಾತ್ರ

ಅಧಿಕಾರಿಗಳಿಂದ ವಸೂಲಿ ರೇಟ್ ಫಿಕ್ಸ್.!
ಅಬಕಾರಿ ಇಲಾಖೆಯಲ್ಲಿ ಪ್ರತಿ ತಿಂಗಳು ಪ್ರತಿ ಅಂಗಡಿಯಿಂದ ಇಂತಿಷ್ಟು ಲಂಚ ವಸೂಲಿ ಮಾಡುತ್ತಿರುವ ಆರೋಪ ಮಾಡಲಾಗಿದೆ.

ಬೆಂಗಳೂರು ವಿಭಾಗದ ಮದ್ಯದಂಗಡಿ: 18-20ಸಾವಿರ
ಮೈಸೂರು-ಬೆಳಗಾವಿ ವಿಭಾಗದ ಮದ್ಯದಂಗಡಿ: 12-14 ಸಾವಿರ
ಕಲಬುರಗಿ-ಹೊಸಪೇಟೆ ವಿಭಾಗದ ಮದ್ಯದಂಗಡಿ: 10-12 ಸಾವಿರ
ಮಂಗಳೂರು ವಿಭಾಗದಲ್ಲಿ ಮದ್ಯದಂಗಡಿ: 10 ಸಾವಿರ
ಪಬ್ & ಕ್ಲಬ್‌ಗಳಲ್ಲಿ ಪ್ರತಿ ತಿಂಗಳು 2 ಲಕ್ಷ ವಸೂಲಿ

Advertisment

ಅಬಕಾರಿ ಸಚಿವರು ಹೇಳೋದೇನು?
ಫೆಡರೇಶನ್ ಆಫ್ ವೈನ್ ಮರ್ಚಂಟ್ಸ್ ಅಸೋಸಿಯೇಶನ್ ಆರೋಪಕ್ಕೆ ಸಚಿವ ಆರ್‌.ಬಿ ತಿಮ್ಮಾಪುರ ಅವರು ಸ್ಪಷ್ಟನೆ ನೀಡಿದ್ದಾರೆ. ಅಬಕಾರಿ ಇಲಾಖೆಯಲ್ಲಿ ಯಾವುದೇ ವರ್ಗಾವಣೆ ಮಾಡಿಲ್ಲ. ಸಹಜವಾಗಿ ಬಡ್ತಿ ನೀಡಿದ್ದೇವೆ. ನೋ ಟ್ರಾನ್ಸ್​ಫರ್, ನಥಿಂಗ್. ನಾನು ಕೋಟ್ಯಾಂತರ ರೂಪಾಯಿ ಹಣವನ್ನ ನೋಡಿಲ್ಲ. ಯಾರಾದರೂ ಇದ್ದರೇ ತೋರಿಸಿ ಎಂದು ಸಚಿವ ತಿಮ್ಮಾಪುರ ಅವರು ತಮ್ಮ ಮೇಲಿನ ಆರೋಪಗಳನ್ನು ತಳ್ಳಿ ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment