/newsfirstlive-kannada/media/post_attachments/wp-content/uploads/2023/12/siddu-and-modi-2.jpg)
ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿವೆ. ಪ್ರತಿ ವಲಯವೂ ತತ್ತರಿಸಿದ್ದು, ಇಂದು ಮಂಡನೆ ಆಗುವ ಕೇಂದ್ರ ಬಜೆಟ್ ಮೇಲೆ ನಿರೀಕ್ಷೆಯ ಭಾರ ಹೊತ್ತು ಕೂತಿದ್ದಾರೆ. ನಿರ್ಮಲಾ ಸೀತಾರಾಮನ್ ದಾಖಲೆಯ 8ನೇ ಬಜೆಟ್ ಮಂಡಿಸ್ತಿದ್ದು, ಎಲ್ಲಾ ವರ್ಗಗಳು ಚಿತ್ತ ನೆಟ್ಟಿವೆ. ಅದರಲ್ಲೂ ನಿರ್ಮಲ ಲೆಕ್ಕದತ್ತ ರಾಜ್ಯ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡು ಎದುರುನೋಡ್ತಿದೆ.
ಕೇಂದ್ರದ ಬಜೆಟ್ನತ್ತ ರಾಜ್ಯ ಸರ್ಕಾರದ ಚಿತ್ತ!
ಕರ್ನಾಟಕ ಮತ್ತು ಬೆಂಗಳೂರು ಅಭಿವೃದ್ಧಿಗಾಗಿ ಹಲವು ಯೋಜನೆಗಳಿಗೆ ಅನುದಾನ ನೀಡುವಂತೆ ಸಿಎಂ, ಡಿಸಿಎಂ ₹90,000 ಕೋಟಿ ವೆಚ್ಚದ ಯೋಜನೆಗಳಿಗೆ ನೆರವಿಗೆ ಪತ್ರ ಬರೆದಿದ್ದಾರೆ. ಹೀಗಾಗಿ ಬಜೆಟ್ನಲ್ಲಿ ಸಾಕಷ್ಟು ನಿರೀಕ್ಷೆ ಇದೆ.
ಇದನ್ನೂ ಓದಿ: ಮೋದಿ ಬಜೆಟ್ ಮೇಲೆ ದೊಡ್ಡ ನಿರೀಕ್ಷೆ.. ಬೆಂಗಳೂರು ಮಂದಿ ಬಯಸಿದ 12 ಬೇಡಿಕೆ ಇಲ್ಲಿದೆ..!
ಕೇಂದ್ರ ಬಜೆಟ್ನಲ್ಲಿ ರಾಜ್ಯದ ನಿರೀಕ್ಷೆಗಳೇನು?
- ಬೆಂಗಳೂರಲ್ಲಿ ಟ್ರಾಫಿಕ್ ನಿವಾರಣೆಗೆ ಟನಲ್ ರಸ್ತೆಗೆ ಅನುದಾನ
- ಹೆಬ್ಬಾಳದ ಎಸ್ಟೀಮ್ ಮಾಲ್ನಿಂದ ಸಿಲ್ಕ್ ಬೋರ್ಡ್ ಜಂಕ್ಷನ್
- ಉತ್ತರ-ದಕ್ಷಿಣ 18.5 ಕಿ.ಮೀ ಟನಲ್ಗಾಗಿ ₹15 ಸಾವಿರ ಕೋಟಿ
- ಕೆ.ಆರ್.ಪುರ ವೃತ್ತ - ನಾಯಂಡನಹಳ್ಳಿ ಜಂಕ್ಷನ್ ಟನಲ್ ರಸ್ತೆ
- 28.5 ಕಿ.ಮೀ ಟನಲ್ ರಸ್ತೆ ನಿರ್ಮಾಣಕ್ಕೆ ₹25 ಸಾವಿರ ಕೋಟಿ
- ಮೆಟ್ರೋ ರೈಲು ಮಾರ್ಗಗಳಿಗೆ 5 ಕಾರಿಡಾರು ವಿಸ್ತರಣೆ ಗುರುತು
- 17 ಮೇಲ್ಸೇತುವೆ, ಬಫರ್ ವಲಯ ನಿರ್ಮಾಣಕ್ಕೆ ಅನುದಾನ
- ಎಂಟು ಪಥದ 73.04 ಕಿ.ಮೀ ಬಿಸಿನೆಸ್ ಕಾರಿಡಾರ್ ಯೋಜನೆ
- ಕಾವೇರಿ 5ನೇ ಹಂತದ ಕುಡಿಯುವ ನೀರಿನ ಪೂರೈಕೆ ಯೋಜನೆ
- ಭದ್ರಾ ಮೇಲ್ದಂಡೆಗೆ ₹5,300 ಕೋಟಿ ಬಿಡುಗಡೆಗೆ ಅನುದಾನ
- ಮೇಕೆದಾಟು, ಮಹದಾಯಿ ಯೋಜನೆಗಳಿಗೆ ಅನುಮೋದನೆ
- 15ನೇ ಹಣಕಾಸು ಆಯೋಗ ಶಿಫಾರಸ್ಸು ಮಾಡಿದ ಅನುದಾನಕ್ಕೆ ಬೇಡಿಕೆ
- ಅಂಗನವಾಡಿ, ಆಶಾ, ಅಡುಗೆ ಸಹಾಯಕಿಯರ ಗೌರವಧನ ಹೆಚ್ಚಳ
- ಪ್ರಧಾನಮಂತ್ರಿ ಆವಾಸ್ ಯೋಜನೆ ನೆರವಿಗಾಗಿ ರಾಜ್ಯ ಸರ್ಕಾರದ ಮನವಿ
- ವೃದ್ಧಾಪ್ಯ, ವಿಧವಾ ಮತ್ತು ವಿಕಲಚೇತನರ ಪಿಂಚಣಿ ಹೆಚ್ಚಿಸಬೇಕೆಂದು ಬೇಡಿಕೆ
- ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ₹5,000 ಕೋಟಿ ಅನುದಾನಕ್ಕೆ ಮನವಿ
- ಪಶ್ಚಿಮಘಟ್ಟ ಅಭಿವೃದ್ಧಿಗೆ 5 ವರ್ಷಗಳಿಗೆ ₹10,000 ಅನುದಾನಕ್ಕೆ ಬೇಡಿಕೆ
ಒಟ್ಟಾರೆ ಕೇಂದ್ರ ಬಜೆಟ್ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ಅದರಲ್ಲೂ ಗ್ಯಾರಂಟಿಗಳನ್ನು ಕೊಟ್ಟು ಖಜಾನೆ ಖಾಲಿ ಮಾಡಿಕೊಂಡಿರುವ ರಾಜ್ಯ ಸರ್ಕಾರ ಕೇಂದ್ರದ ಆಯವ್ಯಯದ ಮೇಲೆ ಆಸೆಗಣ್ಣನ್ನು ಇಟ್ಟುಕೊಂಡಿದೆ. ಈ ಆಸೆಗಳನ್ನು ಕೇಂದ್ರ ಬಜೆಟ್ ಈಡೇರಿಸುತ್ತಾ ಅನ್ನೋದಕ್ಕೆ ಇಂದು ಉತ್ತರ ಸಿಗಲಿದೆ.
ಇದನ್ನೂ ಓದಿ: ನಿರ್ಮಲಾ ಸೀತರಾಮನ್ರಿಂದ ಸತತ 8ನೇ ಬಜೆಟ್ ಮಂಡನೆ.. ಜನರ ನಿರೀಕ್ಷೆ ದುಪ್ಪಟ್ಟು ಆಗಲು ಕಾರಣವೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ