Advertisment

ಇಡ್ಲಿ ಆಯ್ತು, ಈಗ ಹೋಳಿಗೆ ತಯಾರಿಸುವವರಿಗೆ ಬಿಸಿ.. ಸಿಹಿ ಅಂಗಡಿಗಳ ಮೇಲೆ ರೇಡ್

author-image
Gopal Kulkarni
Updated On
ಇಡ್ಲಿ ಆಯ್ತು, ಈಗ ಹೋಳಿಗೆ ತಯಾರಿಸುವವರಿಗೆ ಬಿಸಿ.. ಸಿಹಿ ಅಂಗಡಿಗಳ ಮೇಲೆ ರೇಡ್
Advertisment
  • ಇಡ್ಲಿ ಬಳಿಕ ಹೋಳಿಗೆ ಪ್ರಿಯರಿಗೆ ಆಹಾರ ಇಲಾಖೆಯಿಂದ ಶಾಕ್!
  • ಹೋಳಿಗೆ ತಯಾರಿಕೆಗೆ ಪ್ಲಾಸ್ಟಿಕ್ ಬಳಕೆ, ಅಂಗಡಿಗಳ ಮೇಲೆ ರೇಡ್​
  • ರೇಡಿಮೇಡ್ ಹೋಳಿಗೆಯ ಮೇಲೂ ಕೂಡ ಆಹಾರ ಇಲಾಖೆ ಕಣ್ಣು

ಇಡ್ಲಿ ಬಳಿಕ ಹೋಳಿಗೆ ಪ್ರಿಯರಿಗೆ ಶಾಕ್ ಎದುರಾಗಿದೆ. ಯಾಕಂದ್ರೆ ರೆಡಿಮೆಡ್​ ಹೋಳಿಗೆಯೂ ನಿಮ್ಮ ಆರೋಗ್ಯಕ್ಕೆ ಕಂಟಕ ತರಬಹುದು. ಹೋಳಿಗೆ ತಯಾರು ಮಾಡುತ್ತಿದ್ದ ಅಂಗಡಿಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಪ್ಲಾಸ್ಟಿಕ್ ಬಳಕೆ ಮಾಡಿಕೊಂಡು ಹೋಳಿಗೆ ತಯಾರಿಸುತ್ತಿರುವುದು ಪತ್ತೆಯಾಗಿದೆ.

Advertisment

ಆಹಾರ ಇಲಾಖೆಯಿಂದ ಕಳಪೆ ಗುಣಮಟ್ಟದ ಆಹಾರದ ವಿರುದ್ಧ ಸಮರ ಸಾರಿದೆ.‌ ಇಡ್ಲಿ, ಗೋಬಿ, ಕಲ್ಲಂಗಡಿ ಸೇರಿದಂತೆ ಅನೇಕ‌ ಆಹಾರಗಳ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಿದ್ದು, ಕೆಲವೊಂದು ಆಹಾರ ಪದಾರ್ಥಗಳಲ್ಲಿ ಹಾನಿಕಾರ ಅಂಶ ಪತ್ತೆಯಾಗಿದೆ. ಇದರ ಬೆನ್ನಲ್ಲೇ ಇದೀಗ ರೆಡಿಮೆಡ್ ಹೋಳಿಗೆ ಮೇಲೂ ಸಹ ಆಹಾರ ಇಲಾಖೆ ಹದ್ದಿನ ಕಣ್ಣಿಟ್ಟು.. ರೆಡಿಮೆಡ್​ ಹೊಳಿಗೆ ತಯಾರು ಮಾಡುವವರಿಗೆ ಬಿಸಿ ಮುಟ್ಟಿಸಿದೆ.

publive-image

ಹೋಟೆಲ್‌ಗಳಲ್ಲಿ ಇಡ್ಲಿ ಬೇಯಿಸಲು ಪ್ಲಾಸ್ಟಿಕ್ ಹಾಳೆಗಳನ್ನು ಬಳಸಲಾಗುತ್ತಿದ್ದು, ಈ ಪ್ಲಾಸ್ಟಿಕ್ ಹಾಳೆಯಿಂದ ಹಾನಿಕಾರಕ ರಾಸಾಯನಿಕ ಅಂಶ ಆಹಾರಕ್ಕೆ ಸೇರುತ್ತದೆ. ಹೀಗಾಗಿ, ಪ್ಲಾಸ್ಟಿಕ್ ಹಾಳೆ ಬಳಸುವುದನ್ನು ನಿಷೇಧಿಸಲಾಗಿದೆ. ಅದರಂತೆ ಇದೀಗ ಹೋಟೆಲ್​ಗಳಲ್ಲಿ ರೆಡಿಮೆಡ್ ಹೋಳಿಗೆ ಪ್ಲಾಸ್ಟಿಕ್ ಬಳಕೆ ಮಾಡ್ತಿರೋದು ಕಂಡು ಬಂದಿದೆ. ಇದರ ಬೆನ್ನಲ್ಲೇ ಅಲರ್ಟ್​ ಆದ ಆರೋಗ್ಯ ಇಲಾಖೆ ಅಧಿಕಾರಿಗಳು ಬೆಂಗಳೂರು ಮತ್ತು ಮೈಸೂರಿನಲ್ಲಿ ಅಂಗಡಿಗಳ ಮೇಲೆ ದಾಳಿ ನಡೆಸಿದ್ದಾರೆ. ಹಾಗೂ ಮೈಸೂರಿನ ಎರಡು ಅಂಗಡಿಗಳಿಗೆ ನೋಟಿಸ್​ ನೀಡಿದ್ದಾರೆ.

publive-image

ಇದನ್ನೂ ಓದಿ:ಬೆಂಗಳೂರು ಇಡ್ಲಿ ಪ್ರಿಯರೇ ಎಚ್ಚರ.. ಡೆಡ್ಲಿ ಕ್ಯಾನ್ಸರ್ ಕಾರಕ ಪತ್ತೆ; ಆಘಾತಕಾರಿ ವರದಿ ಬಿಡುಗಡೆ!

Advertisment

ಹೋಳಿಗೆ ತಯಾರಿಸಲು ಸಿಂಗಲ್ ಯೂಸ್ ಪ್ಲಾಸ್ಟಿಕ್ ಬಳಕೆ ಮಾಡಲಾಗ್ತಿದೆ. ಬಿಸಿ ಬಿಸಿ ಹೋಳಿಗೆಯನ್ನು ತಯಾರಿಸಿ ಬಳಿಕ ಅದನ್ನು ಪ್ಲಾಸ್ಟಿಕ್​ ಕವರ್​ನಿಂದ ಮುಚ್ಚಲಾಗುತ್ತೆ. ಹೀಗೆ ಮಾಡಿದ್ರೆ ಪ್ಲಾಸ್ಟಿಕ್​ಗೆ ಶಾಖದಿಂದ ಕೆಮಿಕಲ್ ಹೊರಸೂಸಿ ಕ್ಯಾನ್ಸರ್​ಗೆ ಕಾರಣ ಆಗ್ಬಹುದು. ಹೀಗಾಗಿ ಪ್ಲಾಸ್ಟಿಕ್ ಬಳಸಿದ್ರೆ ವಿಷಕಾರಿ ಅಂಶ ಹೋಳಿಗೆ ಸೇರಿವ ಸಾಧ್ಯತೆ ಇದೆ. ಇದರಿಂದ ಹೋಳಿಗೆಗೆ ಪ್ಲಾಸ್ಟಿಕ್​ ಬಳಸಬಾರದು ಎಂದು ಸೂಚನೆ ನೀಡಿದ್ದಾರೆ. ಇನ್ನು ಈಗಾಗಲೇ ಆಹಾರ ಪದಾರ್ಥಗಳ ತಯಾರಿಗೆ ಪ್ಲಾಸ್ಟಿಕ್ ಬಳಕೆ ಮಾಡದಂತೆ ಆಹಾರ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಇದನ್ನೂ ಓದಿ:ಗ್ರಾಹಕರೇ ಎಚ್ಚರ.. ಕಲರ್​ ಕಂಡು ಮರುಳಾದ್ರೆ ಕಂಟಕ ಫಿಕ್ಸ್​; ರಾಜ್ಯದಲ್ಲಿ ನಕಲಿ ಕಲ್ಲಂಗಡಿ ಹಣ್ಣಿನ ದರ್ಬಾರ್​​!

ಇನ್ನೇನು ಯುಗಾದಿ ಹಬ್ಬ ಬರುತ್ತಿರುವುದರಿಂದ ಅಂಗಡಿಗಳಲ್ಲಿ ರೆಡಿಮೆಡ್​ ಹೋಳಿಗಳ ಘಮ ಜೋರಾಗುತ್ತೆ. ಬಿಸಿ ಬಿಸಿ ಹೋಳಿಗೆ ಮಾಡಿ ಅದನ್ನು ಒಂದು ಪ್ಲಾಸ್ಟಿಕ್ಕ್​ನಿಂದ ಕವರ್ ಮಾಡಿ ಇಡುತ್ತಾರೆ. ಆದ್ರೆ, ಅದನ್ನು ತಿನ್ನುವ ಮುನ್ನ ಸಾರ್ವಜನರು ಈ ಪ್ಲಾಸ್ಟಿಕ್​ ಬಗ್ಗೆ ಎಚ್ಚರ ವಹಿಸುವುದು ಒಳಿತು.. ಕೇವಲ ಹೋಳಿಗೆ ಮಾತ್ರವಲ್ಲ.. ಯಾವುದೇ ಬಿಸಿಯಾದ ಆಹಾರ ಬಳಕೆಗೆ ಪ್ಲಾಸ್ಟಿಕ್​ ಬಳಸುವುದು ಡೇಂಜರ್​.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment