newsfirstkannada.com

KSRTC ಬಸ್ ಕಂಡ್ರೆ ಮಹಿಳೆಯರಿಂದ ಸಖತ್​ ಚೇಸಿಂಗ್​.. ಮಂಡ್ಯದಲ್ಲಿ ಹೋಯಿತು ವೃದ್ಧನ ಪ್ರಾಣ

Share :

Published June 20, 2023 at 7:58am

Update June 20, 2023 at 11:03am

    ವಾರದಲ್ಲಿ 3 ಕೋಟಿಗೂ ಅಧಿಕ ಮಹಿಳೆಯರಿಂದ ಫ್ರೀ ಬಸ್​ನಲ್ಲಿ​ ಪ್ರಯಾಣ

    ಮಹಿಳಾ ಪ್ರಯಾಣಿಕರ ಗುಂಪನ್ನ ಕಂಡ ಬಸ್ ಚಾಲಕ ಬಸ್​ ನಿಲ್ಲಿಸದೇ ಎಸ್ಕೇಪ್​

    ಮಹಿಳೆಯರಿಂದ ಬಸ್​ ಫುಲ್​ ರಶ್​, ಡೋರ್ ಬಳಿ ನಿಂತಿದ್ದ ವೃದ್ಧ ಬಿದ್ದು ಸಾವು ​

ಯಾವ ಬಸ್​ನಲ್ಲಿ ನೋಡಿದ್ರು ಲೇಡಿಸ್​. ಯಾವ ಪ್ರವಾಸ ತಾಣಗಳಲ್ಲಿ ಕಣ್ಣಾಯಿಸಿದ್ರು ಮಹಿಳಾ ಮಣಿಗಳು. ರಾಜ್ಯದ ಎಲ್ಲ ಬಸ್​ ಸ್ಟಾಂಡ್​ನಲ್ಲೂ ಸ್ತ್ರೀ ಶಕ್ತಿ ಅಬ್ಬರ. ಇದೆಕೆಲ್ಲ ಕಾರಣ ಸರ್ಕಾರದ ಶಕ್ತಿ ಯೋಜನೆ. ರಾಜ್ಯದಲ್ಲಿ ಯಾವ್ಯಾವ ಕಡೆ ಏನೇನ್​ ಆಯಿತು. ಯಾಱರು ಹೇಗೆ ಪರದಾಡಿದ್ರು?. ಫ್ರೀ ಟ್ರಿಪ್​ ಖಷಿ ನಡುವೆ ಬಸ್​ಗಳ ರಶ್​ಗಳಿಂದ ಅವಘಡ ಸಂಭವಿಸಿದ್ದೇಗೆ?.

ಗಂಡು ಮಕ್ಕಳು ಮದುವೆಯಾಗಲು ಹೆಣ್ಣು ಮಕ್ಕಳೇ ಇಲ್ಲ ಅಂತಿದ್ರು ಆನ್​ ಲೈನ್​ನಲ್ಲಿ ಹುಡುಕೋದೇನು. ವೆಬ್​ಸೈಟ್​ನಲ್ಲಿ ಸರ್ಚ್​ ಮಾಡೋದೇನು. ಹುಡುಗಿಯರಿಗಾಗಿ ಬೈನೋಕ್ಯುಲರ್​ನಲ್ಲಿ ನೋಡಿ ಹುಡುಕುವಂತ ಪರಿಸ್ಥಿತಿ ಇತ್ತು. ಆದ್ರೆ ಈಗ ಹಂಗಿಲ್ಲ ಬಿಡಿ. ಹುಡುಗಿಯರನ್ನ ನೋಡಬೇಕು ಅಂದ್ರೆ ಸಿಂಪಲ್​ ಬಸ್​ ಸ್ಟಾಂಡ್​ಗಳಿಗೆ ಹೊರಟ್ರೆ ಸಾಕು ಗುಂಪು ಗುಂಪು ಹೆಣ್ಣು ಮಕ್ಕಳು ಸಿಕ್ತಾರೆ. ರಾಜ್ಯದಲ್ಲಿ ಇಷ್ಟೆಲ್ಲ ನಾರಿಯರಿದ್ದಾರಾ ಅನ್ನೋ ಪ್ರಶ್ನೆ ಎದ್ದಿರೋದು ಕಾಂಗ್ರೆಸ್​ನ ಶಕ್ತಿ ಗ್ಯಾರಂಟಿಯಿಂದ.

ಮಹಿಳೆಯರ ವೀಕೆಂಡ್‌ ಪ್ರಯಾಣದಲ್ಲಿ ಶೇಕಡಾ 50% ಏರಿಕೆ..!

ರಾಜ್ಯ ಕಾಂಗ್ರೆಸ್ ಸರ್ಕಾರ ನುಡಿದಂತೆ ಶಕ್ತಿ ಯೋಜನೆ ಜಾರಿ ಮಾಡಿ ಮೊದಲ ವೀಕೆಂಡ್​ ಕಳೆದಿದೆ. ಎಲ್ಲಾದ್ರೂ ಹೋಗಣ ಅಂತ ಗಂಡಂದರಿಗಾಗಿ ಕಾಯ್ತಿದ್ದ ಗೃಹಿಣಿಯರು ಅಯ್ಯೋ.. ಈಗ ಫ್ರೀ ಬಸ್ ಇದೆ​ ನಡೀರೀ ನಾವೇ ಹೋಗಿ ಬರೋಣ ಅಂತ ಅಕ್ಕ ಪಕ್ಕದ ಮನೆಯವರ ಜೊತೆ ಸಿಂಪಲ್​​ ಆಗಿ ಜೂಟ್​ ಆಗೋ ಮೂಲಕ ಉಚಿತ ಬಸ್ ಸೇವೆ ಪಡೆದು ಆನಂದಿಸುತ್ತಿದ್ದಾರೆ. ತಮಗಿಷ್ಟವಾದ ಸ್ಥಳಗಳಿಗೆ, ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಿ ಎಂಜಾಯ್ ಮಾಡುತ್ತಿದ್ದಾರೆ. ಯೋಜನೆ ಜಾರಿಯಾದ ದಿನದಿಂದ ಜೂನ್ 17ರ ವರೆಗೆ ಒಟ್ಟು ಮಹಿಳಾ ಪ್ರಯಾಣಿಕರ ಪ್ರಯಾಣದ ವೆಚ್ಚ 69,77,68,971 ರೂಪಾಯಿ ಆಗಿದೆ. ಒಟ್ಟು 3,12,9,696 ಮಂದಿ ಪ್ರಯಾಣ ಮಾಡಿದ್ದು, ಉತ್ತಮ ರೆಸ್ಪಾನ್ಸ್​ ಸಿಕ್ಕಿದೆ ಅಂತಿದೆ ಸರ್ಕಾರ.

ಬೆಳಗಾವಿಯ ಹಲವೆಡೆ ಬಸ್​​ಗಾಗಿ ವಿದ್ಯಾರ್ಥಿಗಳ ಪರದಾಟ

ಲೋ ಮಾರಾಯ.. ಈ ಬಸ್​ ಬ್ಯಾಡ್ ಬಿಡೋ.. ಹಿಂದ ಮತ್ತೊಂದು ಬಸ್​ ಬರ್ತೈತಿ ಅದಕ್ಕೋಗೋಣ.. ಬಿಡ್ಲೇ.. ಅಂತ ಕೆಲ ವಿಧ್ಯಾರ್ಥಿಗಳು ಹೇಳ್ತಿದ್ರೆ.. ಇನ್ನ ಕೆಲವರು.. ಮತ್ತಿನ್ನೊಂದು ಬಂದ್ರು ಅದೂ ಕೂಡ ರಶ್​ ಇರ್ತೈತಿ.. ಬ್ಯಾಡ ಸುಮ್ನನೇ ಇದೇ ಬಸ್​ಗೆ ಹೊರಟ್ಬಿಡೋಣ ಬನ್ನಿ ಎಂದು ಇದು ಬೆಳಗಾವಿಯ‌ ಅಥಣಿ ಪಟ್ಟಣದ ಬಸ್ ಸ್ಟ್ಯಾಂಡ್‌ನಲ್ಲಿ ವಿದ್ಯಾರ್ಥಿಗಳು ಆಡ್ತಿದ್ದ ಮಾತು. ಕಾರಣ ಮಹಿಳೆಯರಿಂದ್ಲೇ ಬಸ್ ಫುಲ್ ಆಗಿದ್ದವು.

ಕಲಬುರಗಿಯಲ್ಲಿ ಫ್ರೀ ಬಸ್ ಸೇವೆಗಾಗಿ ಮಹಿಳೆಯರ ಪರದಾಟ

ಆ ಕಡೆಯಿಂದ ಈ ಕಡೆಗೆ ಈ ಕಡೆಯಿಂದ ಆ ಕಡೆಗೆ.. ಫ್ರೀ ಬಸ್ ಸೇವೆ ಪಡೆಯಲು ಮಹಿಳೆಯರ ಪರದಾಟ ನಡೆಸಿದ ದೃಶ್ಯಗಳು ಕಂಡು ಬಂದಿದ್ದು, ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ‌ ಮಣ್ಣೂರ ಗ್ರಾಮದಲ್ಲಿ ಮಹಿಳಾ ಪ್ರಯಾಣಿಕರ ಗುಂಪನ್ನ ಕಂಡ ಕೂಡಲೆ ಬಸ್ ಚಾಲಕ ನಿಲ್ಲಿಸದೇ ಮುಂದೋಗಿದ್ದಾನೆ. ಬಸ್​ ನಿಲ್ಲಿಸದಿದ್ರೂ ಬಸ್ ಹಿಂದೆ ಎದ್ನೋ ಬಿದ್ನೋ ಅಂತ ಮಹಿಳಾ ಪ್ರಯಾಣಿಕರು ಓಡೋಡಿ ಹೋಗಿದ್ದಾರೆ.

ಕೆಎಸ್‌ಆರ್‌ಟಿಸಿ ಬಸ್ ಕಂಡ್ರೆ ಸಾಕು ಮಹಿಳೆಯರ ಚೇಸಿಂಗ್

ಮೊದಲು ಖಾಲಿ ಖಾಲಿ‌ಯಾಗಿ ಹೋಗ್ತಾ ಇದ್ದ KSRTC ಬಸ್‌ಗಳು ಸದ್ಯ ಹೌಸ್ ಪುಲ್ ಆಗಿ ನೂಕು ನುಗ್ಗಲು ಶುರುವಾಗಿದೆ. ಸರ್ಕಾರಿ ಬಸ್​ಗಳನ್ನ ನೋಡಿದ ಕೂಡಲೆ ರೇಸ್‌ಗೆ ಬಿಟ್ಟ ಹಾಗೆ ತಾಮುಂದು ನಾಮುಂದು ಅಂತ ಮಹಿಳೆಯರು ಓಡುತ್ತಿರುವ ದೃಶ್ಯಗಳು ಕಂಡು ಬಂದಿದ್ದು, ಮಂಡ್ಯದ ನಾಗಮಂಗಲ ತಾಲೂಕಿನ ಬೆಳ್ಳೂರು ಕ್ರಾಸ್ ಬಳಿ.

ಸರ್ಕಾರಿ ಬಸ್​ಗಳಲ್ಲಿ ಕರಾವಳಿ ಮಹಿಳೆಯರ ಕಾರುಬಾರು

ಕರಾವಳಿಯಲ್ಲಿ ಏನಿದ್ರೂ ಖಾಸಗಿ ಬಸ್​ಗಳದ್ದೇ ಕಾರುಬಾರು. ಸರ್ಕಾರಿ ಬಸ್​ಗಳ ಉಚಿತ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆ ಯಶಸ್ವಿ ಯಾಗಲ್ಲ ಎನ್ನುವ ಮಾತು ಕೇಳಿ ಬಂದಿತ್ತು. ಆದ್ರೆ ಸದ್ಯ ಉಡುಪಿಯಲ್ಲೂ ಸರ್ಕಾರಿ ಬಸ್​ಗಳತ್ತ ಮಹಿಳೆಯರು ಮುಖ ಮಾಡಿದ್ದಾರೆ. ಪ್ರತಿದಿನ ಖಾಸಗಿ ಬಸ್​ಗಳಲ್ಲಿ ಹೋಗುತ್ತಿದ್ದವರು, ಕಾದು ಕುಳಿತು ಖಾಸಗಿ ಬಸ್​ಗೆ ಹತ್ತದೇ ಸರ್ಕಾರಿ ಬಸ್ ಏರಿದ ವಿಡಿಯೋ ಸದ್ಯ ವೈರಲ್ ಆಗಿದೆ.

ಬಸ್​ ಡೋರ್​ ಬಳಿ ನಿಂತಿದ್ದ ವೃದ್ಧ ಆಯತಪ್ಪಿ ಬಿದ್ದು ಸಾವು

ಮಂಡ್ಯದಿಂದ ಮೇಲುಕೋಟೆ ಮಾರ್ಗವಾಗಿ ಸಂಚರಿಸುತ್ತಿದ್ದ ಕೆಎಸ್​ಆರ್​ಟಿಸಿ ಬಸ್​ಗೆ ಚಲುವೇಗೌಡ ಎಂವ ವೃದ್ಧರೊಬ್ಬರು ಹತ್ತಿದ್ರು.‌ ಇನ್ನೇನು ತನ್ನೂರಿನ ಬಳಿ ಇಳಿಯುವ ದಾವಂತದಲ್ಲಿದ್ರು. ಆದ್ರೆ ಶಕ್ತಿಯೋಜನೆ‌ಯಿಂದ ರಶ್ ಆಗಿದ್ದು ಬಸ್​ನ ಡೋರ್ ಬಳಿ ನಿಂತಿದ್ದ ಅವರು ಆಯ‌ತಪ್ಪಿ ಏಕಾಏಕಿ ಬಸ್​ನಿಂದ ಕೆಳಗೆ ಬಿದ್ದಿದ್ದಾರೆ. ತಲೆ ಭಾಗಕ್ಕೆ ತೀವ್ರ ಪೆಟ್ಟು ಬಿದ್ದರಿಂದ ರಕ್ತ ಸ್ರಾವವಾಗಿ ಸ್ಥಳದಲ್ಲೆ ಅಸುನೀಗಿದ್ದಾರೆ.

ಸರ್ಕಾರಿ ಬಸ್​ಗಳನ್ನ ನೋಡಿದ ಕೂಡಲೆ ರೇಸ್‌ಗೆ ಬಿಟ್ಟ ಹಾಗೆ ತಾಮುಂದು ನಾಮುಂದು ಅಂತ ಓಡೋದು. ರಶ್​ ಇದ್ದರೂ ಡೋರ್​ನಲ್ಲಿ ನಿಂತು ನೇತಾಡೋದು ಬಹಳ ಅಪಾಯಕಾರಿ. ಸರ್ಕಾರದ ಯೋಜನೆಗಳಿಂದ ಸದುಪಯೋಗ ಪಡೆದುಕೊಳ್ಳಿ. ಆದ್ರೆ ನಿಮ್ಮ ಸೇಫ್ಟಿ ಕೂಡ ಇಂಪಾರ್ಟೆಂಟ್.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

KSRTC ಬಸ್ ಕಂಡ್ರೆ ಮಹಿಳೆಯರಿಂದ ಸಖತ್​ ಚೇಸಿಂಗ್​.. ಮಂಡ್ಯದಲ್ಲಿ ಹೋಯಿತು ವೃದ್ಧನ ಪ್ರಾಣ

https://newsfirstlive.com/wp-content/uploads/2023/06/MND_MAN_DEATH.jpg

Load More