/newsfirstlive-kannada/media/post_attachments/wp-content/uploads/2025/01/Naxals.jpg)
ಬೆಂಗಳೂರು: ಕರ್ನಾಟಕದಲ್ಲಿ ಆರು ಮಂದಿ ನಕ್ಸಲರು ಕೊನೆಗೂ ಶರಣಾಗಿ ಮುಖ್ಯವಾಹಿನಿಗೆ ಬರಲು ಹೆಜ್ಜೆ ಇಟ್ಟಿದ್ದಾರೆ. ನಕ್ಸಲರು ಶರಣಾದ ನಂತರದ ಕಾನೂನು ಪ್ರಕ್ರಿಯೆಗಳು ಶುರುವಾಗಿವೆ. ಈಗಾಗಲೇ 6 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಇದರ ನಡುವೆ ಶರಣಾದವರು ಶಸ್ತ್ರಾಸ್ತ್ರಗಳನ್ನು ಪೊಲೀಸರಿಗೆ ಒಪ್ಪಿಸಿಲ್ಲ. ಮತ್ತೊಂದೆಡೆ ನಕ್ಸಲ್​ ಶರಣಾಗತಿ ವಿಚಾರದಲ್ಲಿ ಬಿಜೆಪಿ-ಕಾಂಗ್ರೆಸ್​ ನಡುವೆ ವಾಕ್ಸಮರವೂ ಶುರುವಾಗಿದೆ.
ಕಾಡಿನಿಂದ ಮುಖ್ಯವಾಹಿನಿಗೆ ಬಂದ ನಕ್ಸಲರ ವಿಚಾರಣೆ
ರಾಜ್ಯದ ಮಲೆನಾಡಿನ ದಟ್ಟಡವಿಯಲ್ಲಿ ಹೋರಾಟ ನಡೆಸ್ತಿದ್ದ ನಕ್ಸಲರು ನಾಡಿಗೆ ಮರಳಿ ಸರ್ಕಾರಕ್ಕೆ ಶರಣಾಗಿದ್ದಾರೆ. ದಶಕಗಳಿಂದ ಸಂಘರ್ಷದ ಕೂಗು ಹಾಕಿದ್ದ ಕರ್ನಾಟಕದ ಮೂಲದ ನಾಲ್ವರು ಹಾಗೂ ತಮಿಳುನಾಡು, ಕೇರಳ ಮೂಲದ ಇಬ್ಬರು ಶರಣಾಗಿದ್ದಾರೆ. ನಿನ್ನೆ ಸಂಜೆ ಸಿಎಂ ಸಮ್ಮುಖದಲ್ಲಿ ಆರು ಜನರು ಸಮಾಜದ ಮುಖ್ಯವಾಹಿನಿಗೆ ಬರಲು ಒಪ್ಪಿಗೆ ಸೂಚಿಸಿದ್ರು. ಇದೀಗ ಅದರ ಕಾನೂನು ಪ್ರಕ್ರಿಯೆಗಳು ಶುರುವಾಗಿದೆ.
ಸಿಎಂ ಸಮ್ಮುಖದಲ್ಲಿ ಶರಣಾಗತಿಯಾದ ಮುಂಡಗಾರು ಲತಾ, ಸುಂದರಿ ಕುತ್ಲೂರು, ವನಜಾಕ್ಷಿ ಬಾಳೆಹೊಳೆ, ಮಾರೆಪ್ಪ ಅರೋಲಿ, ಕೆ ವಸಂತ ಟಿ.ಎನ್, ಜೀಶಾರನ್ನು ಕಳೆದ ರಾತ್ರಿಯೇ ಪೊಲೀಸರು ವಶಕ್ಕೆ ಪಡೆದು, ಮಡಿವಾಳದ ಟೆಕ್ನಿಕಲ್​ ಸೆಲ್​ಗೆ ಕರೆದೊಯ್ದರು. ಚಿಕ್ಕಮಗಳೂರು ಪೊಲೀಸ್ರಿಂದಲೇ ಆರು ಮಂದಿ ನಕ್ಸಲರ ವಿಚಾರಣೆ ನಡೆಸಿ ಸ್ವ ಇಚ್ಚಾ ಹೇಳಿಕೆಯನ್ನು ವಿಡಿಯೋ ರೆಕಾರ್ಡ್​ ಮಾಡಿದ್ರು. ಇವತ್ತು ಎನ್​ಐಎ ಕೋರ್ಟ್​ಗೆ ಹಾಜರು ಪಡಿಸೋದಕ್ಕೂ ಮೊದಲು ನಕ್ಸಲ್ ನಿಗ್ರಹ ಪಡೆ ಐಜಿಪಿ ರೂಪಾ ನೇತೃತ್ವದಲ್ಲಿ ಆರು ಜನರ ಹೇಳಿಕೆಯನ್ನು ಸಂಗ್ರಹಿಸಿ ಕಾಡಿನಲ್ಲಿ ಬಳಸುತ್ತಿದ್ದ ವೆಪನ್​ಗಳ ಬಗ್ಗೆಯೂ ಸಾಕ್ಷ್ಯವನ್ನು ಕಲೆ ಹಾಕಿದ್ರು.
ಶರಣಾಗತಿಯಾದ ನಕ್ಸಲರಿಂದ ಶಸ್ತ್ರಾಸ್ತ್ರ ಸರೆಂಡರ್ ಇಲ್ಲ
ಮೂರು ರಾಜ್ಯಗಳಿಗೆ ಬೇಕಾಗಿದ್ದ ಮೋಸ್ಟ್​ ವಾಟೆಂಡ್​ 6 ಮಂದಿ ನಕ್ಸರು, ಶರಣಾಗತಿಯಾದ್ರೂ, ಕೆಲವೊಂದು ಅನುಮಾನಗಳ ದೂರ ಆಗಿಲ್ಲ. ನಿನ್ನೆ ಸರ್ಕಾರಕ್ಕೆ ಶರಣಾದ ನಕ್ಸಲರು, ಸಮವಸ್ತ್ರಗಳನ್ನು ಮಾತ್ರ ಸರೆಂಡರ್​ ಮಾಡಿದ್ದಾರೆ. ಆದ್ರೆ ಶಸ್ತ್ರಾಸ್ತ್ರ ಸರೆಂಡರ್ ಒಪ್ಪಿಸಿಲ್ಲ. ಈ ಬಗ್ಗೆ ಹಿರಿಯ ಪೊಲೀಸ್​ ಅಧಿಕಾರಿಗಳ ಬಳಿಯೂ ಉತ್ತರವಿಲ್ಲ. ಹೀಗಾಗಿ ಚಿಕ್ಕಮಂಗಳೂರು ಜಿಲ್ಲಾ ಬಿಜೆಪಿ ನಾಯಕರು, ಎನ್​ಐಎ ತನಿಖೆ ನಡೆಸುವಂತೆ ಆಗ್ರಹಿಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ನಕ್ಸಲ್​ ಶರಣಾಗತಿಯಾದ ಮರು ದಿನವೇ ಹಣ ವರ್ಗಾವಣೆ
ಶರಣಾಗತಿಯಾದ ನಕ್ಸಲರಿಗೆ ಕೊಟ್ಟ ಮಾತಿನಂತೆ ಸರ್ಕಾರ ನಡೆದುಕೊಂಡಿದೆ. ಶರಣಾಗತಿಯಾದ ಮರುದಿನವೇ ಸರ್ಕಾರ, ನಕ್ಸಲ್ ಪ್ಯಾಕೇಜಿನ ಮೊದಲ ಕಂತಿನ 3 ಲಕ್ಷ ಹಣವನ್ನ ಚಿಕ್ಕಮಗಳೂರು ಜಿಲ್ಲಾಧಿಕಾರಿ ಖಾತೆಗೆ ಹಾಕಿದೆ.
ವಿವಿಧ ಕೆಟಗರಿಯಲ್ಲಿ ಶರಣಾಗತಿ ಆಗಿರುವ ಆರು ಜನ
ಎ, ಬಿ, ಸಿ ಕೆಟಗರಿಯಲ್ಲಿ 6 ಜನರು ಶರಣಾಗಿದ್ದಾರೆ. ಅದರಲ್ಲಿ ಮುಂಡುಗಾರು ಲತಾ, ವನಜಾಕ್ಷಿ, ಸುಂದರಿ, ಜಯಣ್ಣ, ಎ ಕೆಟಗರಿ ನಕ್ಸಲರು. ತಮಿಳುನಾಡಿನ ಕೆ. ವಸಂತ, ಕೇರಳದ ಜೀಶಾ ಬಿ ಕೆಟಗರಿಯ ನಕ್ಸಲರು. ಸದ್ಯ ಸರ್ಕಾರದಿಂದ ನಕ್ಸಲ್ ಪ್ಯಾಕೇಜಿನ ಮೊದಲ ಕಂತಿನ 3 ಲಕ್ಷ ಹಣ ಚಿಕ್ಕಮಗಳೂರು ಜಿಲ್ಲಾಧಿಕಾರಿಯ ಖಾತೆಗೆ ವರ್ಗಾವಣೆ ಆಗಿದೆ. ಈ ಹಣವನ್ನು ಶರಣಾಗತಿಯಾದ ಆರು ಜನರಿಗೆ ಜಿಲ್ಲಾಧಿಕಾರಿ ನೀಡಲಿದ್ದಾರೆ.
ಇದನ್ನೂ ಓದಿ: ಒಲವಿನ ಉಡುಗೊರೆ ಕೊಡಲೇನು ಖ್ಯಾತಿಯ ಗಾಯಕ ಪಿ.ಜಯಚಂದ್ರನ್ ಇನ್ನಿಲ್ಲ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us