ಥಗ್ ಲೈಫ್ ಬಿಡುಗಡೆ ಮಾಡಿದರೆ ಸಂಪೂರ್ಣ ರಕ್ಷಣೆ ನೀಡುತ್ತೇವೆ -ಕರ್ನಾಟಕ ಸರ್ಕಾರ ಅಫಿಡವಿಟ್

author-image
Ganesh
Updated On
ಥಗ್ ಲೈಫ್ ಬಿಡುಗಡೆ ಮಾಡಿದರೆ ಸಂಪೂರ್ಣ ರಕ್ಷಣೆ ನೀಡುತ್ತೇವೆ -ಕರ್ನಾಟಕ ಸರ್ಕಾರ ಅಫಿಡವಿಟ್
Advertisment
  • ಕಮಲ್ ಹಾಸನ್ ನಟನೆ, ನಿರ್ಮಾಣದ ಸಿನಿಮಾ ಬಿಡುಗಡೆ ವಿವಾದ
  • ಥಿಯೇಟರ್, ಪ್ರೇಕ್ಷಕರಿಗೆ ರಕ್ಷಣೆ ನೀಡುತ್ತೇವೆ ಎಂದ ರಾಜ್ಯ ಸರ್ಕಾರ
  • ಸಿನಿಮಾವನ್ನು ಕರ್ನಾಟಕದಲ್ಲಿ ಬ್ಯಾನ್ ಮಾಡಿಲ್ಲ ಅಂತಾ ಸ್ಪಷ್ಟನೆ

ಕಮಲ್ ಹಾಸನ್ ಅಭಿನಯದ ತಮಿಳು ಚಿತ್ರ ‘ಥಗ್ ಲೈಫ್​’ ಬಿಡುಗಡೆ ವಿವಾದ ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ. ಮೊನ್ನೆ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಕರ್ನಾಟಕದಲ್ಲಿ ಚಿತ್ರ ಬಿಡುಗಡೆಗೆ ಗ್ರೀನ್ ಸಿಗ್ನಲ್ ಕೂಡ ನೀಡಿತ್ತು. ಬೆನ್ನಲ್ಲೇ ರಾಜ್ಯ ಸರ್ಕಾರ, ಥಗ್ ಲೈಫ್ ಸಿನಿಮಾವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಿದರೆ ಸಂಪೂರ್ಣ ರಕ್ಷಣೆ ನೀಡುತ್ತೇವೆ ಎಂದು ಸುಪ್ರೀಂ ಕೋರ್ಟ್​ಗೆ ಅಫಿಡವಿಟ್ ಸಲ್ಲಿಸಿದೆ.

ಸುಪ್ರೀಂ ಕೋರ್ಟ್​ ಏನು ಹೇಳಿದೆ..?

ಸುಪ್ರೀಂ ಕೋರ್ಟ್​ನ ಜಸ್ಟೀಸ್ ಮನಮೋಹನ್, ಜಸ್ಟೀಸ್ ಜೆ.ಭುಯನ್ ಪೀಠವು ಕರ್ನಾಟಕದಲ್ಲಿ ಚಿತ್ರ ಬಿಡುಗಡೆಗೆ ಅನುಮತಿ ನೀಡಿ ಆದೇಶ ನೀಡಿದೆ. ರಾಜ್ಯ ಸರ್ಕಾರ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಎತ್ತಿ ಹಿಡಿಯಬೇಕು. ಜನರು ಬಂದು ಸಿನಿಮಾ ನೋಡ್ತಾರೆ. ಜನ ಬಂದು ಘೇರಾವ್ ಮಾಡ್ತೀವಿ ಅಂತ ಹೇಳಿದಾಕ್ಷಣ ಸಿನಿಮಾ ಬಿಡುಗಡೆ ನಿಲ್ಲಿಸಬಾರದು. ಜನ ಸಿನಿಮಾ ಹಾಲ್ ಸುಡುತ್ತೇವೆ ಎಂದಿದ್ದಕ್ಕೆ ಸಿನಿಮಾ ಬಿಡುಗಡೆ ನಿಲ್ಲಿಸಬಾರದು. ಈ ನೆಲದ ಕಾನೂನು ಕಾಪಾಡುವುದು ಮುಖ್ಯ ಎಂದ ಸುಪ್ರೀಂ ಕೋರ್ಟ್ ಹೇಳಿತ್ತು. ಅಲ್ಲದೇ ಸಿನಿಮಾ ರಿಲೀಸ್​ಗೆ ಸಂಬಂಧಿಸಿ ಹೈಕೋರ್ಟ್​ ನಡೆಸ್ತಿದ್ದ ಎಲ್ಲಾ ಅರ್ಜಿಗಳನ್ನು ವರ್ಗಾವಣೆ ಮಾಡಿಕೊಂಡಿದ್ದು ವಿಚಾರಣೆ ನಡೆಯಬೇಕಿದೆ.

ಇದನ್ನೂ ಓದಿ: ಫ್ಯಾನ್ಸ್​ ಕಣ್ಮನ ಸೆಳೆದ ಭರ್ಜರಿ ಬ್ಯಾಚುಲರ್ಸ್ ಖ್ಯಾತಿಯ ಆಸಿಯಾ; ಬ್ಯೂಟಿಫುಲ್​ ಫೋಟೋಸ್​ ಇಲ್ಲಿವೆ!​

ಸುಪ್ರೀಂಗೆ ಅಫಿಡವಿಟ್..

ಇದೀಗ ರಾಜ್ಯ ಸರ್ಕಾರ ಥಗ್ ಲೈಫ್ ಚಿತ್ರ ಪ್ರದರ್ಶನಗೊಳ್ಳುವ ಚಿತ್ರಮಂದಿರಕ್ಕೆ, ಸಿನಿಮಾ ಅಭಿಮಾನಿಗಳಿಗೆ ರಕ್ಷಣೆ ನೀಡೋದಾಗಿದೆ ಸುಪ್ರೀಂ ಕೋರ್ಟ್​ಗೆ ಅಫಿಡವಿಟ್ ಸಲ್ಲಿದೆ. ಸಿನಿಮಾ ಮೇಲೆ ಕರ್ನಾಟಕ ಸರ್ಕಾರ ಯಾವುದೇ ನಿರ್ಬಂಧ ವಿಧಿಸಿಲ್ಲ. ಆದರೆ ಕರ್ನಾಟಕದ ಫಿಲಂ ಚೇಂಬರ್ ಆಫ್ ಕಾಮರ್ಸ್ ಕಮಲ್ ಹಾಸನ್ ಕ್ಷಮೆ ಕೇಳಬೇಕೆಂದು ಹೇಳಿದೆ. ಕರ್ನಾಟಕ ಫಿಲಂ ಚೇಂಬರ್ ಕಮಲ್ ಹಾಸನ್ ಹೇಳಿಕೆಯನ್ನು ಖಂಡಿಸಿದೆ. ಅಧಿಕೃತವಾಗಿ ಥಗ್ ಲೈಫ್ ಸಿನಿಮಾ ಕರ್ನಾಟಕದಲ್ಲಿ ಬ್ಯಾನ್ ಮಾಡಿಲ್ಲ. ಸಿನಿಮಾ ನಿರ್ಮಾಪಕರೇ ಸಿನಿಮಾ ಬಿಡುಗಡೆ ಮಾಡಲ್ಲ ಎಂದು ಹೈಕೋರ್ಟ್​ಗೆ ಮುಚ್ಚಳಿಕೆ ನೀಡಿದ್ರು. ಕರ್ನಾಟಕ ಫಿಲಂ ಚೇಂಬರ್ ಜೊತೆಗೆ ಮಾತುಕತೆ ಮೂಲಕ ವಿವಾದ ಬಗೆಹರಿಸಿಕೊಳ್ಳುವುದಾಗಿ ನಿರ್ಮಾಪಕರು ಹೈಕೋರ್ಟ್​ನಲ್ಲಿ ಹೇಳಿದ್ದಾರೆ ಎಂದು ಕರ್ನಾಟಕ ಸರ್ಕಾರ ತನ್ನ ಅಫಿಡವಿಟ್​ನಲ್ಲಿ ತಿಳಿಸಿದೆ.

ಇದನ್ನೂ ಓದಿ: ಒಂದು ತಿಂಗಳ ಕಾಲ ಚಳ್ಳೆ ಹಣ್ಣು ತಿನ್ನಿಸಿದ್ದ ಸುಂದರಿ.. ಕೊನೆಗೂ ಹನಿಟ್ರ್ಯಾಪ್ ಕೇಸ್​ನಲ್ಲಿ ಅರೆಸ್ಟ್​​..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment