newsfirstkannada.com

ಬಜೆಟ್ ಮೇಲೆ ಅಪಾರ ನಿರೀಕ್ಷೆ; ಹೊಸ ದಾಖಲೆಗೆ ಮುಂದಾದ ಸಿಎಂ ಸಿದ್ದರಾಮಯ್ಯ..!

Share :

Published February 16, 2024 at 7:14am

Update February 16, 2024 at 7:15am

  ‘ಗ್ಯಾರಂಟಿ’ ಸರ್ಕಾರದಿಂದ ಯಾರಿಗೆಲ್ಲಾ ಸಿಹಿ, ಯಾರಿಗೆ ಕಹಿ?

  ಇಂದು ಬೆಳಗ್ಗೆ 10.15ಕ್ಕೆ ಸಿದ್ದರಾಮಯ್ಯ ಬಜೆಟ್ ಮಂಡನೆ

  ಬಹುತೇಕ ಇಲಾಖೆಗೆ ಹೆಚ್ಚುವರಿ ಅನುದಾನ ಅನುಮಾನ

ಕೇಂದ್ರ ಮಧ್ಯಂತರ ಬಜೆಟ್​ ಮಂಡನೆ ಬೆನ್ನಲ್ಲೇ ಇಂದು ರಾಜ್ಯದ ಆಯವ್ಯಯ ಲೆಕ್ಕವನ್ನ ಸಿಎಂ ಸಿದ್ದರಾಮಯ್ಯ ಮಂಡಿಸಲಿದ್ದಾರೆ. ಒಂದ್ಕಡೆ ಗ್ಯಾರಂಟಿ ಯೋಜನೆ, ಮತ್ತೊಂದೆಡೆ ಸಾಲದ ಹೊರೆ. ಈ ನಡುವೆ ಲೋಕ ಸಮರ ಹಿನ್ನೆಲೆ ಜನಪರ ಯೋಜನೆ ನೀಡಬೇಕಾದ ಸ್ಥಿತಿ ಇದ್ದು ಜನರಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿವೆ. ಇದೇ ವೇಳೆ ಸಿಎಂ ಬಜೆಟ್‌ ಮಂಡಿಸುವಲ್ಲಿ ದಾಖಲೆ ಬರೆಯಲಿದ್ದಾರೆ.

ಫೆಬ್ರವರಿ ಬಂದ್ರೆ ಸಾಕು ಬಜೆಟ್​ಗಳ ಮೇಲೆಯೇ ಎಲ್ಲರ ಕಣ್ಣು ನೆಟ್ಟಿರುತ್ತದೆ. ಜನಪರ ಘೋಷಣೆಗಳನ್ನು ಕೇಳಲು ಜನರ ಕಿವಿಗಳು ಹಾತೊರೆಯುತ್ತಿರುತ್ತವೆ. ಸದ್ಯ ಇದೇ ಬಜೆಟ್​ ಕುತೂಹಲ, ನಿರೀಕ್ಷೆಗಳು ರಾಜ್ಯದಲ್ಲೂ ಗರಿಗೆದರಿವೆ. ಅದರಲ್ಲೂ ಬರಗಾಲ, ಗ್ಯಾರಂಟಿ ಹಾಗೂ ಕೇಂದ್ರದ ಅನುದಾನ ತಾರತಮ್ಯ ಹೋರಾಟದ ಬೆನ್ನಲ್ಲೇ ಈ ಬಾರಿಯ ರಾಜ್ಯ ಬಜೆಟ್ ಹಲವು ನಿರೀಕ್ಷೆ ಹುಟ್ಟು ಹಾಕಿದೆ. ಅದರಲ್ಲೂ ಲೋಕಸಭೆ ಚುನಾವಣೆಗೆ ಹೊತ್ತಲ್ಲೇ ಬಜೆಟ್ ಮಂಡನೆಯಾಗುತ್ತಿದ್ದು ಮತದಾರರ ಮನವೋಲೈಕೆಗೆ ಕಾಂಗ್ರೆಸ್ ಸರ್ಕಾರ ಮಹತ್ವದ ಘೋಷಣೆಗಳನ್ನ ಹೊರಡಿಸುನ ನಿರೀಕ್ಷೆಗಳಿವೆ. ಶುಭ ಶುಕ್ರವಾರದಂದು ಮಂಡನೆಯಾಗಲಿರುವ ಬಜೆಟ್‌ ರಾಜ್ಯದ ಜನತೆಗೆ ಶುಕ್ರದೆಸೆ ತರಲಿದೆ ಎಂಬ ಆಶಾಭಾವನೆ ಮೂಡಿದೆ.

ಬಜೆಟ್ 3.80 ಲಕ್ಷ ಕೋಟಿ ದಾಟುವ ನಿರೀಕ್ಷೆ
ಕರುನಾಡ ಜನತೆಗೆ ಭಾಗ್ಯಗಳ ಗೋಚಲನ್ನೇ ಕೊಟ್ಟಿದ್ದ ಸಿಎಂ ಸಿದ್ದರಾಮಯ್ಯ ಮತ್ತೊಂದು ಬಜೆಟ್ ಮಂಡನೆಗೆ ಸಜ್ಜಾಗಿದ್ದಾರೆ. ಇಂದು 15ನೇ ಬಾರಿ ಬಜೆಟ್​​​ ಮಂಡಿಸುವ ಮೂಲಕ ಸಿದ್ದರಾಮಯ್ಯ ದಾಖಲೆಯನ್ನ ಬರೆಯಲಿದ್ದಾರೆ. ಹಣಕಾಸು ಸಚಿವರಾಗಿ 7 ಬಾರಿ ಹಾಗೂ ಸಿಎಂ ಆಗಿ 7 ಬಾರಿ ಸಿದ್ದರಾಮಯ್ಯ ಬಜೆಟ್‌ ಮಂಡಿಸಿದ್ದಾರೆ. ಇಂದು ಮುಖ್ಯಮಂತ್ರಿಯಾಗಿ 8ನೇ ಬಾರಿಗೆ ಬಜೆಟ್ ಮಂಡಿಸಿ ರೆಕಾರ್ಡ್‌ ರಾಮಯ್ಯ ಆಗಿ ಹೊರಹೊಮ್ಮಲಿದ್ದಾರೆ.

ಸಿದ್ದು ಲೆಕ್ಕ!

 • ಇಂದು ಬೆಳಗ್ಗೆ 10.15ಕ್ಕೆ ಸಿದ್ದರಾಮಯ್ಯ ಬಜೆಟ್ ಮಂಡನೆ
 • 15ನೇ ಬಾರಿ ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆ
 • ರಾಜ್ಯದ ಬಜೆಟ್ ಗಾತ್ರದಲ್ಲಿ ಗಣನೀಯ ಏರಿಕೆ ಸಾಧ್ಯತೆ
 • 2023-24ರ ಬಜೆಟ್ ಗಾತ್ರ ₹3,27,747 ಕೋಟಿಗಳಾಗಿತ್ತು
 • 2024-25ರ ಬಜೆಟ್ ಗಾತ್ರ ₹3.8 ಲಕ್ಷ ಕೋಟಿ ರೂಪಾಯಿ
 • ಬಜೆಟ್‌ನಲ್ಲಿ ಸಾಲವು ಲಕ್ಷ ಕೋಟಿ ದಾಟುವ ಸಾಧ್ಯತೆ

ರಾಜ್ಯದಲ್ಲಿ ಬರದ ಛಾಯೆ ಆವರಿಸಿದ್ದು, ಸರ್ಕಾರದ ಆದಾಯವೂ ಕುಂಠಿತವಾಗಿದೆ. ಅಲ್ಲದೇ ಕೇಂದ್ರ ಸರ್ಕಾರವೂ ಬರ ಪರಿಹಾರ ಸೇರಿದಂತೆ ರಾಜ್ಯದ ಅನುದಾನವನ್ನ ನೀಡದೇ ತಡೆಹಿಡಿದಿದೆ. ಇದ್ರಿಂದ ಸರ್ಕಾರದ ಇಲಾಖೆಗಳಿಗೆ ಅನುದಾನದ ಬಿಸಿ ತಟ್ಟುವ ಸಾಧ್ಯತೆ ಇದೆ.

‘ಅನುದಾನ’ ಅನುಮಾನ

 • ಬಹುತೇಕ ಇಲಾಖೆಗೆ ಹೆಚ್ಚುವರಿ ಅನುದಾನ ಅನುಮಾನ
 • ಶೇ.5 ರಿಂದ ಶೇ.10ರಷ್ಟು ಅನುದಾನ ನೀಡೋದು ಡೌಟ್
 • ಆಯವ್ಯಯದಲ್ಲಿ ‘ಪಂಚ’ ಗ್ಯಾರಂಟಿಗಳದ್ದೇ ಪಾರುಪತ್ಯ
 • ಗ್ಯಾರಂಟಿಗಳಿಗೆ ಬರೋಬ್ಬರಿ ₹58 ಸಾವಿರ ಕೋಟಿ ವೆಚ್ಚ
 • ಬಜೆಟ್‌ ಗಾತ್ರ ಹಿಗ್ಗಿದರೂ ಗ್ಯಾರಂಟಿಗೆ ವಿನಿಯೋಗ ನಿಶ್ಚಿತ
 • ತುರ್ತು ಪ್ರಸ್ತಾವನೆಗಳಿಗೆ ಅವಕಾಶ ನೀಡುವ ಲೆಕ್ಕಾಚಾರ
 • ಅಗತ್ಯಗಳಿಗಷ್ಟೆ ಪ್ರಸ್ತಾವ ಸಲ್ಲಿಕೆಗೆ ಆರ್ಥಿಕ ಇಲಾಖೆ ಸೂಚನೆ

ಗ್ಯಾರಂಟಿಗಳ ಅನುಷ್ಠಾನದ ನಡುವೆ ಉಳಿದ ಯೋಜನೆಗಳಿಗೆ ಹಣಕಾಸು ಹೊಂದಿಸುವುದು ಸವಾಲಾಗಿದೆ. ಈ ಮಧ್ಯೆ ಬೆಂಗಳೂರಿಗೆ ಕಾಂಗ್ರೆಸ್ ಸರ್ಕಾರ ಬಂಪರ್ ನೀಡುವ ಸಾಧ್ಯತೆ ಇದೆ.

ಬ್ರ್ಯಾಂಡ್ ಬೆಂಗಳೂರಿಗೇನು?

 • ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಪರಿಹಾರ ಸಾಧ್ಯತೆ
 • ಟ್ರಾಫಿಕ್ ಸಮಸ್ಯೆ ತಡೆಗೆ ಮಹತ್ವದ ಘೋಷಣೆ ನಿರೀಕ್ಷೆ
 • ‘ಬ್ರ್ಯಾಂಡ್ ಬೆಂಗಳೂರು’ಗೆ ₹45 ಸಾವಿರ ಕೋಟಿ ನೀಡಿಕೆ
 • ನಮ್ಮ ಮೆಟ್ರೋಗೆ ₹30 ಸಾವಿರ ಕೋಟಿ ಹಂಚಿಕೆ ಸಾಧ್ಯತೆ

ಒಟ್ಟಾರೆ ಲೋಕಸಭೆ ಸಮರದ ಹೊತ್ತಲ್ಲಿ ರಾಜ್ಯ ಬಜೆಟ್‌ ಮೇಲೆ ಭಾರೀ ನಿರೀಕ್ಷೆಗಳೇ ಮೂಡಿವೆ. ಜೊತೆಗೆ ಮೈಸೂರು ಕರ್ನಾಟಕ, ಮಧ್ಯಕರ್ನಾಟಕ, ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕಕ್ಕೆ ಏನೆಲ್ಲಾ ಭರಪೂರ ಗಿಫ್ಟ್ ಸಿಗುತ್ತೆ ಅಂತ ರಾಜ್ಯದ ಜನ ಕಾತರದಿಂದ ಕಾಯ್ತಿದ್ದಾರೆ.. ಶುಭಶುಕ್ರವಾರದ ಬಜೆಟ್ ಯಾರಿಗೆಲ್ಲಾ ಶುಕ್ರದೆಸೆ ತರುತ್ತೆ ಅನ್ನೋದೇ ಕೌತುಕ.

ವಿಶೇಷ ವರದಿ: ಹರೀಶ್ ಕಾಕೋಳ್, ಪೊಲಿಟಿಕಲ್ ಬ್ಯುರೋ, ನ್ಯೂಸ್‌ಫಸ್ಟ್‌

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಬಜೆಟ್ ಮೇಲೆ ಅಪಾರ ನಿರೀಕ್ಷೆ; ಹೊಸ ದಾಖಲೆಗೆ ಮುಂದಾದ ಸಿಎಂ ಸಿದ್ದರಾಮಯ್ಯ..!

https://newsfirstlive.com/wp-content/uploads/2024/02/SIDDU-LEKKA.jpg

Load More