ಆಂಧ್ರಕ್ಕೆ 4 ಕುಮ್ಕಿ ಆನೆ ಕಳುಹಿಸಿದ ಕರ್ನಾಟಕ; ಕಾರಣವೇನು? ಪವನ್ ಕಲ್ಯಾಣ್ ಏನಂದ್ರು?

author-image
admin
Updated On
ಆಂಧ್ರಕ್ಕೆ 4 ಕುಮ್ಕಿ ಆನೆ ಕಳುಹಿಸಿದ ಕರ್ನಾಟಕ; ಕಾರಣವೇನು? ಪವನ್ ಕಲ್ಯಾಣ್ ಏನಂದ್ರು?
Advertisment
  • ಆಂಧ್ರಪ್ರದೇಶಕ್ಕೆ 4 ಕುಮ್ಕಿ ಆನೆಗಳನ್ನ ಹಸ್ತಾಂತರ ಮಾಡಿದ ಸರ್ಕಾರ
  • ಕರ್ನಾಟಕದ ಸರ್ಕಾರ ಹಾಗೂ ಜನತೆಗೆ ನಾವು ಧನ್ಯವಾದ ತಿಳಿಸುತ್ತೇನೆ
  • ಆನೆಗಳಿಗೆ ಏನೇ ಸಮಸ್ಯೆ ಆದರೂ ನಾನೇ ಹೊಣೆ ಎಂದ ಪವನ್ ಕಲ್ಯಾಣ್‌

ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಆಂಧ್ರಪ್ರದೇಶಕ್ಕೆ 4 ಕುಮ್ಕಿ ಆನೆಗಳನ್ನ ಹಸ್ತಾಂತರ ಮಾಡಿದೆ. ವಿಧಾನಸೌಧ ಮುಂಭಾಗದ ಭವ್ಯ ಮೆಟ್ಟಿಲುಗಳ ಮೇಲೆ ಈ ಹಸ್ತಾಂತರ ಕಾರ್ಯಕ್ರಮ ನಡೆದಿದೆ. ಡಿಸಿಎಂ ಪವನ್ ಕಲ್ಯಾಣ್ ಅವರು ಆನೆಗಳ ಹಸ್ತಾಂತರಿಸುವ ದಾಖಲೆಯನ್ನು ಸ್ವೀಕಾರ ಮಾಡಿದ್ದಾರೆ.

ವಿಧಾನಸೌಧ ಮುಂಭಾಗ ಜ್ಯೂನಿಯರ್ ಅಭಿಮನ್ಯು, ರಂಜನ್, ಕೃಷ್ಣ, ದೇವ ಆನೆಗಳಿಗೆ ಪೂಜೆ ನೆರವೇರಿಸಲಾಯಿತು. ಯುದ್ಧಕ್ಕೆ ಹೋಗೋ ಸೈನಿಕರಂತೆ ರಾಜ್ಯ ಸರ್ಕಾರ ಆಂಧ್ರಪ್ರದೇಶಕ್ಕೆ ಈ 4 ಕುುಮ್ಕಿ ಆನೆಗಳನ್ನ ಹಸ್ತಾಂತರ ಮಾಡಿದೆ. ಮಹೇಂದ್ರ ಆನೆ ಕುಮ್ಕಿ ಆನೆಗಳ ಬೆಂಬಲಕ್ಕೆ ಬಂದಿದ್ದು, ಆಂಧ್ರಪ್ರದೇಶಕ್ಕೆ ಕಳಿಸಿದ ಬಳಿಕ ವಾಪಸ್ ಆಗಲಿದೆ.

publive-image

ಆಂಧ್ರಪ್ರದೇಶಕ್ಕೆ ರಾಜ್ಯದ ಕುಮ್ಮಿ ಆನೆಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಅರಣ್ಯ ಸಚಿವ ಈಶ್ವರ್ ಖಂಡ್ರೆ, ಇಂಧನ ಸಚಿವ ಕೆ.ಜೆ.ಜಾರ್ಜ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಭೈರತಿ ಸುರೇಶ್, ಕಾನೂನು ಸಲಹೆಗಾರ ಎ.ಎಸ್‌. ಪೊನ್ನಣ್ಣ, ಆಂಧ್ರ ಡಿಸಿಎಂ ಪವನ್ ಕಲ್ಯಾಣ್‌ ಸೇರಿದಂತೆ ಆಂಧ್ರಪ್ರದೇಶದ ಹಿರಿಯ ಅಧಿಕಾರಿಗಳು ಸಹ ಹಾಜರಿದ್ದರು.

publive-image

ಆನೆ ಹಸ್ತಾಂತರಕ್ಕೆ ಕಾರಣವೇನು?
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕರ್ನಾಟಕ ಸರ್ಕಾರ ಇಂದು 4 ಕುಮ್ಕಿ ಆನೆಗಳನ್ನು ಆಂಧ್ರಪ್ರದೇಶಕ್ಕೆ ಹಸ್ತಾಂತರ ಮಾಡಿದೆ. ರಾಜ್ಯದ ಆನೆಗಳನ್ನ ನೆರೆಯ ರಾಜ್ಯಕ್ಕೆ ಕಳುಹಿಸಲು ಪ್ರಮುಖವಾದ ಕಾರಣ ಅರಣ್ಯ ಭಾಗದಲ್ಲಿ ಕಾಡು ಪ್ರಾಣಿಗಳು ಹಾಗೂ ಮಾನವನ ಸಂಘರ್ಷ ತಪ್ಪಿಸೋದು.

ಪ್ರಾಣಿಗಳನ್ನು ಹಿಡಿಯಲು ಈ ಕುಮ್ಮಿ ಆನೆಗಳನ್ನು ಬಳಕೆ ಮಾಡಲಾಗುತ್ತೆ. ದುಬಾರೆ ಸೇರಿದಂತೆ ಬೇರೆ ಬೇರೆ ಕಡೆ ಈ ಆನೆಗಳಿಗೆ ತರಬೇತಿ ನೀಡಲಾಗಿದೆ. ಮಾನವ-ಕಾಡು ಪ್ರಾಣಿಗಳ ಸಂಘರ್ಷ ತಪ್ಪಿಸಲು ಪಳಗಿಸಿದ ಕುಮ್ಮಿ ಆನೆಗಳನ್ನೇ ಆಂಧ್ರಕ್ಕೆ ಹಸ್ತಾಂತರ ಮಾಡಲಾಗಿದೆ.

publive-image

ಡಿಸಿಎಂ ಪವನ್ ಕಲ್ಯಾಣ್ ಏನಂದ್ರು?
ಕೇವಲ ನಮಗೆ ಆನೆ ಕೋಡೋಕೆ ಸಿದ್ದರಾಮಯ್ಯ ಸರ್ಕಾರ ತೀರ್ಮಾನ ಮಾಡಿದೆ. ಬರೀ ಆನೆ ನೀಡೋದು ಅಲ್ಲ ಸಹೋದರ ರಾಜ್ಯವಾಗಿ ಕರ್ನಾಟಕ ನಮ್ಮ ಜೊತೆಗಿದೆ. ಇದರಿಂದ ಎರಡು ರಾಜ್ಯದ ಅರಣ್ಯ ಸುರಕ್ಷಿತವಾಗಿರುತ್ತೆ. ಕರ್ನಾಟಕದ ಸರ್ಕಾರ ಹಾಗೂ ಜನತೆಗೆ ನಾವು ಧನ್ಯವಾದ ತಿಳಿಸುತ್ತೇನೆ ಎಂದು ಪವನ್ ಕಲ್ಯಾಣ್ ಹೇಳಿದರು.

publive-image

ಇದನ್ನೂ ಓದಿ: KannadaFirst.. ಕನ್ನಡ ಮಾತಾಡಲ್ಲ ಎಂದ ಬ್ಯಾಂಕ್ ಮ್ಯಾನೇಜರ್ ಟ್ರಾನ್ಸ್‌ಫರ್‌; ಕೊನೆಗೂ ಕನ್ನಡಿಗರ ಹೋರಾಟಕ್ಕೆ ಸಿಕ್ತು ಜಯ 

ಇದು 20 ವರ್ಷಗಳ ಕನಸು. ಆಂಧ್ರಪ್ರದೇಶದಲ್ಲಿ 20 ವರ್ಷಗಳಿಂದ ತುಂಬಾ ಜನ ಮೃತಪಟ್ಟಿದ್ದಾರೆ. ಈಗ ಎಲ್ಲ ಸಮಸ್ಯೆ ಬಗೆಹರಿಯುತ್ತೆ. ನಾನು ಸಿಎಂ ಸಿದ್ದರಾಮಯ್ಯ, ಈಶ್ವರ್ ಖಂಡ್ರೆಗೆ ಭರವಸೆ ನೀಡುತ್ತೇನೆ. ಆನೆಗಳನ್ನ ಸುರಕ್ಷಿತವಾಗಿ ನೋಡಿಕೊಳ್ಳುತ್ತೇವೆ. ನಾವು ಭೇಟಿ ನೀಡಿ ಆನೆಗಳ ಯೋಗಕ್ಷೇಮ ನೋಡಿಕೊಳ್ಳುತ್ತೇನೆ. ಆನೆಗಳಿಗೆ ಸಮಸ್ಯೆ ಆದರೆ ಅದಕ್ಕೆ ನಾನೇ ಹೊಣೆ. ಜಯ ಕರ್ನಾಟಕ, ಜಯ ಆಂಧ್ರಪ್ರದೇಶ, ಜಯ ಭಾರತ ಎಂದು ಪವನ್ ಕಲ್ಯಾಣ್ ಅವರು ತಮ್ಮ ಭಾಷಣ ಮುಗಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment