newsfirstkannada.com

ರಾಮನಗರ ವಕೀಲರ ಹೋರಾಟಕ್ಕೆ ಮಣಿದ ಸರ್ಕಾರ; ಗೃಹ ಸಚಿವ ಪರಮೇಶ್ವರ್‌ ಏನಂದ್ರು?

Share :

Published February 21, 2024 at 2:33pm

    40 ವಕೀಲರ ಮೇಲೆ ಎಫ್ಐಆರ್ ದಾಖಲು ಮಾಡಿದ್ದ PSI ಸಸ್ಪೆಂಡ್

    ವಕೀಲ ಚಾಂದ್ ಪಾಷಾ ಮೇಲೂ ಕ್ರಮ ಕೈಗೊಳ್ಳಲು ಸರ್ಕಾರ ನಿರ್ಧಾರ

    ವಕೀಲರ ಪರ ಬಿಜೆಪಿ ಹೋರಾಟಕ್ಕೆ ಜಯ ಸಿಕ್ಕಿದೆ ಎಂದ ಅಶೋಕ್

ರಾಮನಗರದಲ್ಲಿ ನಡೆಯುತ್ತಿರುವ ವಕೀಲರು-ಪೊಲೀಸರ ಸಂಘರ್ಷದ ಬಿಸಿ ಸರ್ಕಾರಕ್ಕೆ ತಟ್ಟಿದೆ. ವಕೀಲರ ಹೋರಾಟಕ್ಕೆ ಮಣಿದಿರುವ ರಾಜ್ಯ ಸರ್ಕಾರ ಪಿಎಸ್ಐ ಸೈಯದ್ ತನ್ವೀರ್ ಹುಸೇನ್ ಅವರನ್ನು ಅಮಾನತು ಮಾಡಿದೆ.

ಐಜೂರು ಪೊಲೀಸ್‌ ಠಾಣೆ ಪಿಎಸ್ಐ ಸೈಯದ್ ತನ್ವೀರ್ ಹುಸೇನ್ ಅವರು 40 ವಕೀಲರ ಮೇಲೆ ಎಫ್ಐಆರ್ ದಾಖಲು ಮಾಡಿದ್ದರು. ಪೊಲೀಸ್‌ ವಿರುದ್ಧ ವಕೀಲರು ರಾಮನಗರದಲ್ಲಿ ಉಗ್ರ ಹೋರಾಟ ನಡೆಸಿದ್ದು, ರಾಜಕೀಯ ಟ್ವಿಸ್ಟ್ ಪಡೆದುಕೊಂಡಿತ್ತು.

ಇದನ್ನೂ ಓದಿ: VIDEO: ಡಿಕೆ ಬ್ರದರ್ಸ್​​ಗೆ ಬಿಜೆಪಿ ಆಫರ್​ ಕೊಟ್ಟಿತ್ತಾ? ನ್ಯೂಸ್ ಫಸ್ಟ್ ಸಂದರ್ಶನದಲ್ಲಿ ಡಿ.ಕೆ ಸುರೇಶ್ ಹೇಳಿದ್ದೇನು?

ರಾಮನಗರದ ವಕೀಲರ ಹೋರಾಟದ ವಿಚಾರ ವಿಧಾನಸಭಾ ಅಧಿವೇಶನದಲ್ಲೂ ಪ್ರತಿಧ್ವನಿಸಿದೆ. ಈ ಬಗ್ಗೆ ಚರ್ಚೆ ನಡೆಸಿದ ಬಿಜೆಪಿ ನಾಯಕರು ಪಿಎಸ್ಐ ತನ್ವೀರ್‌ ಹುಸೇನ್‌ ಸಸ್ಪೆಂಡ್ ಅಮಾನತಿಗೆ ಪಟ್ಟು ಹಿಡಿದಿದ್ದರು. ವಿಪಕ್ಷ ನಾಯಕರ ಪ್ರಶ್ನೆಗೆ ಇಂದು ಗೃಹ ಸಚಿವ ಪರಮೇಶ್ವರ್ ಅವರು ಉತ್ತರ ನೀಡಿದ್ದಾರೆ.

ಪಿಎಸ್ಐ ತನ್ವೀರ್ ಹುಸೇನ್​ ಅವರನ್ನು ಅಮಾನತ್ತು ಮಾಡಿದ್ದೇವೆ. ವಕೀಲ ಚಾಂದ್ ಪಾಷಾ ಮೇಲೆ ಕೂಡ ಕಠಿಣ ಕ್ರಮ ಆಗುತ್ತೆ ಎಂದು ಕಲಾಪಕ್ಕೆ ಗೃಹ ಸಚಿವ ಜಿ.ಪರಮೇಶ್ವರ್ ಉತ್ತರ ನೀಡಿದರು. ಸರ್ಕಾರದ ನಡೆಯನ್ನು ಸ್ವಾಗತಿಸಿದ ವಿಪಕ್ಷ ನಾಯಕ ಆರ್‌.ಅಶೋಕ್ ಅವರು ನಮ್ಮ ಹೋರಾಟಕ್ಕೆ ಜಯವಾಗಿದೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಮನಗರ ವಕೀಲರ ಹೋರಾಟಕ್ಕೆ ಮಣಿದ ಸರ್ಕಾರ; ಗೃಹ ಸಚಿವ ಪರಮೇಶ್ವರ್‌ ಏನಂದ್ರು?

https://newsfirstlive.com/wp-content/uploads/2024/02/Parameshwar-On-Ramnagar-Advocates.jpg

Load More