/newsfirstlive-kannada/media/post_attachments/wp-content/uploads/2023/12/Dinesh-Gundurao-1.jpg)
ನ್ಯಾಷನಲ್ ಹೆಲ್ತ್ ಮಿಷನ್ (National Health Mission) ಅಡಿ ಖಾಲಿ ಇರುವ ಹುದ್ದೆಯ ಭರ್ತಿಗೆ ಆರೋಗ್ಯ ಇಲಾಖೆ ಸಾಕಷ್ಟು ವರ್ಷಗಳಿಂದ ಕಸರತ್ತು ನಡೆಸುತ್ತಿದೆ. ಆದರೆ ತಜ್ಞ ವೈದ್ಯರು ಸೇರಿ ಸಿಬ್ಬಂದಿ NHM ನೌಕರರ ಕೆಲಸಕ್ಕೆ ಸೇರಲು ಹಿಂದೇಟು ಹಾಕುತ್ತಿದ್ದಾರೆ. ಇದನ್ನ ಅರ್ಥ ಮಾಡಿಕೊಂಡು ಆರೋಗ್ಯ ಇಲಾಖೆ ಬಂಪರ್ ಆಫರ್ ಕೊಟ್ಟಿದೆ. ಜೊತೆಗೆ ಸಾಕಷ್ಟು ವರ್ಷಗಳ ಆಂಬ್ಯುಲೆನ್ಸ್ ಸಮಸ್ಯೆಗೂ ಇತಿಶ್ರೀ ಹಾಡಲು ಮುಂದಾಗಿದೆ.
ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕೊವಿಡ್ ವೇಳೆ ಜೀವ ಪಣಕ್ಕಿಟ್ಟು ದುಡಿದಿದ್ದ ನೌಕರರ ಬಗ್ಗೆ ಆರೋಗ್ಯ ಇಲಾಖೆ ದಿವ್ಯ ನಿರ್ಲಕ್ಷ್ಯ ತೋರಿರುವ ಆರೋಪ ಇದೆ. ಈ ಮಧ್ಯೆ ಅದೇ NHM ಖಾಲಿ ಹುದ್ದೆಗೆ ಭರ್ತಿ ಮಾಡಲು ಆರೋಗ್ಯ ಇಲಾಖೆ ಬಂಪರ್ ಆಫರ್ ಕೊಟ್ಟಿದೆ. ವೇತನ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದೆ. ಈ ಮಧ್ಯೆ ಹಾಲಿ ಕೆಲಸ ಮಾಡುತ್ತಿರುವ ನೌಕರರ ಕತೆ ಏನು ಅನ್ನೋ ಪ್ರಶ್ನೆ ಎದ್ದಿದೆ. ಈ ಬಗ್ಗೆ ಖುದ್ದು ಆರೋಗ್ಯ ಸಚಿವರೇ ಶಾಸಕರ ಕಚೇರಿಯಲ್ಲಿ ಪ್ರೆಸ್ ಮೀಟ್ ಮಾಡಿ ಮಾಹಿತಿ ಕೊಟ್ಟಿದ್ದಾರೆ.
NHM ಅಡಿ ಖಾಲಿ ಇರುವ ಹುದ್ದೆ ಸೆಳೆಯಲು ಆರೋಗ್ಯ ಇಲಾಖೆ ಪ್ಲಾನ್ ಮಾಡಿದ್ದು ಸ್ಟಾಫ್ ನರ್ಸ್ ಎಂಬಿಬಿಎಸ್ ಮತ್ತು ತಜ್ಞ ವೈದ್ಯರ ಹುದ್ದೆ ಮಂಜೂರಾಗಿದ್ದು ಹಾಗೇ ಬಾಕಿ ಉಳಿದು ಕೊಂಡಿದೆ. ಸ್ಟಾಫ್ ನರ್ಸ್ 9041 ಹುದ್ದೆ ಮಂಜುರಾದ್ರೆ 936 ಹುದ್ದೆ ಖಾಲಿ ಇದೆ. MBBS ವೈದ್ಯರ ಹುದ್ದೆ 1398 ಮಂಜುರಾದರೆ 579 ಬಾಕಿ ಉಳಿದು ಕೊಂಡಿದೆ. ತಜ್ಞ ವೈದ್ಯರ ಹುದ್ದೆ 899 ಮಂಜೂರಾದರೆ 305 ಹುದ್ದೆ ಬಾಕಿ ಉಳಿದು ಕೊಂಡಿದೆ. NHM ಯೋಜನೆ ಅಡಿ ಹೊಸದಾಗಿ ಹುದ್ದೆಗೆ ಸೇರಿ ಕೊಳ್ಳುವವರಿಗೆ ಒನ್ ಟು ಡಬಲ್ ಸಂಬಳ ಪರಿಷ್ಕರಣೆಗೆ ಆರೋಗ್ಯ ಇಲಾಖೆ ಮುಂದಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಸಹಾಯಕ ವ್ಯವಸ್ಥಾಪಕ ಉದ್ಯೋಗಗಳಿಗೆ ಅರ್ಜಿ ಆಹ್ವಾನ.. ಆರಂಭದಲ್ಲೇ 48,000 ರೂಪಾಯಿ ಸಂಬಳ
MBBS ವೈದ್ಯರ ವೇತನ 60 ಸಾವಿರಕ್ಕೆ ಏರಿಕೆ ಮಾಡಲಾಗಿದೆ. 30 ಪರ್ಸೆಂಟ್ ಗು ಅಧಿಕ ವೇತನ ಹೆಚ್ಚಳ ಮಾಡಿದ್ದು ಪ್ರಸ್ತುತ 46 ಸಾವಿರದ 895 - 50 ಸಾವಿರ ವೇತನ ಇದೆ ಸ್ಟಾಫ್ ನರ್ಸ್ ಗೆ ಕೂಡ 14 ಸಾವಿರದ 186 ರಿಂದ 18 ಸಾವಿರದ 774 ರ ವರೆಗೆ ಸಂಬಳ ಇದೆ. ಇವರ ಸ್ಯಾಲರಿ ಕೂಡ 22 ಸಾವಿರಕ್ಕೆ ಪರಿಷ್ಕರಣೆ ಮಾಡಲು ನಿರ್ಧಾರ ಮಾಡಲಾಗಿದೆ.
ಇನ್ನು ತಜ್ಞ ವೈದ್ಯರಿಗೆ ಪ್ರಸ್ತುತ 1 ಲಕ್ಷದ 10 ಸಾವಿರದಿಂದ 1 ಲಕ್ಷದ 30 ಸಾವಿರ ಸಂಬಳ ಇದೆ. ಹೊಸದಾಗಿ ಸೇರುವವರಿಗೆ 1 ಲಕ್ಷದ 40 ಸಾವಿರ ವೇತನ ಪರಿಷ್ಕರಣೆ ಮಾಡಲು ನಿರ್ಧಾರ ಮಾಡಲಾಗಿದೆ. ಹಾಲಿ ಕೆಲಸದಲ್ಲಿ ಇರುವವರಿಗೆ ಈ ವೇತನ ಶ್ರೇಣಿ ಅಪ್ಲೈ ಆಗಲ್ಲ. ಬೇಕಾದ್ರೆ ರಿಸೈನ್ ಮಾಡಿ ಪುನಃ ಖಾಲಿ ಇರೋ ಹುದ್ದೆಗೆ ಅಪಾಯಿಂಟ್ ಆಗಬಹುದು ಎಂದು ಆರೋಗ್ಯ ಸಚಿವರು ಹೇಳಿದ್ದಾರೆ.
ಇದನ್ನೂ ಓದಿ: CBSE 12ನೇ ತರಗತಿ: ಈ ಬಾರಿ ವಿಜಯವಾಡ ಇಡೀ ದೇಶಕ್ಕೆ ಫಸ್ಟ್.. ಬೆಂಗಳೂರಿಗೆ ಎಷ್ಟನೇ ಸ್ಥಾನ?
ಆಂಬ್ಯುಲೆನ್ಸ್ ನೌಕರರ ಸಮಸ್ಯೆಗೂ ಮುಕ್ತಿ ಹಾಡಲು ಮುಂದಾಗಿದ್ದು ಸ್ಟೇಟ್ ಆ್ಯಂಬುಲೆನ್ಸ್ ಮಾನಿಟರ್ ಇಂದ ಕಮಂಡ್ ರೂಮ್ವರೆಗೂ ಪ್ರತೀ ಜವಾಬ್ದಾರಿ ಆರೋಗ್ಯ ಇಲಾಖೆ ತೆಕ್ಕೆಗೆ ಬರಲಿದೆ. ಇಷ್ಟು ದಿನ ಖಾಸಗಿ ಕಂಪನಿಗೆ ಆಂಬ್ಯುಲೆನ್ಸ್ ನಿರ್ವಹಣೆ ನೀಡಲಾಗಿತ್ತು. ಆದ್ರೆ ಟೆಂಡರ್ ಕರೆದಾಗ ಬಹಳಷ್ಟು ಗೊಂದಲ ಉಂಟಾಗುತ್ತಿತ್ತು. ಹೀಗಾಗಿ ಇನ್ನೆರಡು ಮೂರು ತಿಂಗಳಲ್ಲಿ ಸಂಪೂರ್ಣವಾಗಿ ಸರ್ಕಾರ ನಿರ್ವಹಿಸಲಿದೆ. ಜಿಲ್ಲಾ ಮಟ್ಟದಲ್ಲಿ ಕಮಾಂಡ್ ಸೆಂಟರ್ ಓಪನ್ ಮಾಡೋದಾಗಿಯೂ ಸಚಿವರು ತಿಳಿಸಿದ್ದಾರೆ.
ಒಟ್ಟಿನಲ್ಲಿ ಆರೋಗ್ಯ ಇಲಾಖೆ ದೀರ್ಘ ಕಾಲಿಕ ಸಮಸ್ಯೆಗೆ ಮುಕ್ತಿ ಕೊಡುವ ನಿಟ್ಟಿನಲ್ಲಿ ಒಂದಷ್ಟು ಯೋಜನೆಗಳ ಆರೋಗ್ಯ ಇಲಾಖೆ ಅನುಷ್ಠಾನ ಮಾಡಲು ಹೊರಟಿದೆ. ಆದ್ರೆ ಈ ಮಾರ್ಗದಲ್ಲಿ ಯಾವ ನೌಕರರಿಗೂ ಅನ್ಯಾಯ ಆಗಬಾರದು ಅನ್ನೋದೇ ಎಲ್ಲಡೆ ಮೂಡಿ ಬರ್ತಾ ಇರೋ ಅಭಿಪ್ರಾಯ.
ಇದನ್ನೂ ಓದಿ: ಇಂಜಿನಿಯರ್ ಕನಸು ಕಂಡ ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್.. ಆದರೆ ಇಲ್ಲೊಂದು ಸಮಸ್ಯೆ ಇದೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ