/newsfirstlive-kannada/media/post_attachments/wp-content/uploads/2025/01/BANGALORE-PALACE-2.jpg)
ಬೆಂಗಳೂರು ಅರಮನೆಯ ಭೂ ಬಳಕೆಯ ವಿಚಾರದಲ್ಲಿ ಮೈಸೂರು ಮಹಾರಾಜರ ಕುಟುಂಬ ಹಾಗೂ ಸರ್ಕಾರದ ನಡುವೆ ಭೀಕರ ಕಾನೂನು ಜಟಾಪಟಿ ನಡೆದ ನಂತರ, ಕೊನೆಗೆ ಸುಪ್ರೀಂಕೋರ್ಟ್​ 3300 ಕೋಟಿ ರಾಜವಂಶಸ್ಥರಿಗೆ ಟಿಡಿಆರ್ ವರ್ಗಾವಣೆ ಮಾಡಬೇಕು ಎಂದು ಆದೇಶ ನೀಡಿತ್ತು.
ಸದ್ಯ ಅರಮನೆಯ ಒಟ್ಟು ವ್ಯಾಪ್ತಿ 472 ಎಕರೆಯಿದೆ. ರಸ್ತೆ ಅಗಲೀಕರಣಕ್ಕಾಗಿ ಅರಮನೆಯ ಜಾಗ ಬಳಸಿಕೊಳ್ಳುವ ಉದ್ದೇಶದಿಂದ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿತ್ತು. ಈಗ ಸುಗ್ರೀವಾಜ್ಞೆಗೆ ಕಾಯ್ದೆ ರೂಪ ಕೊಡಲು ವಿಧೇಯಕ ಮಂಡನೆ ಮಾಡಲು ಸರ್ಕಾರ ಸಜ್ಜಾಗಿದೆ. ವಿಧೇಯಕ ಪ್ರಕಾರ ರಸ್ತೆ ಅಗಲೀಕರಣಕ್ಕೆ ಬೆಂಗಳೂರು ಅರಮನೆ ಜಾಗವನ್ನು ಸರ್ಕಾರ ಬಳಸಿಕೊಳ್ಳಬಹುದು ಆದರೆ ರಾಜವಂಶಸ್ಥರಿಗೆ 3300 ಕೋಟಿ ರೂಪಾಯಿಯನ್ನು ಟಿಡಿಆರ್ ವರ್ಗಾವಣೆ ಮಾಡುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿತ್ತು.
ಇದನ್ನೂ ಓದಿ:ಬಂಧನ ಬಳಿಕ ಸೋತು ಸೊರಗಿ ಹೋದ ನಟಿ ರನ್ಯಾ; Exclusive Photo
ಇದರಿಂದ ಸರ್ಕಾರದ ಮೇಲೆ ಭಾರೀ ಆರ್ಥಿಕ ಹೊಡೆತ ಆಗುತ್ತೆ ಅಂತ ಈ ಹಿಂದೆ ಸರ್ಕಾರ ಟಿಡಿಆರ್​ ಕೊಡದಿರುವ ನಿರ್ಧಾರ ಮಾಡಿತ್ತು. ನಿನ್ನೆ ನಡೆದ ಸಂಪುಟ ಸಭೆಯಲ್ಲಿ ಟಿಡಿಆರ್​ ವರ್ಗಾವಣೆ ಹಣದ ಮೌಲ್ಯವನ್ನು ಸುಪ್ರೀಂಕೋರ್ಟ್​​ನಲ್ಲಿ ಡಿಪಾಸಿಟ್ ಮಾಡಲು ನಿರ್ಧಾರ ಮಾಡಲಾಗಿದೆ. ಆ ಮೇಲೆ. ವಿಧಾನ ಸೌಧದಲ್ಲಿ ಇಂದು ವಿಧೇಯಕ ಮಂಡನೆ ಮಾಡಲಾಯಿತು. ಇದೇ ವಿಚಾರವಾಗಿ ಬಿಜೆಪಿ ನಾಯಕ ಅರವಿಂದ್ ಬೆಲ್ಲದ್ ಮಹಾರಾಜ ವಂಶದ ತಂಟೆಗೆ ಹೋದ್ರೆ ಚಾಮುಂಡೇಶ್ವರಿ ನಿಮಗೆ ಶಾಪ ಹಾಕ್ತಾಳೆ ಎಂದು ಗುಡುಗಿದ್ದಾರೆ.
ಬೆಂಗಳೂರು ಅರಮನೆ ವಿಧೇಯಕಕ್ಕೆ ಬಿಜೆಪಿ ಪ್ರತಿಪಕ್ಷದ ಉಪನಾಯಕ ಅರವಿಂದ್​​ ಬೆಲ್ಲದ್ ಆಕ್ಷೇಪವ್ಯಕ್ತಪಡಿಸಿದರು. ಬೆಂಗಳೂರು ಅರಮನೆ ಮೈಸೂರು ಮಹಾರಾಜರ ಮನೆತನಕ್ಕೆ ಸೇರಿದ್ದು. ಬ್ರಿಟಿಷರಿಗೆ ಮಾದರಿಯಾಗಿ ಆಡಳಿತ ಮಾಡಿದವರು ಮೈಸೂರು ಮಹಾರಾಜರು. ನಮ್ಮಲ್ಲೂ ಅಂತಹ ಆಡಳಿತ ಬರಬೇಕು ಎಂದು ಬಯಸಿದ್ದರು. ಉತ್ತರ ಕರ್ನಾಟಕ ನಮ್ಮ ಕಡೆಯವರು ಅದರ ಭಾಗವಾಗಬೇಕು ಎಂದು ಬಯಸಿದ್ದರು. ಅಂತಹ ಮಹಾರಾಜರ ವಂಶದ ತಂಟೆಗೆ ಹೋದ್ರೆ ನಿಮಗೆ ಆ ಚಾಮುಂಡೇಶ್ವರಿ ಶಾಪ ಹಾಕ್ತಾಳೆ, ಜನ ಶಾಪ ಹಾಕ್ತಾರೆ ಎಂದು ಗುಡುಗಿದ್ದಾರೆ.
ಟಿಡಿಆರ್ ಕೊಡೊದ್ರಿಂದ ಸರ್ಕಾರಕ್ಕೆ ಆರ್ಥಿಕ ನಷ್ಟ ಆಗೋದಿಲ್ಲ. ಟಿಡಿಆರ್​ ಅಂದ್ರೆ ಅಭಿವೃದ್ಧಿ ಹಕ್ಕುಗಳ ವರ್ಗಾವಣೆ ಇದ್ದಂತೆ ಹಣ ಕೊಡೊದಲ್ಲ, ಅದು ಹಕ್ಕುಗಳ ವರ್ಗಾವಣೆ ಅಷ್ಟೇ, ಸರ್ಕಾರ ಮಹಾರಾಜರ ಕುಟುಂಬದ ಜೊತೆ ವೈಷಮ್ಯದ ರಾಜಕಾರಣ ಮಾಡ್ತಿದೆ, ಮೈಸೂರು ಮಹಾರಾಜರ ತ್ಯಾಗವನ್ನು ಸ್ಮರಿಸಬೇಕು ಎಂದು ಬೆಲ್ಲದ್ ಮಹಾರಾಜರ ತ್ಯಾಗವನ್ನು ಶ್ಲಾಘಿಸಿದರು. ಬೆಲ್ಲದ್ ಆರೋಪಕ್ಕೆ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us