/newsfirstlive-kannada/media/post_attachments/wp-content/uploads/2023/07/Gruhalaxmi.jpg)
ಗೃಹಲಕ್ಷ್ಮೀ ಯೋಜನೆಗೆ ದೊಡ್ಡ ಸರ್ಜರಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ ಎಂಬ ಸುದ್ದಿಗಳು ಈಗ ಚಾಲ್ತಿಯಲ್ಲಿವೆ. ಫಲಾನುಭವಿಗಳನ್ನು ಫಿಲ್ಟರ್ ಮಾಡೋಕೆ ರಾಜ್ಯ ಸರ್ಕಾರ ಮುಂದಾಯ್ತಾ ಅನ್ನೋ ಅನುಮಾನಗಳು ಕಾಡುತ್ತಿವೆ. ಆರ್ಥಿಕವಾಗಿ ಸಬಲರಾಗಿರುವ ಮಹಿಳೆಯರನ್ನು ಯೋಜನೆಯಿಂದ ಕೈಬಿಡುವ ವಿಚಾರದಲ್ಲಿ ರಾಜ್ಯ ಸರ್ಕಾರವಿದೆ ಎಂದು ತಿಳಿದು ಬಂದಿದೆ. ರಾಜ್ಯದಲ್ಲಿ ಅಂದಾಜು ಒಂದೂವರೆ ಕೋಟಿ ಗೃಹಲಕ್ಷ್ಮೀ ಫಲಾನುಭವಿಗಳಿದ್ದಾರೆ. ಅದರಲ್ಲಿ ಈಗಾಗಲೇ 2 ಲಕ್ಷಕ್ಕೂ ಅಧಿಕ ಮಹಿಳೆಯರನ್ನು ಯೋಜನೆಯಿಂದ ಕೈಬಿಡಲಾಗಿದೆ. ತೆರಿಗೆ ಮತ್ತು ಜಿಎಸ್​ಟಿ ಪಾವತಿ ಮಾಡುತ್ತಾರೆ ಎಂಬ ಕಾರಣಕ್ಕೆ ಅವರನ್ನು ಅನರ್ಹಗೊಳಿಸಲಾಗಿದೆ ಎನ್ನಲಾಗಿದೆ.
ಹಾಗಿದ್ದರೂ ಕೆಲವು ಮಹಿಳೆಯರು ಗೃಹಲಕ್ಷ್ಮೀ ಹಣವನ್ನು ಪಡೆಯುತ್ತಿದ್ದಾರೆ ಎನ್ನಲಾಗಿದೆ. ಆರ್ಥಿಕವಾಗಿ ಸಬಲರಾಗಿದ್ದರೂ ಹಣ ಪಡೆಯುತ್ತಿದ್ದಾರೆ. ಇಂತವರಿಗೆ ಕಡಿವಾಣ ಹಾಕೋದಕ್ಕೆ ಸರ್ಕಾರ ಈಗ ಹೊಸ ಸರ್ಕಸ್ ಮಾಡುತ್ತಿದೆ. ಹಾಗಾಗಿ ಸ್ವಯಂಪ್ರೇರಿತವಾಗಿ ಹಣ ಬಿಟ್ಟುಕೊಡಿ ಎಂದು ಮನವಿ ಮಾಡಲಾಗ್ತಿದೆ. ನಗರದ ವಿಧಾನಸಭೆ ಕ್ಷೇತ್ರಗಳಲ್ಲಿ ಗ್ಯಾರಂಟಿ ಯೋಜನೆಗಳ ಪರಿಶೀಲನೆ ಸಭೆ ಮಾಡಲಾಗ್ತಿದೆ.
ಈ ವೇಳೆ ಅರ್ಹರದಲ್ಲದ ಮಹಿಳೆಯರು ಹಣ ಪಡೆಯುತ್ತಿರುವುದು ಗಮನಕ್ಕೆ ಬಂದಿದೆ. ಇದು ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುವಂತೆ ಮಾಡ್ತಿದೆ. ಇಂತವರಿಗೆ ಯೋಜನೆಯ ಹಣ ಸಿಗದಂತೆ ಕ್ರಮ ಜರುಗಿಸಿದರೆ ಸ್ವಲ್ಪ ಹಣ ಉಳಿಸುವ ಲೆಕ್ಕಾಚಾರದಲ್ಲಿ ರಾಜ್ಯ ಸರ್ಕಾರವಿದೆ. ಹಾಗಾಗಿ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳ ಆರ್ಥಿಕ ಸ್ಥಿತಿಗತಿ ಬಗ್ಗೆ ಗಮನ ಹರಿಸಲಾಗ್ತಿದೆ. ಫಲಾನುಭವಿಗಳ ಆದಾಯ, ತೆರಿಗೆ ಪಾವತಿ ಮತ್ತೊಮ್ಮೆ ಕಲೆ ಹಾಕುವ ತೀರ್ಮಾನಕ್ಕೆ ಬಂದಿದೆ. ಒಂದು ಕಡೆ ಮೂರು ತಿಂಗಳಿಂದ ಗೃಹಲಕ್ಷ್ಮೀ ಹಣ ಬಂದಿಲ್ಲ, ಮತ್ತೊಂದು ಕಡೆ ಶ್ರೀಮಂತ ಮಹಿಳೆಯರನ್ನು ಗುರುತಿಸುವ ಕೆಲಸ ಆರಂಭವಾಗಿದೆ. ಈ ಎಲ್ಲಾ ಗೊಂದಲದಲ್ಲಿ ಈಗ ರಾಜ್ಯ ಸರ್ಕಾರವಿದೆ.
ಇದನ್ನೂ ಓದಿ:ಮೋದಿ ಟೀಕಿಸೋ ಭರದಲ್ಲಿ ರಾಗಾ ಯಡವಟ್ಟು?ಬ್ಯಾನ್ ಆದ ಚೀನಿ ಡ್ರೋನ್ ಹಾರಿಸಿದ ರಾಹುಲ್​
ರಾಜ್ಯದಲ್ಲಿ 1.28 ಕೋಟಿ ಮಹಿಳೆಯರು ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿದ್ದಾರೆ. ಇದರಲ್ಲಿ ಸುಮಾರು 2 ಲಕ್ಷ ಮಹಿಳೆಯರು ಆದಾಯ ತೆರಿಗೆ ಪಾವತಿಸುತ್ತಿದ್ದಾರೆ. ಕೆಲವರು ಕೆಲವು ವ್ಯವಹಾರಗಳನ್ನು ಮಾಡುತ್ತಾ ಜಿಎಸ್‌ಟಿ ಪಾವತಿ ಸಂಖ್ಯೆಯನ್ನು ಹೊಂದಿದ್ದಾರೆ. ಅಂತಹ ಮಹಿಳೆಯರನ್ನು ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳ ಪಟ್ಟಿಯಿಂದ ಕೈಬಿಡಲಾಗಿದೆ. ಯಾರ ಯಾರು ಗೃಹಲಕ್ಷ್ಮಿ ಯೋಜನೆಗೆ ಅರ್ಹರು? ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ವಿತರಿಸುವ ಅಂತ್ಯೋದಯ, ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆ ಮಾತ್ರ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಯಾಗಲು ಅರ್ಹರಾಗಿರುತ್ತಾರೆ. ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಆದಾಯ ತೆರಿಗೆ ಪಾವತಿದಾರರಾಗಿದ್ದಲ್ಲಿ, ಈ ಯೋಜನೆಯ ಸೌಲಭ್ಯ ಪಡೆಯಲು ಅರ್ಹರಾಗಿರುವುದಿಲ್ಲ. ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಜಿಎಸ್ ಟಿ ರಿಟರ್ನ್ಸ್ ಸಲ್ಲಿಸುವವರಾಗಿದ್ದಲ್ಲಿ ಈ ಯೋಜನೆಯ ಸೌಲಭ್ಯ ಪಡೆಯಲು ಅರ್ಹರಾಗಿರುವುದಿಲ್ಲ ಎಂದು ರಾಜ್ಯ ಸರ್ಕಾರ ತೀರ್ಮಾನಕ್ಕೆ ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us