newsfirstkannada.com

44 ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ; ಶಾಸಕರ ಜತೆ ಕಾಂಗ್ರೆಸ್​​ ಕಾರ್ಯಕರ್ತರಿಗೂ ಸ್ಥಾನಮಾನ

Share :

Published February 28, 2024 at 10:20pm

    ಹೆಚ್.ಎಂ ರೇವಣ್ಣ ಅವರು ಯಾವ ಪ್ರಾಧಿಕಾರಕ್ಕೆ ನೇಮಕವಾಗಿದ್ದಾರೆ?

    ಅಧ್ಯಕ್ಷರ ನೇಮಕ ವಿಳಂಬವಾದರೆ ಚುನಾವಣೆಯ ಮೇಲೆ ಪರಿಣಾಮ

    ಜಿಲ್ಲಾಧ್ಯಕ್ಷರು, ಕಾಂಗ್ರೆಸ್ ಕಾರ್ಯಕರ್ತರಿಗೆ ನಿಗಮ ಮಂಡಳಿಗಳಲ್ಲಿ ಸ್ಥಾನ

ಬೆಂಗಳೂರು: ರಾಜ್ಯದ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರ ಪಟ್ಟಿಗೆ ಅನುಮೋದನೆ ನೀಡಲಾಗಿದೆ. ಲೋಕಸಭಾ ಚುನಾವಣೆಗೆ ತಯಾರಿ ಆರಂಭಿಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಇದರ ಮಧ್ಯೆಯೇ 44 ನಿಗಮ ಮಂಡಳಿಗೆ ಅಧ್ಯಕ್ಷರನ್ನು ನೇಮಕ ಮಾಡಿದೆ.

ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ನಿಗಮ ಮಂಡಳಿಗಳ ಅಧ್ಯಕ್ಷರ ಪಟ್ಟಿಗೆ ಅಸ್ತು ಅಂದಿದ್ದು ಒಟ್ಟು 44 ನಿಗಮ ಮಂಡಳಿಗೆ ಅಧ್ಯಕ್ಷರ ನೇಮಕ ಮಾಡಿದೆ. ಸರ್ಕಾರ, ಕೆಲ ಜಿಲ್ಲಾಧ್ಯಕ್ಷರು, ಕಾಂಗ್ರೆಸ್ ಕಾರ್ಯಕರ್ತರಿಗೆ ನಿಗಮ ಮಂಡಳಿಗಳ ಅಧ್ಯಕ್ಷಗಿರಿಯ ಸ್ಥಾನಮಾನ ನೀಡಿದೆ. ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರಕ್ಕೆ ಹೆಚ್.ಎಂ ರೇವಣ್ಣ ಅವರು ನೇಮಕಗೊಂಡಿದ್ದಾರೆ. ಈಗಾಗಲೇ ಆಯಾ, ಆಯಾ ಇಲಾಖೆಗಳಿಗೆ ಅಧ್ಯಕ್ಷರ ಪಟ್ಟಿಯನ್ನು ರವಾನೆ ಮಾಡಲಾಗಿದ್ದು ಪ್ರತಿಯೊಬ್ಬರಿಗೂ ವೈಯುಕ್ತಿಕವಾಗಿ ನೇಮಕವಾಗಿರುವ ಬಗ್ಗೆ ಆದೇಶ ಕೂಡ ಕಳುಹಿಸಿ ಕೊಡಲಾಗಿದೆ.

ನಿಗಮ, ಮಂಡಳಿಗಳಿಗೆ ಅಧ್ಯಕ್ಷರ ಹೆಸರನ್ನು ನೇಮಕ ಮಾಡುವುದು ವಿಳಂಬವಾಗಿದೆ ಎಂದು ಹೇಳಲಾಗಿದೆ. ಇದು ಇನ್ನಷ್ಟು ತಡವಾದರೆ ಮುಂಬರುವ ಲೋಕಸಭೆ ಚುನಾವಣೆಗೆ ಪೆಟ್ಟು ಬೀಳುವ ಸಾಧ್ಯತೆ ಇದೆ. ಪಕ್ಷದ ಶಾಸಕರು ಮತ್ತು ಮುಖಂಡರು ಉತ್ಸಾಹದ ಕಡಿಮೆಯಾಗಬಹುದು. ಇದನ್ನು ಮನಗಂಡಿರುವ ಕಾಂಗ್ರೆಸ್​ ಸರ್ಕಾರ ನಿಗಮ ಮಂಡಳಿಗಳ ಅಧ್ಯಕ್ಷರ ಪಟ್ಟಿಗೆ ಅನುಮೋದನೆ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

44 ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ; ಶಾಸಕರ ಜತೆ ಕಾಂಗ್ರೆಸ್​​ ಕಾರ್ಯಕರ್ತರಿಗೂ ಸ್ಥಾನಮಾನ

https://newsfirstlive.com/wp-content/uploads/2024/02/Siddaramaiah-CM-1.jpg

Load More