/newsfirstlive-kannada/media/post_attachments/wp-content/uploads/2025/06/RCB-32.jpg)
ಜೂನ್ 4 ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ (Chinnaswamy stampede) ಬಳಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 11 ಮಂದಿ ಜೀವ ಕಳೆದುಕೊಂಡಿದ್ದಾರೆ. ಇದೀಗ, ಸರ್ಕಾರ ಹೈಕೋರ್ಟ್ಗೆ ತನ್ನ ತನಿಖಾ ವರದಿಯನ್ನು ಸಲ್ಲಿಕೆ ಮಾಡಿದ್ದು, ಪೂರ್ವ ಸಿದ್ಧತೆ ಇಲ್ಲದೇ ಕಾರ್ಯಕ್ರಮ ಆಯೋಜನೆ ಮಾಡಿರೋದೇ ದುರ್ಘಟನೆಗೆ ಕಾರಣ ಎಂದಿದೆ.
ಮ್ಯಾಜಿಸ್ಟ್ರೀಯಲ್ ಹಾಗೂ ನ್ಯಾಯಾಂಗ ತನಿಖೆಯ ವರದಿಯನ್ನು ಸರ್ಕಾರ ಸಲ್ಲಿಕೆ ಮಾಡಿದೆ. ಅದರಲ್ಲಿ ಅನಾಹುತಕ್ಕೆ ಕಾರಣವಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ (RCB), ಈವೆಂಟ್ ಮ್ಯಾನೇಜ್ಮೆಂಟ್ DNA, ಕೆಎಸ್ಸಿಎ (KSCA)ಯಲ್ಲಿ ಆಗಿರುವ ಲೋಪಗಳನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಇದನ್ನೂ ಓದಿ: KSCA ಹರಾಜಿನಲ್ಲಿ ರಾಹುಲ್ ದ್ರಾವಿಡ್ ಪುತ್ರ ಅನ್ಸೋಲ್ಡ್..!
ಮುನ್ನೆಚ್ಚರಿಕೆ ಕೈಗೊಳ್ಳುವಲ್ಲಿ ವಿಫಲ
ಆಯೋಜಕರು, ಪೊಲೀಸ್ ಬಂದೋಬಸ್ತ್, ಪೂರ್ವ ನಿಯೋಜನೆ ಬಗ್ಗೆ ಹಾಗೂ ಕಾರ್ಯಕ್ರಮಕ್ಕೆ ಸರಿಯಾದ ಪ್ಲಾನ್ ಮಾಡಿಕೊಳ್ಳದಿರೋದೇ ಘಟನೆಗೆ ಕಾರಣ ಎಂದಿದೆ. ಕಾರ್ಯಕ್ರಮದ ಆಯೋಜಕರು ಮುನ್ನೆಚ್ಚರಿಕೆ ಕೈಗೊಳ್ಳೋದ್ರಲ್ಲಿ ವಿಫಲರಾಗಿದ್ದಾರೆ. ಪ್ರೋಗ್ರಾಮ್ಗೆ ಪ್ರಥಮ ಚಿಕಿತ್ಸೆ, ಬಂದೋಬಸ್ತ್ ವ್ಯವಸ್ಥೆ ಎಲ್ಲಾ ಮಾಡಿಕೊಂಡಿದೆ ಎಂದು ಆರ್ಸಿಬಿ, ಡಿಎನ್ಎ ಹೇಳಿತ್ತು. ಆದರೆ ವೈದ್ಯಕೀಯ ವ್ಯವಸ್ಥೆ ಕಲ್ಪಿಸೋದ್ರಲ್ಲಿ ಆರ್ಸಿಬಿ, ಡಿಎನ್ಎ, ಕೆಎಸ್ಸಿಎ ಫೇಲ್ ಆಗಿವೆ. ವೈದ್ಯಕೀಯ ವ್ಯವಸ್ಥೆ ಜವಾಬ್ದಾರಿ ಇದ್ದರೂ ಮೂರೂ ಸಂಸ್ಥೆಗಳು ನಿರ್ಲಕ್ಷ್ಯ ಮಾಡಿವೆ ಎಂದು ವರದಿಯಲ್ಲಿ ಹೇಳಿದೆ.
ಇದನ್ನೂ ಓದಿ: ಸ್ಟಾರ್ ಗಿರಿ ಮುಂದೆ ಉಳಿದವ್ರು ಕಣ್ಮರೆ.. ಸಿರಾಜ್, ಜೈಸ್ವಾಲ್ ಬಗ್ಗೆ ಗಂಗೂಲಿ ಮಹತ್ವದ ಹೇಳಿಕೆ..!
ಜನ ಸಂದಣಿ ಹೆಚ್ಚಾಗಿ ದುರಂತ ಸಂಭವಿಸುವಾಗ ಸರಿಯಾದ ವ್ಯವಸ್ಥೆ ಇರಲಿಲ್ಲ. ಮುಂಚೆಯೇ ಅನುಮತಿ ಪಡೆದಿದ್ರೆ ಇಲಾಖೆಯಿಂದ ಪ್ಲಾನ್ ಮಾಡಿಕೊಳ್ಳಬಹುದಿತ್ತು. ಅನುಮತಿ ಪಡೆಯದೇ ಇರೋದ್ರಿಂದ ಸರ್ಕಾರದ ಇಲಾಖೆಗಳಿಂದ ವ್ಯವಸ್ಥೆ ಆಗಿರಲಿಲ್ಲ. ಅರ್ಜೆಂಟಾಗಿ ಕಾರ್ಯಕ್ರಮಕ್ಕೆ ಅನುಮತಿ ಕೇಳಿರೋ ಹಿನ್ನೆಲೆಯಲ್ಲಿ ಬಂದೋಬಸ್ತ್, ಎಸ್ಓಪಿ ವ್ಯವಸ್ಥೆ ಮಾಡಿಕೊಳ್ಳುವಲ್ಲಿ ಪೊಲೀಸ್ ಇಲಾಖೆ ಹಾಗೂ ಸಂಬಂಧಪಟ್ಟ ಇಲಾಖೆಗಳು ಫೇಲ್ ಆಗಿವೆ.
ಜನ ಸೇರುವ ಬಗ್ಗೆ ಮಾಹಿತಿ ಹಾಗೂ ಪ್ಲಾನ್ ಮಾಡಿಕೊಳ್ಳೋದ್ರಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ. ಪೊಲೀಸ್ ಬಂದೋಬಸ್ತ್, ಸರ್ಕಾರದ ಪ್ಲಾನಿಂಗ್ಸ್ಗಳಲ್ಲೂ ಫೇಲ್ ಆಗಿರೋದನ್ನು ಸರ್ಕಾರ ಒಪ್ಪಿಕೊಂಡಿದೆ. ದೊಡ್ಡ ಸಂಖ್ಯೆಯಲ್ಲಿ ಜನ ಬರ್ತಾರೆ ಅನ್ನೋ ಅಂದಾಜು ಮಾಡಲು ಆಗಿರಲಿಲ್ಲ. ಅಷ್ಟೊಂದು ಜನ ಸೇರುವ ಬಗ್ಗೆ ಹಾಗೂ ಬಂದೋಬಸ್ತ್ ಪ್ಲಾನ್ ಮಾಡಲು ಪೊಲೀಸರಿಗೆ ಟೈಂ ಇರಲಿಲ್ಲ ಎಂದು ಉಲ್ಲೇಖ ಮಾಡಲಾಗಿದೆ. ಆ ಮೂಲಕ ಕಾರ್ಯಕ್ರಮಕ್ಕೆ ಸರಿಯಾದ ಬಂದೋಬಸ್ತ್ ವ್ಯವಸ್ಥೆ ಆಗಿರಲಿಲ್ಲ ಅನ್ನೋದನ್ನ ಪರೋಕ್ಷವಾಗಿ ವರದಿಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಐಪಿಎಲ್ನಲ್ಲಿ ಮತ್ತೊಂದು ಬಿಗ್ ಡೀಲ್ ವದಂತಿ.. KL ರಾಹುಲ್ ಖರೀದಿಸಲು ಕೆಕೆಆರ್ ಪ್ಲಾನ್..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ