/newsfirstlive-kannada/media/post_attachments/wp-content/uploads/2025/03/CM-SIDDARAMAIAH.jpg)
ಬೆಂಗಳೂರು: ದಶಕದ ಬಳಿಕ ರಾಜ್ಯ ಸರ್ಕಾರ, ಜಾತಿ ಜನಗಣತಿಗೆ ಮೆತ್ತಿದ್ದ ಧೂಳು ಜಾಡಿಸಿದೆ. ಕಳೆದ ವರ್ಷ ಕೈ ಸೇರಿದ್ರೂ ಈಗ ಮುಹೂರ್ತ ಕೂಡಿ ಬಂದಿದೆ. ನಿನ್ನೆ ಸಂಪುಟದಲ್ಲಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ-2015 ಮಂಡನೆ ಆಗಿದೆ. ಸಮಗ್ರ ಚರ್ಚೆಗೆ ಮುಂದಿನ ಗುರುವಾರದ ಸಚಿವ ಸಂಪುಟ ಸಭೆಯ ಮುಹೂರ್ತ ನಿರ್ಣಯ ಆಗಿದೆ.
ಈ ಮಧ್ಯೆ ಬಹು ನಿರೀಕ್ಷಿತ ಜಾತಿ ಗಣತಿ ವರದಿಯ ಅಂಕಿ-ಅಂಶ ಬಹಿರಂಗ ಆಗಿದೆ. ಈ ಸಮೀಕ್ಷೆಗೆ ಒಟ್ಟು 5 ಕೋಟಿ 98 ಲಕ್ಷ 14 ಸಾವಿರದ 942 ಜನರು ಒಳಪಟ್ಟಿದ್ದಾರೆ. ನ್ಯೂಸ್ ಫಸ್ಟ್‌ಗೆ ಸಿಕ್ಕ ಮಾಹಿತಿ ಪ್ರಕಾರ ಜಾತಿವಾರು ಜನಸಂಖ್ಯೆಯ ಅಂಕಿ-ಅಂಶ ಹೀಗಿದೆ.
ಯಾವ ಜಾತಿ ಜನಸಂಖ್ಯೆ ಎಷ್ಟು?
ಪ್ರವರ್ಗ-1ಎ ಜನಸಂಖ್ಯೆ 34,96,638
ಪ್ರವರ್ಗ - 1ಬಿ ಜನಸಂಖ್ಯೆ 73,92,313
ಪ್ರವರ್ಗ- 2ಎ ಜನಸಂಖ್ಯೆ 77,78,209
ಪ್ರವರ್ಗ - 2ಬಿ ಜನಸಂಖ್ಯೆ 75,25,880
ಪ್ರವರ್ಗ- 3ಎ ಜನಸಂಖ್ಯೆ 72,99,577
ಪ್ರವರ್ಗ- 3ಬಿ ಜನಸಂಖ್ಯೆ 81,37,536
ಪರಿಶಿಷ್ಟ ಜಾತಿ ಜನಸಂಖ್ಯೆ- 1,09,29,347
ಪರಿಶಿಷ್ಟ ಪಂಗಡ ಜನಸಂಖ್ಯೆ- 42,81,289
ಸಾಮಾನ್ಯ ವರ್ಗದ ಜನಸಂಖ್ಯೆ- 29,74,153
/newsfirstlive-kannada/media/post_attachments/wp-content/uploads/2025/04/Karnataka-Cast-census-report.jpg)
ಇದನ್ನೂ ಓದಿ: ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯ ವರದಿ ಲೇಟಾಗಿದೆ ಅನ್ನೋದು ಅಪ್ರಸ್ತುತ -ಏನಂದ್ರು ಕಾಂತರಾಜು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us