ಪ್ರಾಸಿಕ್ಯೂಷನ್​ಗೆ ಅನುಮತಿ ಬೆನ್ನಲ್ಲೆ ಚುರುಕಾದ ಸಿದ್ದು ಲೀಗಲ್ ಟೀಂ: ಏನೆಲ್ಲಾ ಸಿದ್ಧತೆಯಾಗ್ತಿದೆ?

author-image
Gopal Kulkarni
Updated On
ರಾಜ್ಯಪಾಲರ ಕೈಯಲ್ಲಿ ಇಂದು ಸಿಎಂ ಸಿದ್ದರಾಮಯ್ಯರ ಭವಿಷ್ಯ; ಪ್ರಾಸಿಕ್ಯೂಷನ್ ಎಂದರೆ ಏನು..?
Advertisment
  • ಮುಡಾ ಹಗರಣದ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದ ರಾಜ್ಯಪಾಲರು
  • ಅನುಮತಿ ಬೆನ್ನಲ್ಲೆ ಅಲರ್ಟ್ ಆದ ಸಿಎಂ ಸಿದ್ದರಾಮಯ್ಯನವರ ಲೀಗಲ್ ಟೀಂ
  • ಮಧ್ಯಾಹ್ನ 12 ಗಂಟೆಗೆ ಹೈಕೋರ್ಟ್​​ನಲ್ಲಿ ರಿಟ್ ಅರ್ಜಿ ಸಲ್ಲಿಸಲು ಸಿದ್ಧತೆ

ಬೆಂಗಳೂರು: ಮುಡಾ ಪ್ರಕರಣದಲ್ಲಿ ಪತ್ನಿ ಅಕ್ರಮವಾಗಿ 14 ಸೈಟ್ ಪಡೆದಿರುವ ಆರೋಪದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್​ಗೆ ರಾಜ್ಯಪಾಲ ಥಾವರ್ ಚೆಂದ ಗೆಹ್ಲೋಟ್​ ಅನುಮತಿ ನೀಡಿದ ಬೆನ್ನೆಲ್ಲೆ ಸಿದ್ದರಾಮಯ್ಯನವರ ಲೀಗಲ್ ಟೀಂ ಅಲರ್ಟ್ ಆಗಿದೆ.

ಇದನ್ನೂ ಓದಿ:ಮೂಡಾ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ.. ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್​​ಗೆ​ ಗವರ್ನರ್ ಅನುಮತಿ

ಇಂದು 12 ಗಂಟೆಗೆ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಲು ಭರದ ಸಿದ್ಧತೆ ನಡೆಸಿದೆ ಸಿದ್ದರಾಮಯ್ಯನವರ ಕಾನೂನು ಪರಿಣಿತರ ತಂಡ. ರಾಜಕೀಯ ದುರುದ್ದೇಶದಿಂದ ಈ ಅನುಮತಿಯನ್ನು ನೀಡಲಾಗಿದೆ ಎನ್ನುವುದರ ಜೊತೆಗೆ ಕಾನೂನಿನ ಮಾನ್ಯತೆಯನ್ನು ಪ್ರಶ್ನಿಸಿ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಲು ಸಜ್ಜಾಗಿದೆ.

publive-image

ಸಿನಿಯರ್ ಪೊನ್ನಣ್ಣ ಅವರ ಕಚೇರಿಯಿಂದ ಅರ್ಜಿ ರೆಡಿಯಾಗಿದ್ದು ಪಿಸಿ ಆ್ಯಕ್ಟ್ ಸೆಕ್ಷನ್ 19ರ ಅಡಿ ನೀಡಿರುವ ಅನುಮತಿಯನ್ನು ರದ್ದುಕೋರಿ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಕೆಯಾಗಲಿದೆ. ಈಗಾಗಲೇ ಸಿದ್ದರಾಮಯ್ಯನವರ ಲೀಗಲ್ ಟೀಂ ಅರ್ಜಿ ರೆಡಿಮಾಡಿಕೊಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment