/newsfirstlive-kannada/media/post_attachments/wp-content/uploads/2025/07/VIRAT-KOHLI-9.jpg)
ಜೂನ್ 4 ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ (Chinnaswamy stampede) ಬಳಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 11 ಮಂದಿ ಜೀವ ಕಳೆದುಕೊಂಡಿದ್ದಾರೆ. ಇದೀಗ, ಸರ್ಕಾರ ಹೈಕೋರ್ಟ್ಗೆ ತನ್ನ ತನಿಖಾ ವರದಿಯನ್ನು ಸಲ್ಲಿಸಿದೆ. ಅದರಲ್ಲಿ ಸರ್ಕಾರ ನೇರವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಅನ್ನು ನೇರವಾಗಿ ದೂಷಿಸಿದೆ.
ಆರ್‌ಸಿಬಿ ತನ್ನ ಸೋಶಿಯಲ್ ಮೀಡಿಯಾದಲ್ಲಿ ವಿರಾಟ್ ಕೊಹ್ಲಿ (Virat Kohli) ಮಾತನಾಡಿದ್ದ ವಿಡಿಯೋವನ್ನು ಸಾರ್ವಜನಿಕವಾಗಿ ಹಂಚಿಕೊಂಡಿದ್ದು ಸೇರಿದಂತೆ ಅನೇಕ ಲೋಪದೋಷಗಳನ್ನು ವರದಿಯಲ್ಲಿ ಎತ್ತಿ ತೋರಿಸಿದೆ. ಪೊಲೀಸರು ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದ್ದರೂ ಸಹ, ಅಗಾಧ ಜನಸಂದಣಿ ಸೇರಿತ್ತು ಎಂದು ಸರ್ಕಾರ ಹೇಳಿದೆ.
ತನಿಖಾ ವರದಿ ಪ್ರಕಾರ.. ಕಾರ್ಯಕ್ರಮದ ಆಯೋಜಕ ಡಿಎನ್‌ಎ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ಸ್ ಪ್ರೈವೇಟ್ ಲಿಮಿಟೆಡ್ (DNA Entertainment Networks) ಜೂನ್ 3 ರಂದು, ಸೆಲೆಬ್ರೇಷನ್ ಇಟ್ಟುಕೊಳ್ಳುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿತ್ತು. ಆದರೆ ಪೊಲೀಸ್ ಇಲಾಖೆಯಿಂದ ಔಪಚಾರಿಕವಾಗಿ ಅನುಮತಿ ಪಡೆದಿರಲಿಲ್ಲ. ಹೀಗಾಗಿ ಪೊಲೀಸರು ಕಾರ್ಯಕ್ರಮಕ್ಕೆ ಅನುಮತಿ ನೀಡಲು ಸ್ಪಷ್ಟವಾಗಿ ನಿರಾಕರಿಸಿದರು ಎಂದಿದೆ.
ಇದನ್ನೂ ಓದಿ: RCB ಕಾಲ್ತುಳಿತ ದುರಂತಕ್ಕೆ ಕಾರಣ ಕೊಟ್ಟ ಸರ್ಕಾರ; ಹೈಕೋರ್ಟ್ಗೆ ತನಿಖಾ ವರದಿ ಸಲ್ಲಿಕೆ..! ಅದರಲ್ಲಿ ಏನಿದೆ..?
ಹೀಗಿದ್ದೂ ಆರ್‌ಸಿಬಿ ಪ್ರಚಾರ ಚಟುವಟಿಕೆಗಳು ಮುಂದುವರಿದವು. ಜೂನ್ 4 ರಂದು, ಆರ್‌ಸಿಬಿ ತನ್ನ ಸೋಶಿಯಲ್ ಮೀಡಿಯಾ ಮೂಲಕ ಸಾರ್ವಜನಿಕರಿಗೆ ಮುಕ್ತ ಆಹ್ವಾನ ನೀಡಿತು. ಅಂತಹ ಒಂದು ಪೋಸ್ಟ್‌ನಲ್ಲಿ ಕೊಹ್ಲಿ ಅಭಿಮಾನಿಗಳನ್ನು ಆಹ್ವಾನಿಸುತ್ತಿರೋದು ಕೂಡ ಸೇರಿದೆ. ಜೂನ್ 4 ರಂದು ಬೆಳಗ್ಗೆ 8.55ರ ಸುಮಾರಿಗೆ ಆರ್‌ಸಿಬಿ, ವಿರಾಟ್ ಕೊಹ್ಲಿ ಅವರ ವಿಡಿಯೋ ಕ್ಲಿಪ್ ಅನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದೆ. ಆರ್‌ಸಿಬಿ ಅಧಿಕೃತ ಟ್ವಿಟರ್ ಹ್ಯಾಂಡಲ್ @Rcbtweets ನಲ್ಲಿ ಕೊಹ್ಲಿ ಮಾತನಾಡಿದ್ದ ವಿಡಿಯೋ ಶೇರ್ ಮಾಡಿದೆ. ಅದರಲ್ಲಿ ಆರ್‌ಸಿಬಿ, ಅಭಿಮಾನಿಗಳೊಂದಿಗೆ ಬೆಂಗಳೂರಲ್ಲಿ ಸೆಲೆಬ್ರೇಷನ್ ಮಾಡಲು ಉದ್ದೇಶಿಸಿದೆ ಎಂದು ಕೊಹ್ಲಿ ಹೇಳಿದ್ದರು.
ಅದೇ ದಿನ ಮಧ್ಯಾಹ್ನ 3:14ಕ್ಕೆ ಮತ್ತೊಂದು ಪೋಸ್ಟ್ ಮಾಡಿತು. ಸಂಜೆ 5:00 ರಿಂದ 6:00 ರವರೆಗೆ ವಿಧಾನಸೌಧದಿಂದ ಚಿನ್ನಸ್ವಾಮಿ ಕ್ರೀಡಾಂಗಣದವರೆಗೆ ವಿಜಯೋತ್ಸವ ಮೆರವಣಿಗೆ ನಡೆಯಲಿದೆ ಎಂದು ಘೋಷಿಸಿತು. ಈ ಮೆರವಣಿಗೆ ನಂತರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೆಲೆಬ್ರೇಷನ್ ನಡೆಯಲಿವೆ ಎಂದು ಹೇಳಿದೆ. ಇದೇ ಪೋಸ್ಟ್‌ನಲ್ಲಿ shop.royalchallengers.com ನಲ್ಲಿ ಉಚಿತ ಪಾಸ್‌ಗಳು (ಸೀಮಿತ ಪ್ರವೇಶ) ಲಭ್ಯವಿದೆ ಅಂತಾ ಉಲ್ಲೇಖಿಸಲಾಗಿದೆ. ಅಲ್ಲಿಯವರೆಗೆ ಪಾಸ್‌ಗಳ ವಿತರಣೆಯ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಅಂದರೆ ಆರ್‌ಸಿಬಿ ಹಿಂದಿನ ಪೋಸ್ಟ್‌ಗಳ ಪ್ರಕಾರ ಸೆಲೆಬ್ರೇಷನ್ ಈವೆಂಟ್ ಎಲ್ಲರಿಗೂ ಮುಕ್ತವಾಗಿದೆ ಎಂದು ಸೂಚಿಸುತ್ತದೆ. ಹೀಗಾಗಿ ಮೈದಾನದ ಸುತ್ತ ಮೂರು ಲಕ್ಷಕ್ಕೂ ಹೆಚ್ಚು ಜನಸಾಗರ ಹರಿದು ಬರವಂತೆ ಆರ್‌ಸಿಬಿ ಮಾಡಿದೆ ಎಂದು ಸರ್ಕಾರ ಆರೋಪಿಸಿದೆ.
ಇದನ್ನೂ ಓದಿ: RCB ಕಾಲ್ತುಳಿತ ದುರಂತಕ್ಕೆ ಕಾರಣ ಕೊಟ್ಟ ಸರ್ಕಾರ; ಹೈಕೋರ್ಟ್ಗೆ ತನಿಖಾ ವರದಿ ಸಲ್ಲಿಕೆ..! ಅದರಲ್ಲಿ ಏನಿದೆ..?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ