Advertisment

BPL ಕಾರ್ಡ್​​ ಇರೋರಿಗೆ ರಾಜ್ಯ ಸರ್ಕಾರ ಬಿಗ್ ಶಾಕ್.. APL ಆಗಿದೆಯಾ ಅಂತ ಚೆಕ್ ಮಾಡಿಕೊಳ್ಳಿ!

author-image
Bheemappa
Updated On
BPL ಕಾರ್ಡ್​​ ಇರೋರಿಗೆ ರಾಜ್ಯ ಸರ್ಕಾರ ಬಿಗ್ ಶಾಕ್.. APL ಆಗಿದೆಯಾ ಅಂತ ಚೆಕ್ ಮಾಡಿಕೊಳ್ಳಿ!
Advertisment
  • ಮಾನದಂಡದ ಆಧಾರದ ಮೇಲೆ ಕಾರ್ಡ್​ಗಳು ರದ್ದು ಆಗುತ್ತಿವೆ
  • ಕಾರ್ಡ್​ ಮೇಲೆ ಸಿಗುವ ಎಲ್ಲ ಸೌಲಭ್ಯಗಳು ಬಂದ್ ಆಗುತ್ತಿವೆ
  • ಗೃಹಲಕ್ಷ್ಮಿಯ ಬೆನ್ನಲ್ಲೇ ಬಿಪಿಎಲ್ ಫಲಾನುಭವಿಗಳಿಗೂ ಶಾಕ್

ಬೆಂಗಳೂರು: ಗೃಹಲಕ್ಷ್ಮಿಯ ಬೆನ್ನಲ್ಲೆ ಬಿಪಿಎಲ್ ಕಾರ್ಡುದಾರರಿಗೂ ರಾಜ್ಯ ಸರ್ಕಾರ ಬಿಗ್ ಶಾಕ್ ಕೊಟ್ಟಿದೆ. ಜಿಎಸ್​ಟಿ, ಐಟಿ ತೆರಿಗೆ ಪಾವತಿ ಹಾಗೂ ಸರ್ಕಾರಿ ಅಧಿಕಾರಿ ಆಗಿದ್ದು ಬಿಪಿಎಲ್​ ಕಾರ್ಡ್​ಗಳನ್ನು ಹೊಂದಿರುವಂತರ ಕಾರ್ಡ್​ಗಳನ್ನು ರದ್ದು ಮಾಡಲಾಗಿದೆ.

Advertisment

ಗೃಹಲಕ್ಷ್ಮಿ ಯೋಜನೆಯಲ್ಲಿ ಜಿಎಸ್​​ಟಿ ಪಾವತಿಸುತ್ತಿದ್ದ 16 ಸಾವಿರ ಫಲಾನುಭವಿಗಳನ್ನ ಯೋಜನೆಯಿಂದ ಹೊರಗುಳಿಸಲಾಗಿತ್ತು. ಇದೀಗ ಬಿಪಿಎಲ್ ಕಾರ್ಡ್​ನಲ್ಲಿ 10 ಸಾವಿರ ಫಲಾನುಭವಿಗಳ ಕಾರ್ಡ್​ಗಳನ್ನು ಬಂದ್ ಮಾಡಲಾಗಿದೆ. ಹೀಗಾಗಿ ಇವರು ಪಡೆಯುತ್ತಿದ್ದ ಸೌಕರ್ಯಗಳನ್ನ ರದ್ದು ಆಗಿವೆ. ಬಿಪಿಎಲ್ ಕಾರ್ಡ್​ ರದ್ದು ಆದರೆ ಆಯುಷ್ಮಾನ್, ವಿದ್ಯಾರ್ಥಿ ವೇತನ, ಸಿಎಂ‌ ಪರಿಹಾರ ನಿಧಿ, ನರೇಗಾ ಯೋಜನೆ ಸೇರಿದಂತೆ ವೈಯಕ್ತಿಕ ಕಾಮಗಾರಿ ಕೈಗೊಳ್ಳಲು ಆಗಲ್ಲ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆಲ ಫಲಾನುಭವಿಗಳು ನಮಗೆ ಯಾವುದೇ ಜಿಎಸ್​ಟಿ ಇಲ್ಲ. ಅನ್ನಭಾಗ್ಯ ಹಣ, ಗೃಹಲಕ್ಷ್ಮಿ ಹಣನೂ ಬರುತ್ತಿಲ್ಲ. ಆದರೂ ಕಾರ್ಡ್​ಗಳನ್ನು ನಿಲ್ಲಿಸಲಾಗಿದೆ ಎನ್ನುತ್ತಿದ್ದಾರೆ.

ಇದನ್ನೂ ಓದಿ: Clove water; ಲವಂಗ ನೀರಿನಿಂದ ಆರೋಗ್ಯಕ್ಕೆ ಏನೆಲ್ಲ ಉಪಯೋಗ.. ಚಳಿಗಾಲದಲ್ಲಿ ಹೀಗೆ ಮಾಡಿ!

publive-image

ಸದ್ಯ ರಾಜ್ಯ ಸರ್ಕಾರ ಮಾನದಂಡದ ಅನ್ವಯಿಸುವ ಪ್ರಕಾರ ಬಿಪಿಎಲ್​ ಕಾರ್ಡ್​​ಗಳನ್ನು ರದ್ದು ಮಾಡಿದೆ. ಅಲ್ಲದೇ ಇನ್ನು ಕೆಲವು ಬಿಪಿಎಲ್ ಕಾರ್ಡ್​​ಗಳನ್ನು ಬದಲಾವಣೆ ಮಾಡಲಾಗಿದ್ದು ಎಪಿಎಲ್​ ಕಾರ್ಡ್​ಗೆ ಬದಲಾವಣೆ ಮಾಡಲಾಗಿದೆ.

Advertisment

ಆದಾಯ ತೆರಿಗೆ ಪಾವತಿ, ವಾರ್ಷಿಕ ಆದಾಯ ಸೇರಿ, ಸರ್ಕಾರಿ ನೌಕರರು ಎಂಬ ಮಾನದಂಡ ಇಟ್ಟುಕೊಂಡು ಕಾರ್ಡ್​ಗಳನ್ನ ರದ್ದು ಮಾಡಲಾಗಿದೆ. ಚಿಕ್ಕಮಗಳೂರಲ್ಲಿ 9,441 ಬಿಪಿಎಲ್ ಕಾರ್ಡ್​ಗಳನ್ನ ಎಪಿಎಲ್ ಆಗಿ ಬದಲಾಯಿಸಲಾಗಿದೆ. ಇದೇ ರೀತಿ ಕೋಲಾರದಲ್ಲಿ 6,500, ಉಡುಪಿಯಲ್ಲಿ 6,422, ಬಾಗಲಕೋಟೆಯಲ್ಲಿ 6,299, ಬೆಂಗಳೂರು ಗ್ರಾಮಾಂತರ 5,973, ವಿಜಯಪುರದಲ್ಲಿ 4,359, ಮೈಸೂರು 4,221, ಹಾಸನ 3,925, ಮಂಡ್ಯದಲ್ಲಿ 2,824, ಶಿವಮೊಗ್ಗದಲ್ಲಿ 2,346, ಕಾರ್ಡ್​ಗಳನ್ನ ಎಪಿಎಲ್​​ ಕಾರ್ಡ್​ಗಳಾಗಿ ಬದಲಾವಣೆ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment