/newsfirstlive-kannada/media/post_attachments/wp-content/uploads/2025/03/COUNCIL.jpg)
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ‘ನಟ್ಟು, ಬೋಲ್ಟು’ ಹೇಳಿಕೆ ಸ್ಯಾಂಡಲ್ವುಡ್ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಇದೀಗ ಸರ್ಕಾರದ ಕಣ್ಣು ಚಿತ್ರಮಂದಿರಗಳ ಮೇಲೂ ಬಿದ್ದಿದೆ. ಇನ್ಮುಂದೆ ಸಿನಿಮಾ ಮಂದಿರಗಳಲ್ಲಿ ಏಕ ರೂಪದ ದರ ನಿಗದಿ ಮಾಡಲು ಚಿಂತನೆ ನಡೆದಿದೆ.
ಪರಿಷತ್ ಕಲಾಪದಲ್ಲಿ ಎಂಎಲ್ಸಿ ಗೋವಿಂದರಾಜು ಏಕ ರೂಪದ ದರ ವಿಚಾರವನ್ನು ಸರ್ಕಾರದ ಮುಂದೆ ಪ್ರಸ್ತಾಪ ಮಾಡಿದರು. ಚಿತ್ರ ಮಂದಿರಗಳಲ್ಲಿ ಒಂದೊಂದು ಸಿನಿಮಾಗೆ ಒಂದೊಂದು ದರ ನಿಗದಿ ಮಾಡಲಾಗುತ್ತಿದೆ. ಕನ್ನಡ ಸಿನಿಮಾಗೆ ಒಂದು ದರ, ಅನ್ಯಭಾಷೆ ಸಿನಿಮಾಗೆ ಇನ್ನೊಂದು ದರ ನಿಗದಿ ಮಾಡಲಾಗುತ್ತಿದೆ.
ಇದನ್ನೂ ಓದಿ: ಸೆಮಿಫೈನಲ್ನಲ್ಲಿ ಎನರ್ಜಿ ಡ್ರಿಂಕ್ ಕುಡಿದಿದ್ದೇ ತಪ್ಪಾಗಿ ಹೋಯ್ತಾ? ಶಮಿ ವಿರುದ್ಧ ಸಿಡಿದೆದ್ದ ಮೌಲಿ ಪಡೆ..!
ಕನ್ನಡಕ್ಕೆ ಬಹಳ ಕಡಿಮೆ, ಆದರೆ ಬೇರೆ ಭಾಷೆಯ ಚಿತ್ರಗಳಿಗೆ 500 ರೂಪಾಯಿಯಿಂದ 1000 ರೂಪಾಯಿವರೆಗೆ ವಸೂಲಿ ಮಾಡ್ತಾರೆ. ಸರ್ಕಾರದ ಪರಿಮಿತಿಯಲ್ಲೇ ದರ ನಿಯಂತ್ರಣ ಇದ್ದರೂ ನಿಯಂತ್ರಣ ಮಾಡುತ್ತಿಲ್ಲ. ಸಿದ್ದರಾಮಯ್ಯ ಅವರು 2017ರ ಬಜೆಟ್ನಲ್ಲಿ 200 ರೂಪಾಯಿ ದರ ನಿಗದಿ ಮಾಡ್ತೀವಿ ಎಂದಿದ್ದರು. ಅದೂ ಜಾರಿಗೆ ಬಂದಿಲ್ಲ. ಸಿನಿಮಾ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಎಲ್ಲ ಥಿಯೇಟರ್ ದರ ಬರುತ್ತದೆ. ಮಲ್ಟಿಪ್ಲೆಕ್ಸ್ನವರು ಬೇಕಾಬಿಟ್ಡಿ ರೇಟ್ ಫಿಕ್ಸ್ ಮಾಡ್ತಿದ್ದಾರೆ. ಕನ್ನಡ ಹಾಗೂ ಬೇರೆ ಎಲ್ಲ ಸಿನಿಮಾಗೂ ಒಂದೇ ದರ ಬರಬೇಕು ಎಂದರು.
ಅದಕ್ಕೆ ಉತ್ತರ ನೀಡಿರುವ ಗೃಹ ಸಚಿವ ಪರಮೇಶ್ವರ್.. ಚಿತ್ರ ಮಂದಿರದಲ್ಲಿ ಮಾಲೀಕರೇ ಟಿಕೆಟ್ ದರ ನಿಗದಿ ಮಾಡುವ ಪದ್ಧತಿ ಇದೆ. ಇನ್ನೂ ಯಾಕೆ ಹಾಗೆ ಬಿಟ್ಡಿದ್ದಾರೋ ಗೊತ್ತಿಲ್ಲ. ಸಿದ್ದರಾಮಯ್ಯ 2017ರ ಬಜೆಟ್ನಲ್ಲಿ ಏಕರೂಪ ದರ ಪ್ರಸ್ತಾಪ ಮಾಡಿ ಆದೇಶ ಜಾರಿ ಮಾಡಿದ್ದರು. ನೀವು ಹೇಳಿದಂತೆ 200 ರೂಪಾಯಿ ದರ ನಿಗದಿ ಮಾಡಲಾಗಿತ್ತು. ಆದೇಶ ಮಾಡಿದ ಮೇಲೆ ಥಿಯೇಟರ್ ಮಾಲೀಕರು ಸ್ಟೇ ತಂದಿದ್ದಾರೆ. ಸ್ಟೇ ತಂದ ಮೇಲೆ ಸರ್ಕಾರ ಆ ಆದೇಶವನ್ನು ವಾಪಸ್ ಪಡೆದಿದೆ ಎಂದರು.
ಇದನ್ನೂ ಓದಿ: ಡ್ರೆಸ್ಸಿಂಗ್ ರೂಮ್ನಲ್ಲಿ ಕೊಹ್ಲಿ ಜೊತೆ ಗಂಭೀರ್ ಬೇಸರ.. ಮಾತುಕತೆಯ ದೃಶ್ಯ ವೈರಲ್..!
ರಾಜ್ಯದಲ್ಲಿ 100 ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಸ್ಥಗಿತ ಆಗಿವೆ. 150 ಚಿತ್ರ ಮಂದಿರ ಸ್ಥಗಿತ ಆಗೋ ಹಂತದಲ್ಲಿದೆ. 40 ಮಲ್ಟಿಪ್ಲೆಕ್ಸ್ಗಳು ಬೆಂಗಳೂರಲ್ಲಿವೆ. ಮುಂದಿನ ದಿನಗಳಲ್ಲಿ ಇದಕ್ಕೆ ಏಕರೂಪದ ಪದ್ದತಿ ತರುತ್ತೇವೆ. ಕಾನೂನು ತರದೇ ಹೋದರೆ, ತಮಗೆ ಇಷ್ಟ ಬಂದ ರೀತಿಯಲ್ಲಿ ಸುಲಿಗೆ ಮಾಡ್ತಾರೆ ಎಂದರು.
ಅದಕ್ಕೆ ಪ್ರತಿಕ್ರಿಯಿಸಿ ಗೋವಿಂದರಾಜು.. ಪಾಪ್ ಕಾರ್ನ್, ವಾಟರ್ ಬಾಟಲ್ಗೂ ನೂರಿನ್ನೂರು ರೂಪಾಯಿ ದರ ವಿಧಿಸಿ ತೊಂದರೆ ಕೊಡ್ತಾರೆ. ಇಷ್ಟ ಬಂದ ರೇಟ್ನಲ್ಲಿ ಮಾರಾಟ ಮಾಡ್ತಿರೋದ್ರಿಂದ ಗ್ರಾಹಕರಿಗೆ ಸಮಸ್ಯೆ ಆಗ್ತಿದೆ ಎಂದರು. ಆಗ ಪರಮೇಶ್ವರ್ ಪ್ರತಿಕ್ರಿಯಿಸಿ.. ಅದಕ್ಕೂ ರೆಗ್ಯುಲೇಟ್ ಮಾಡಲು ಕ್ರಮ ಕೈಗೊಳ್ತೇವೆ ಎಂದರು.
ಇದನ್ನೂ ಓದಿ: ಸ್ಪಿನ್ನರ್ ಆಗಿ ಎಂಟ್ರಿ.. ಆದ್ರೆ ಬ್ಯಾಟಿಂಗ್ ಲೆಜೆಂಡ್ ಆದ ಸ್ಟೀವ್ ಸ್ಮಿತ್; ಹೇಗಿತ್ತು ಅವರ ಕ್ರಿಕೆಟ್ ಜರ್ನಿ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ