/newsfirstlive-kannada/media/post_attachments/wp-content/uploads/2025/03/DUBARI-DUNIA.jpg)
ಬೆಂಗಳೂರು: ರಾಜ್ಯದ ಜನರು ದರ ಏರಿಕೆ ಅನ್ನೋ ಶಬ್ಧ ಕೇಳಿದ್ರೆ ಬೆಚ್ಚಿ ಬೀಳುತ್ತಾರೆ. ಯುಗಾದಿ ಸಂಭ್ರಮದಲ್ಲಿರೋ ಜನಸಾಮಾನ್ಯರಿಗೆ ರಾಜ್ಯ ಸರ್ಕಾರ ಮತ್ತೊಂದು ಶಾಕಿಂಗ್ ಸುದ್ದಿ ಕೊಟ್ಟಿದೆ. ಸಾಲು, ಸಾಲು ದರ ಏರಿಕೆ ಮಧ್ಯೆ ಮತ್ತೆ ಜನ ಸಾಮಾನ್ಯರ ಪಾಲಿಗೆ ಏಪ್ರಿಲ್ ಕಂಟಕವಾಗಲಿದೆ. ಏಪ್ರಿಲ್ ತಿಂಗಳಲ್ಲಿ ಜನರಿಗೆ ದುಬಾರಿ ದುನಿಯಾದ ದರ್ಶನ ಆಗಲಿದೆ. ಮೆಟ್ರೋ, ಬಸ್, ಹಾಲು, ಕರೆಂಟ್, ನೀರು, ಟೋಲ್ ಶುಲ್ಕ, ಕಸದ ಸೆಸ್ ಸೇರಿದಂತೆ ಏಪ್ರಿಲ್ನಲ್ಲಿ ಜನಸಾಮಾನ್ಯರ ಜೇಬಿಗೆ ಕತ್ತರಿ ಬಿಳೋದು ಫಿಕ್ಸ್ ಆಗಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಶ್ರದ್ಧಾ ಮಾದರಿಯ ಹತ್ಯೆ; ಮುದ್ದಾದ ಹೆಂಡತಿಯ ಕೊಂದು ಸೂಟ್‌ಕೇಸ್‌ಗೆ ತುಂಬಿದ ಟೆಕ್ಕಿ..
ದುಬಾರಿ ದುನಿಯಾದ ದರ್ಶನ
ಹಾಲಿನ ದರ
ಹಾಲಿನ ದರ ಪ್ರತಿ ಲೀಟರ್ಗೆ 4 ರೂ. ಹೆಚ್ಚಳ
ಪರಿಷ್ಕೃತ ಹಾಲಿನ ದರ ಏಪ್ರಿಲ್ 1ರಿಂದ ಜಾರಿ
ಕರೆಂಟ್ ಬಿಲ್
ವಿದ್ಯುತ್ ಪ್ರತಿ ಯೂನಿಟ್ಗೆ 26 ಪೈಸೆ ಹೆಚ್ಚಳ ಸಾಧ್ಯತೆ
ಏಪ್ರಿಲ್ 1ರಿಂದ ಪರಿಷ್ಕೃತ ವಿದ್ಯುತ್ ದರ ಕೂಡ ಜಾರಿ
ಕಸದ ಸೆಸ್
ಕಸದ ಸೆಸ್ ಪ್ರತಿ ಕೆ.ಜಿಗೆ 12 ರೂ. ವಿಧಿಸಿ ಪಾಲಿಕೆ ಆದೇಶ
ಏಪ್ರಿಲ್ 1ರಿಂದ ಪರಿಷ್ಕೃತ ದರ ಜಾರಿ ಎಂದು BBMP ಮಾಹಿತಿ
ನೀರಿನ ದರ
ನೀರಿನ ದರ ಹೆಚ್ಚಳಕ್ಕೆ ಸರ್ಕಾರಕ್ಕೆ ಜಲಮಂಡಳಿ ಪ್ರಸ್ತಾವನೆ
4 ರಿಂದ 5 ಬಾರಿ ಪ್ರಸ್ತಾವನೆ ಸಲ್ಲಿಸಿರುವ ಜಲಮಂಡಳಿ
ಆಟೋ ಮೀಟರ್ ದರ
ಆಟೋ ಮೀಟರ್ ದರ ₹30ರ ಬದಲು ₹40ಕ್ಕೆ ಏರಿಕೆ ಸಾಧ್ಯತೆ
ಯುಗಾದಿಗೆ ನಗರದ ಆಟೋ ಮೀಟರ್ ದರ ಏರಿಕೆ ಸಾಧ್ಯತೆ
ವಾಹನ ಮೇಲಿನ ಟ್ಯಾಕ್ಸ್
10 ಲಕ್ಷದೊಳಗಿನ ವಾಹನಗಳಿಗೆ ಲೈಫ್ ಟೈಮ್ ಟ್ಯಾಕ್ಸ್
25 ಲಕ್ಷದ ಮೇಲಿನ ಎಲೆಕ್ಟ್ರಿಕ್ ಕಾರಿಗೆ 10% ರಷ್ಟು ಟ್ಯಾಕ್ಸ್
ಟೋಲ್ ಶುಲ್ಕ
ಟೋಲ್ ಸುಂಕ ಹೆಚ್ಚಳ
ಶೇಕಡ.5 ರಷ್ಟು ಸುಂಕ ಹೆಚ್ಚಳ
ಟೀ, ಕಾಫಿ ದರ
ಹಾಲಿನ ದರ ಏರಿಕೆ ನೆಪ, ಟೀ-ಕಾಫಿ ರೇಟ್ ಹೆಚ್ಚಳ
ಟೀ, ಕಾಫಿ ದರ 15% ರಷ್ಟು ಏರಿಕೆ
ಸಾಲು ಸಾಲು ಶಾಕ್
1. ಈಗಾಗಲೇ ಮೆಟ್ರೋ ಪ್ರಯಾಣ ದರ 46% ಏರಿಕೆ
2. ಸರ್ಕಾರಿ ಬಸ್ ಟಿಕೆಟ್ ದರ ಶೇ.15ರಷ್ಟು ಏರಿಕೆ
3.ನೌಕರರ ಪಿಂಚಣಿ, ಗ್ರಾಚ್ಯುಟಿ ಹೆಸರಲ್ಲಿ ವಿದ್ಯುತ್ ದರ ಹೆಚ್ಚಳ
4. ಪ್ರತಿ ಯೂನಿಟ್ 0.36 ಪೈಸೆ ಹೆಚ್ಚಳ ಮಾಡಿ ಈಗಾಗಲೇ KERC ಆದೇಶ
5.ಜನವರಿ ತಿಂಗಳಲ್ಲಿ ಬಿಯರ್ ದರ ಕೂಡ ₹10-₹40ವರೆಗೆ ಹೆಚ್ಚಳ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ