/newsfirstlive-kannada/media/post_attachments/wp-content/uploads/2025/03/classroom.jpg)
ಭಾರತದಲ್ಲಿ ಲೈಂಗಿಕ ದೌರ್ಜನ್ಯ ಮತ್ತು ಕೌಟುಂಬಿಕ ಹಿಂಸಾಚಾರ ಪ್ರಕರಣಗಳು ಹೆಚ್ಚಾಗ್ತಿವೆ ಎಂದು ವರದಿ ಆಗುತ್ತಲೇ ಇದೆ. ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡ್ಬೇಕು ಅನ್ನೋದು ಬಹಳ ವರ್ಷಗಳಿಂದ ಚರ್ಚೆಯಲ್ಲಿರೋ ವಿಷಯ. ಈಗ ಶಿಕ್ಷಣ ಇಲಾಖೆ ಮಕ್ಕಳಿಗೆ ಲೈಂಗಿಕ ಶಿಕ್ಷಣ ಅನುಷ್ಠಾನಕ್ಕೆ ತರಲು ಮುಂದಾಗಿದೆ.
ಮುಂಬರುವ ಅಕಾಡೆಮಿಕ್ ಇಯರ್‌ಗೆ ಶಿಕ್ಷಣ ಇಲಾಖೆ ಮಕ್ಕಳಿಗೆ ಪಾಠ ಹೇಳಿಕೊಡುವ ಜೊತೆಗೆ ಮತ್ತೊಂದು ಶಿಕ್ಷಣ ಕೊಡೋಕೆ ಮುಂದಾಗಿದೆ. 2025-26ನೇ ಸಾಲಿನಿಂದ ರಾಜ್ಯದ ಶಾಲೆಗಳಲ್ಲಿ ನೈತಿಕ ಶಿಕ್ಷಣ ಕಡ್ಡಾಯ ಮಾಡಲು ಇಲಾಖೆ ತಯಾರಿ ಮಾಡ್ಕೊಂಡಿದೆ. ಇದರ ಅಡಿಯಲ್ಲಿ ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ಲೈಂಗಿಕ ಶಿಕ್ಷಣ ನೀಡಲು ಇಲಾಖೆ ಮುಂದಾಗಿದೆ.
ವಿದ್ಯಾರ್ಥಿಗಳಿಗೆ ಲೈಂಗಿಕ ಶಿಕ್ಷಣ ನೀಡಲು ಶಿಕ್ಷಣ ಇಲಾಖೆ ತಯಾರಿ
ವಾರಕ್ಕೆ ಎರಡು ದಿನ ಮಕ್ಕಳಿಗೆ ಲೈಂಗಿಕ ಶಿಕ್ಷಣದ ಕುರಿತು ತರಗತಿ ನಡೆಸಲು ಸರ್ಕಾರ ನಿರ್ಧರಿಸಿದೆ. ಹಾರ್ಮೋನುಗಳ ಬದಲಾವಣೆ ಮಾತ್ರವಲ್ಲದೇ ಹೆಣ್ಮಕ್ಕಳು ಅನುಭವಿಸುವ ಸಮಸ್ಯೆ ಬಗ್ಗೆಯೂ ಶಿಕ್ಷಣ ನೀಡ್ಲಾಗುತ್ತೆ.
ಲೈಂಗಿಕ ಶಿಕ್ಷಣ ಲಾಭವೇನು?
ಮಕ್ಕಳಿಗೆ ಇರುವ ತಪ್ಪು ಕಲ್ಪನೆಯನ್ನ ಹೋಗಲಾಡಿಸಲು ಲೈಂಗಿಕ ಶಿಕ್ಷಣದ ಅವಶ್ಯಕತೆ ಇದೆ. ಹದಿಹರೆಯದಲ್ಲಿ ಗರ್ಭಧಾರಣೆ ಆದ್ರೆ ಅಂತಹ ಸಮಯದಲ್ಲಿ ಆಗುವ ಕಷ್ಟ ಸವಾಲುಗಳ ಬಗ್ಗೆ ತಿಳಿಸಬೇಕು. ಮಕ್ಕಳಿಗೆ ಮುಖ್ಯವಾಗಿ ಗುಡ್ ಅಂಡ್ ಬ್ಯಾಡ್ ಸ್ಪರ್ಶದ ನಡುವಿನ ವ್ಯತ್ಯಾಸ ಕಲಿಯೋದು ಅವಶ್ಯಕವಾಗಿದೆ. ಜೊತೆಗೆ ಲೈಂಗಿಕ ನಿಂದನೆ ಅಥವಾ ಹಿಂಸೆಗೆ ಬಲಿಯಾಗದಂತೆ ಮಕ್ಕಳ ರಕ್ಷಣೆ ಬಗ್ಗೆ ತಿಳಿಸಿಕೊಡಲಾಗುತ್ತೆ. ಮಕ್ಕಳ ಪ್ರೌಢಾವಸ್ಥೆಯಲ್ಲಿ ಆಗುವ ಬದಲಾವಣೆ ಬಗ್ಗೆ ಅವರು ಅರಿಯಲು ಲೈಂಗಿಕ ಶಿಕ್ಷಣ ಅನುಕೂಲವಾಗುತ್ತೆ. ಇದರಲ್ಲದರ ಜೊತೆಗೆ ಲೈಂಗಿಕ ಶಿಕ್ಷಣವನ್ನ ಟೀಟರ್ಸ್ ನೀಡಬಾರ್ದು. ಅದರ ಬದಲಿಗೆ ಪ್ರಸೂತಿ ತಜ್ಞರು ಮತ್ತು ಶಿಕ್ಷಣ ತಜ್ಞರು ಮಕ್ಕಳಿಗೆ ಲೈಂಗಿಕ ಶಿಕ್ಷಣದ ಬಗ್ಗೆ ಬೋಧನೆ ಮಾಡ್ಬೇಕು.
ವಿರೋಧ ಯಾಕೆ?
ಲೈಂಗಿಕ ಶಿಕ್ಷಣ ನೀಡೋದ್ರ ಬಗ್ಗೆ ಶಿಕ್ಷಣ ಇಲಾಖೆಗೆ ನಡೆಗೆ ಹಿಂದೂ ಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಮೊದಲು ಮಕ್ಕಳಿಗೆ ಭಾರತೀಯ ಸಂಸ್ಕೃತಿಯ ಬಗ್ಗೆ ಪಾಠ ಹೇಳಿಕೊಡಬೇಕು. ಲೈಂಗಿಕ ಶಿಕ್ಷಣ ಅನ್ನೋದು ಪಾಶ್ಚಿಮಾತ್ಯ ಶಿಕ್ಷಣ ಅದರ ಬಗ್ಗೆ ಯಾಕೆ ಶಿಕ್ಷಣ ನಿಡ್ಬೇಕು ಅನ್ನೋದು ಪ್ರಶ್ನೆ. ಶಾಲಾ ಮಕ್ಕಳಿಗೆ ಮುಖ್ಯವಾಗಿ ನೀತಿ ಪಾಠ, ನೈತಿಕ ಶಿಕ್ಷಣ ಸಂಸ್ಕೃತಿ ಬಗ್ಗೆ ತಿಳಿಸೋದು ಅವಶ್ಯವಾಗಿದ್ದು, ಅವರಿಗೆ ಭಾರತೀಯ ಸಂಸ್ಕಾರವನ್ನ ಪರಿಚಯಿಸಬೇಕೆಂಬುದು ಕೆಲವರ ವಾದವಾಗಿದೆ.
ವಿದ್ಯಾರ್ಥಿಗಳಿಗೆ ಲೈಂಗಿಕ ಶಿಕ್ಷಣ ನೀಡೋದು ಒಳ್ಳೆಯದೇ.. ಯಾಕಂದ್ರೆ ಗುಡ್ ಅಂಡ್ ಬ್ಯಾಡ್ ಟಚ್ ಬಗ್ಗೆ ಮಕ್ಕಳಿಗೆ ಈಗ್ಲಿಂದಲೇ ಗೊತ್ತಿದ್ರೆ ಮುಂದೆ ಬರೋ ಸಮಸ್ಯೆಯನ್ನ ಅವರೇ ಎದುರಿಸುತ್ತಾರೆ ಅನ್ನೋದು ಹಲವರ ವಾದ.
ಇದನ್ನೂ ಓದಿ:ಬೆಂಗಳೂರಲ್ಲಿ ಬೆಚ್ಚಿ ಬೀಳಿಸೋ ಘಟನೆ.. ಪತ್ನಿಯನ್ನು ತುಂಡು, ತುಂಡು ಮಾಡಿ ಸೂಟ್‌ಕೇಸ್‌ಗೆ ತುಂಬಿದ ಪತಿ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ