newsfirstkannada.com

ಇನ್ಮುಂದೆ ಕರ್ನಾಟಕದಲ್ಲೇ ಸಿಗುತ್ತಾ ಟೆಸ್ಲಾ ಕಾರ್​​..? ಎಲಾನ್​​​ ಮಸ್ಕ್​​​ಗೆ ಸಿದ್ದು ಸರ್ಕಾರ ಕೊಟ್ಟ ಆಫರ್​​ ಏನು?

Share :

23-06-2023

  ನಾನು ಮೋದಿ ಫ್ಯಾನ್‌ ಎಂದಿದ್ದ ಎಲಾನ್ ಮಸ್ಕ್‌ ಮೇಲೆ ಎಲ್ಲರ ಕಣ್ಣು!

  ಭಾರತದಲ್ಲಿ ಟೆಸ್ಲಾ ಹೂಡಿಕೆ ಮಾಡುವುದಾದರೆ ಕರ್ನಾಟಕಕ್ಕೆ ಬರಲಿ

  ಎಲಾನ್ ಮಸ್ಕ್ ಅವರಿಗೆ ಮುಕ್ತ ಆಹ್ವಾನ ಕೊಟ್ಟ ಸಚಿವ M.B ಪಾಟೀಲ್

ಅಮೆರಿಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ವಿಶ್ವದ ಶ್ರೀಮಂತ ಉದ್ಯಮಿ, ಟ್ವಿಟರ್ ಸಿಇಓ ಎಲಾನ್ ಮಸ್ಕ್ ಅವರನ್ನ ಭೇಟಿ ಮಾಡಿದ್ರು. ಮೋದಿಯನ್ನು ಭೇಟಿ ಮಾಡಿದ ಎಲಾನ್ ಮಸ್ಕ್ ಐ ಆ್ಯಮ್ ಫಾನ್ ಆಫ್ ಮೋದಿ ಅಂತಾ ಹೇಳಿದ್ರು. ಈ ಸ್ನೇಹ ಬಾಂಧವ್ಯದ ಬಳಿಕ ಭಾರತದಲ್ಲಿ ಎಲಾನ್ ಮಸ್ಕ್ ಒಡೆತನದ ಟೆಸ್ಲಾ ಕಾರು ಕಂಪನಿ ಬೃಹತ್ ಮೊತ್ತ ಬಂಡವಾಳ ಹೂಡಿಕೆ ಮಾಡುವ ನಿರೀಕ್ಷೆ ಹೆಚ್ಚಾಗಿದೆ.

ಭಾರತದಲ್ಲಿ ಎಲಾನ್ ಮಸ್ಕ್ ಹೂಡಿಕೆ ಮಾಡುವುದಾದರೆ ಕರ್ನಾಟಕಕ್ಕೆ ಬರಲಿ ಎಂದು ಸಿಎಂ ಸಿದ್ದರಾಮಯ್ಯ ಸರ್ಕಾರ ಬೇರೆ ರಾಜ್ಯಗಳಿಗೂ ಮೊದಲೇ ಮುಕ್ತ ಆಹ್ವಾನ ಕೊಟ್ಟಿದೆ. ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು, ಅಮೆರಿಕಾದ ಟೆಸ್ಲಾ ಕಂಪನಿಗೆ ಕರ್ನಾಟಕದಲ್ಲಿ ‌ಉತ್ಪಾದನಾ‌ ಘಟಕ ತೆರೆಯಲು ಮುಕ್ತ ಆಹ್ವಾನ ನೀಡಿದ್ದಾರೆ.

ಕರ್ನಾಟಕ ಟೆಕ್ನಾಲಜಿ, ತಯಾರಿಕಾ ಕ್ಷೇತ್ರದ ಹಬ್‌ ಆಗಿದೆ. ಒಂದು ವೇಳೆ ಟೆಸ್ಲಾ ಭಾರತದಲ್ಲಿ ತನ್ನ ಕಾರ್ಖಾನೆ ತೆರೆಯಲು ಪರಿಗಣಿಸಿದರೆ ಕರ್ನಾಟಕವನ್ನೇ ಪರಿಗಣಿಸಲಿ. ಕರ್ನಾಟಕ ರಾಜ್ಯ ಸರ್ಕಾರ, ಟೆಸ್ಲಾಗೆ ಅಗತ್ಯ ಸೌಲಭ್ಯ ನೀಡಲು ಸಂಪೂರ್ಣ ಸಿದ್ಧವಾಗಿದೆ. ಟೆಸ್ಲಾವನ್ನು‌ ಭಾರತಕ್ಕೆ ವಿಸ್ತರಿಸಲು ಕರ್ನಾಟಕ ರಾಜ್ಯವೇ ಸೂಕ್ತವಾಗಿದೆ. ಸ್ಟಾರ್ ಲಿಂಕ್ ಸೇರಿದಂತೆ ಎಲಾನ್ ಮಸ್ಕ್ ಅವರ ಇತರೆ ಕಂಪನಿಗೂ ನೆರವು ನೀಡಲು ‌ಸಿದ್ಧ ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.

ಅಮೆರಿಕಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದ ಎಲಾನ್ ‌ಮಸ್ಕ್, ಭಾರತಕ್ಕೆ ಟೆಸ್ಲಾ ಎಲೆಕ್ಟ್ರಿಕ್ ಕಾರ್ ಕಂಪನಿ ವಿಸ್ತರಿಸುವ ಆಸಕ್ತಿ ವ್ಯಕ್ತಪಡಿಸಿದ್ದರು. ಇದಾದ ಬಳಿಕ ಟೆಸ್ಲಾ ಕಂಪನಿಯನ್ನು ತಮ್ಮ ‌ತಮ್ಮ ರಾಜ್ಯಗಳಿಗೆ ಸೆಳೆಯಲು ದೇಶದ ಹಲವು ರಾಜ್ಯಗಳ ನಡುವೆ ಪೈಪೋಟಿ ನಡೆಯುತ್ತಿದೆ. ಕರ್ನಾಟಕ, ತಮಿಳುನಾಡು, ತೆಲಂಗಾಣ, ಗುಜರಾತ್, ಮಹಾರಾಷ್ಟ್ರ ರಾಜ್ಯಗಳು ಟೆಸ್ಲಾ ಕಂಪನಿಗೆ ಆಹ್ವಾನ ನೀಡಲು ಸಜ್ಜಾಗಿದೆ. ಭಾರತದಲ್ಲಿ ಬಂಡವಾಳ ಹೂಡಲು ಮನಸು ಮಾಡಿರುವ ಎಲಾನ್ ಮಸ್ಕ್ ಕೊನೆಗೆ ಯಾವ ರಾಜ್ಯವನ್ನ ಆಯ್ಕೆ ಮಾಡಿಕೊಳ್ತಾರೆ ಅನ್ನೋದು ಕುತೂಹಲಕಾರಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಇನ್ಮುಂದೆ ಕರ್ನಾಟಕದಲ್ಲೇ ಸಿಗುತ್ತಾ ಟೆಸ್ಲಾ ಕಾರ್​​..? ಎಲಾನ್​​​ ಮಸ್ಕ್​​​ಗೆ ಸಿದ್ದು ಸರ್ಕಾರ ಕೊಟ್ಟ ಆಫರ್​​ ಏನು?

https://newsfirstlive.com/wp-content/uploads/2023/06/Elon-Musk-Twitter.jpg

Load More