/newsfirstlive-kannada/media/post_attachments/wp-content/uploads/2024/08/SIDDU-DKS.jpg)
ಜಾತಿ ಗಣತಿ ಭವಿಷ್ಯ ನಿರ್ಣಾಯಕ ಹಂತ ತಲುಪಿದೆ. ಜಾತಿ ಗಣತಿ ಜ್ವಾಲೆ ಇವತ್ತು ಏನಾಗುತ್ತೆ ಅನ್ನೋ ಕುತೂಹಲ, ಕರ್ನಾಟಕ ಅಷ್ಟೇ ಅಲ್ಲ, ಇಡೀ ದೇಶದಲ್ಲಿ ಸದ್ದು ಮಾಡ್ಲಿದೆ. ಲಿಂಗಾಯತ, ಒಕ್ಕಲಿಗರ ಪ್ರಬಲ ವಿರೋಧದ ನಡುವೆ ಸಿದ್ದರಾಮಯ್ಯ ಸರ್ಕಾರ ಕೈಗೊಳ್ಳುವ ನಿರ್ಧಾರದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ..
ಎಚ್ಚರಿಕೆಯ ಹೆಜ್ಜೆ ಇಡುತ್ತಿರುವ ಸರ್ಕಾರ
ಸಚಿವರಲ್ಲಿ ಜಾತಿ ಜಟಾಪಟಿ ಕಿಡಿಹಾರಿದೆ. ಹೀಗಾಗಿ ಜಾತಿ ಜನಗಣತಿ ವಿಚಾರವಾಗಿ ಆತುರದ ನಿರ್ಧಾರ ಮಾಡದೆ, ಸರ್ಕಾರ ಎಚ್ಚರಿಕೆ ಹೆಜ್ಜೆ ಅನುಸರಿಸುವ ತೀರ್ಮಾನಕ್ಕೆ ಬಂದಿದೆ. ವಿಶೇಷ ಸಂಪುಟ ಸಭೆಯಲ್ಲಿ ನಡೆಯುವ ಚರ್ಚೆಯಾದರೂ ಏನು ಎಂಬ ಜಿಜ್ಞಾಸೆ ಎಲ್ಲರನ್ನೂ ಕಾಡ್ತಿದೆ. ಸಂಜೆ 4 ಗಂಟೆಗೆ ವಿಧಾನಸೌಧದಲ್ಲಿ ಕ್ಯಾಬಿನೆಟ್ ಮೀಟಿಂಗ್ ನಡೆಯಲಿದೆ.
ಇದನ್ನೂ ಓದಿ: ಜಾತಿಗಣತಿ ಬಗ್ಗೆ ಒಕ್ಕಲಿಗ ಶಾಸಕರ ಸಭೆ.. ಡಿಕೆಶಿ ನೇತೃತ್ವದ ಮೀಟಿಂಗ್ನಲ್ಲಿ ಆಗಿದ್ದೇನು..?
ಜಾತಿ ಜ್ವಾಲೆ.. ಕ್ಯಾಬಿನೆಟ್ ಕ್ಲೈಮ್ಯಾಕ್ಸ್!
- ಸಭೆಯ ಆರಂಭದಲ್ಲಿ ಅಭಿಪ್ರಾಯ ಸಂಗ್ರಹಿಸುವ ಸಿಎಂ
- ಎಲ್ಲಾ ಸಂಪುಟ ಸಹೋದ್ಯೋಗಿಗಳ ಅಭಿಪ್ರಾಯ ಆಲಿಕೆ
- ಮೊದಲ ಹಂತದಲ್ಲಿ ಸಚಿವರಿಂದ ವೈಯಕ್ತಿಕ ಅಭಿಪ್ರಾಯ
- ಒಬ್ಬೊಬ್ಬ ಸಚಿವರಿಗೂ ಸಮಯಾವಕಾಶ ನೀಡುವ ಸಿಎಂ
- ನಂತರ ಸಮುದಾಯವಾರು ಸಚಿವರ ಅಭಿಪ್ರಾಯ ಸಂಗ್ರಹ
- ಯಾವ್ಯಾವ ಸಮುದಾಯದಲ್ಲಿ ಏನೇನು ಅಭಿಪ್ರಾಯ ಇದೆ
- ಏನು ಮಾಡಬಹುದು ಎಂಬ ಸಲಹೆ ಮುಂದಿಡುವ ಸಿಎಂ
ಜಾತಿ ಗಣತಿ ಸಾಧಕ-ಬಾಧಕಗಳ ಬಗ್ಗೆ ಮುಸ್ಲಿಮರ ಸಭೆ!
ಜಾತಿ ಜನಗಣತಿ ವಿಚಾರವಾಗಿ ಮುಸ್ಲಿಂ ಸಮುದಾಯದ ನಾಯಕರು ಸಹ ಸಭೆ ನಡೆಸಿದ್ದಾರೆ.. ಬೆಂಗಳೂರಿನ ಸಬೀಲ್ ಉರ್ ರಶಾದ್ ಅರೇಬಿಕ್ ಕಾಲೇಜಿನಲ್ಲಿ ವರದಿಯ ಸಾಧಕ-ಬಾಧಕಗಳ ಚರ್ಚೆ ಆಗಿದೆ.. ಈ ಸಭೆಯಲ್ಲಿ ಸಚಿವ ಜಮೀರ್ ಅಹ್ಮದ್, ಸಗೀರ್ ಅಹ್ಮದ್, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಮಾಜಿ ಸಚಿವ ಆರ್ ರೋಷನ್ ಬೇಗ್ ಭಾಗಿ ಆಗಿದ್ರು..
ಒಟ್ಟಾರೆ, ಇವತ್ತು ನಡೆಯಲಿರುವ ಕ್ಯಾಬಿನೆಟ್ ಸಭೆಗೆ ಎಲ್ಲಾ ತಯಾರಿ ಜೊತೆಗೆ ಬರುವಂತೆ ಸಿಎಂ ಹೇಳಿದ್ದಾರೆ.. ಹೀಗಾಗಿ ಸಭೆಯಲ್ಲಿ ಕೈಗೊಳ್ಳಬಹುದಾದ ಸಾಧ್ಯಾ ಸಾಧ್ಯತೆಗಳ ಬಗ್ಗೆ ಹೆಚ್ಚು ಕುತೂಹಲ ಇದೆ.
ಇದನ್ನೂ ಓದಿ: Waqf Act: ಹಿಂದೂ ಧಾರ್ಮಿಕ ಟ್ರಸ್ಟ್ನಲ್ಲಿ ಮುಸ್ಲಿಮರಿಗೂ ಅವಕಾಶ ಕೊಡ್ತೀರಾ..? ಕೇಂದ್ರಕ್ಕೆ ಸುಪ್ರೀಂ ಬಿಗ್ ಶಾಕ್!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ