/newsfirstlive-kannada/media/post_attachments/wp-content/uploads/2024/12/SIDDARAMAIAH-1.jpg)
ಬೆಂಗಳೂರು: ಕರ್ನಾಟಕ ಸರ್ಕಾರ ರಾಜ್ಯದ ಜನರಿಗೆ ಹೊಸ ವರ್ಷಕ್ಕೆ ಮೂರು ಶುಭಸುದ್ದಿ ನೀಡಿದೆ. ರಾಜ್ಯದ ಭಕ್ತಾದಿಗಳಿಗೆ ಗ್ಯಾರಂಟಿ ಸರ್ಕಾರದಿಂದ ‘ಯಾತ್ರೆ ಭಾಗ್ಯ’ ಸಿಗುತ್ತಿದೆ.
ಯಾತ್ರೆ ಭಾಗ್ಯ ಯೋಜನೆಯಡಿ ಒಟ್ಟು ಮೂರು ಟೂರ್ ಪ್ಯಾಕೇಜ್​ಗಳಿಗೆ ಸಬ್ಸಿಡಿ ಘೋಷಣೆ ಮಾಡಿದೆ. ಇದೇ ಮೊದಲ ಬಾರಿಗೆ ಪುರಿ ಜಗನ್ನಾಥ್, ದ್ವಾರಕ, ದಕ್ಷಿಣ ಕ್ಷೇತ್ರಗಳಿಗೆ ಸಹಾಯಧನ ಘೋಷಣೆ ಮಾಡಿದೆ. ಆ ಮೂಲಕ ಧಾರ್ಮಿಕ ದತ್ತಿ ಇಲಾಖೆಯಿಂದ ಪುಣ್ಯ ಕ್ಷೇತ್ರಗಳ ದರ್ಶನ ಭಾಗ್ಯವನ್ನು ಕರುಣಿಸಲಿದೆ. ಸರ್ಕಾರದಿಂದ ದಕ್ಷಿಣ ಕ್ಷೇತ್ರಗಳ ಯಾತ್ರಾ, ದ್ವಾರಕಾ ಯಾತ್ರ, ಪುರಿಜಗನ್ನಾಥ ದರ್ಶನ ಸಿಗಲಿದೆ.
/newsfirstlive-kannada/media/post_attachments/wp-content/uploads/2024/12/Tour.jpeg)
ದಕ್ಷಿಣ ಕ್ಷೇತ್ರಗಳ ತೀರ್ಥಯಾತ್ರ ಸ್ಥಳಗಳು..!
ರಾಮೇಶ್ವರ-ಕನ್ಯಕುಮಾರಿ- ಮಧುರೈ, ತಿರುವನಂತಪುರಂ: ಇದು ಒಟ್ಟು ಆರು ದಿನಗಳ ತೀರ್ಥಯಾತ್ರೆ ಪ್ಯಾಕೇಜ್ ಆಗಿದೆ. ಅದಕ್ಕಾಗಿ 25 ಸಾವಿರ ರೂಪಾಯಿ ಖರ್ಚು ಆಗಲಿದೆ. ಇದಕ್ಕೆ ಸರ್ಕಾರ 10,000 ರುಪಾಯಿ ಸಬ್ಸಿಡಿ ನೀಡಲಿದೆ. ಐದು ಸಾವಿರ ಸಹಾಯಧನ ಸೇರಿ 15 ಸಾವಿರ ಹಣವನ್ನು ಸರ್ಕಾರವೇ ನೀಡುತ್ತದೆ. ಯಾತ್ರಿಗಳು 10 ಸಾವಿರ ರೂಪಾಯಿ ಮಾತ್ರ ಪಾವತಿ ಮಾಡಬೇಕಾಗುತ್ತದೆ.
ದ್ವಾರಕ ಮತ್ತು ಪುರಿ ಜಗಾನ್ನಾಥ್ ಯಾತ್ರೆ: ಧ್ವಾರಕ-ನಾಗೇಶ್ವರ-ಸೋಮನಾಥ್- ತ್ರಯಂಬಕೇಶ್ವರ ಒಳಗೊಂಡ 8 ದಿನಗಳ ಯಾತ್ರಾ ಪ್ಯಾಕೇಜ್ ಇದು. ಈ ಯಾತ್ರೆಯ ಪ್ಯಾಕೇಜ್​ನ ಒಟ್ಟು ಮೊತ್ತ 32,500 ಸಾವಿರ ರೂಪಾಯಿ. ಅದಕ್ಕಾಗಿ ಸರ್ಕಾರ 17,500 ರೂಪಾಯಿ ಹಣ ಭರಿಸುತ್ತದೆ. ಉಳಿದ 15,000 ರೂಪಾಯಿ ಹಣವನ್ನು ಮಾತ್ರ ಭಕ್ತರು ನೀಡಬೇಕು.
ವಿಶೇಷ ಸೌಲಭ್ಯ
- ಪ್ರಯಾಣಿಸುವಾಗ ಟ್ರೈನ್ ಪ್ಯಾಂಟ್ರಿ ಕಾರಿನಲ್ಲಿ ತಾಜಾ ಆಹಾರ
- ಈ ಪ್ಯಾಕೇಜ್​ನಲ್ಲಿ 3 ಟೈರ್ ಎಸಿ ರೈಲಿನಲ್ಲಿ ಪ್ರಯಾಣಿಸಬಹುದು
- ಊಟ, ವಸತಿ, ಸ್ಥಳೀಯ ಸಾರಿಗೆ ಮತ್ತು ದರ್ಶನ ವ್ಯವಸ್ಥೆ
- ಯಾತ್ರಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ವೈದ್ಯಕೀಯ ಸೇವೆ
- ರೈಲಿನಲ್ಲಿ ಡಾಕ್ಟರ್, ನರ್ಸ್​ಗಳ ವ್ಯವಸ್ಥೆ ಮಾಡಲಾಗಿದೆ
ಇದನ್ನೂ ಓದಿ:ಕರ್ನಾಟಕದ ಈ ಜಿಲ್ಲೆಯಲ್ಲಿ ಭಾರೀ ಚಳಿ; ರೆಡ್ ಅಲರ್ಟ್ ಘೋಷಣೆ, ಜನ ಗಾಬರಿ!
ದ್ವಾರಕನಾಥಕ್ಕೆ ಪ್ರಯಾಣಿಸೋರಿಗೆ ಟ್ರೈನ್ ಹತ್ತುವ ಮತ್ತು ಇಳಿಯುವ ಸ್ಥಳಗಳು ಹೀಗಿವೆ. ಬೆಂಗಳೂರು ಸರ್.ಎಂ.ವಿಶ್ವೇಶ್ವರಯ್ಯ ರೈಲು ನಿಲ್ದಾಣ. ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹಾವೇರಿ, ಬೆಳಗಾವಿ. ಈ ರೈಲು ಜನವರಿ 6 ರಂದು ಹೊರಟು ಜನವರಿ 13ಕ್ಕೆ ವಾಪಸ್ ಆಗಲಿದೆ. ಪುರಿಜಗನ್ನಾಥ ದರ್ಶನಕ್ಕೆ ಹೊರಡುವ ಟ್ರೈನ್ ಫೆಬ್ರವರಿ 2 ರಂದು ಹೊರಟು ಫೆಬ್ರವರಿ 10 ರಂದು ವಾಪಸ್ ಆಗಲಿದೆ.
ರೂಟ್ ಮ್ಯಾಪ್ ಹೇಗಿದೆ..?
- ದಕ್ಷಿಣ ಯಾತ್ರಿಗಳು ಹತ್ತುವ ಮತ್ತು ಇಳಿಯುವ ಸ್ಥಳಗಳು
- ಬೆಂಗಳೂರು ಸರ್.ಎಂ.ವಿಶ್ವೇಶ್ವರಯ್ಯ ರೈಲ್ವೆ ನಿಲ್ದಾಣ
- ಬೆಳಗಾವಿ, ಹುಬ್ಬಳ್ಳಿ, ಹಾವೇರಿ, ದಾವಣಗೆರೆ, ಬೀರೂರು, ತುಮಕೂರು
- ಹೊರಡುವ ದಿನಾಂಕ: 25-1-2025, ವಾಪಸ್ ಆಗೋದು 30-1-2025
ಅಷ್ಟು ಮಾತ್ರವಲ್ಲದೇ ವರ್ಷದಲ್ಲಿ 1200 ಅರ್ಚಕರು ಹಾಗೂ 1200 ಅರ್ಚಕ ಕುಟುಂಬದ ಒಬ್ಬ ಸದಸ್ಯರು ಸೇರಿ 2400 ಜನರನ್ನು ಉಚಿತವಾಗಿ ಕರೆದುಕೊಂಡು ಹೋಗಲಾಗುತ್ತದೆ.
ಇದನ್ನೂ ಓದಿ:KKR ನಾಯಕತ್ವಕ್ಕಾಗಿ ಅಯ್ಯರ್, ರಹಾನೆ ಮಧ್ಯೆ ಫೈಟ್; ಕ್ಲೈಮ್ಯಾಕ್ಸ್ ತಲುಪಿದ ಜಟಾಪಟಿ..!​
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us