Advertisment

ಮುಡಾಗೆ ಮೇಜರ್​ ಸರ್ಜರಿ ಮಾಡಲು ನಿರ್ಧಾರ; ಇನ್ಮುಂದೆ BDA ಮಾದರಿಯಲ್ಲೇ ಮೈಸೂರು ಅಭಿವೃದ್ಧಿ ಪ್ರಾಧಿಕಾರ..!

author-image
Veena Gangani
Updated On
ಮುಡಾಗೆ ಮೇಜರ್​ ಸರ್ಜರಿ ಮಾಡಲು ನಿರ್ಧಾರ; ಇನ್ಮುಂದೆ BDA ಮಾದರಿಯಲ್ಲೇ ಮೈಸೂರು ಅಭಿವೃದ್ಧಿ ಪ್ರಾಧಿಕಾರ..!
Advertisment
  • ಸೈಟ್​ ಗೋಲ್ಮಾಲ್​ ಬೆನ್ನಲ್ಲೇ ಮುಡಾಗೆ ಸರ್ಕಾರ ಸರ್ಜರಿ
  • ಮುಡಾಗೆ ಪ್ರತ್ಯೇಕ ಕಾಯ್ದೆ ರಚನೆಗೆ ಸಚಿವ ಸಂಪುಟ ಅಸ್ತು
  • BDA ಮಾದರಿಯಲ್ಲಿ ಮುಡಾ ಪ್ರತ್ಯೇಕ ಕಾಯ್ದೆ ತರಲು ಸಿದ್ಧತೆ

ಮುಡಾ ವಿವಾದಗಳು ಒಂದಾ ಎರಡಾ? ಸ್ವತಃ ಸಿಎಂ ಕಟಕಟೆಯಲ್ಲಿ ನಿಂತು ಬಂದಾಗಿದೆ. ಈ ಮಧ್ಯೆ ಮುಡಾಗೆ ಹೊಸ ಮೂಡ ಬರಲಿದೆ. ಪ್ರತ್ಯೇಕ ಕಾಯ್ದೆಗೆ ರಚನೆಗೆ ಸರ್ಕಾರ ಮುಂದಾಗಿದ್ದು, ಬೆಳಗಾವಿ ಸುವರ್ಣಸೌಧದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಇನ್ಮುಂದೆ ಬಿಡಿಎ ಮಾದರಿಯಲ್ಲೇ ಮುಡಾಗೆ ಕಾರ್ಯನಿರ್ವಹಿಸಲಿದೆ.

Advertisment

ಇದನ್ನೂ ಓದಿ: ಮೆಹಂದಿ ಮಾಸುವ ಮುನ್ನವೇ ಶೂಟಿಂಗ್​ ಸೆಟ್​ಗೆ ಬಂದ ಚಿನ್ನುಮರಿ ಜಾಹ್ನವಿ; ಫ್ಯಾನ್ಸ್​ ಫುಲ್​ ಖುಷ್

ಸಿಎಂ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ ಸೇರಿದಂತೆ ಈಗಾಗಲೇ ಹಲವರನ್ನು ಲೋಕಾಯುಕ್ತ ಪೊಲೀಸರು ತನಿಖೆಗೆ ಒಳಪಡಿಸಿದ್ದಾರೆ. ಇದೀಗ ಮೂಡಾ ವಿವಾದದ ಬೆನ್ನಲ್ಲೇ ಪ್ರತ್ಯೇಕ ಕಾಯ್ದೆ ತರಲು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಮುಡಾ ಪ್ರತ್ಯೇಕ ಕಾಯ್ದೆಗೆ ಗ್ರೀನ್ ಸಿಗ್ನಲ್ ನೀಡಲಾಗಿದೆ. ಬಿಡಿಎ ಮಾದರಿಯಲ್ಲಿ ಮೈಸೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಪ್ರತ್ಯೇಕ ಕಾಯ್ದೆ ತರಲು ರಾಜ್ಯ ಸರ್ಕಾರ ಪ್ಲಾನ್​​​ ಮಾಡಿದೆ.

publive-image

ಮೂಡಾಗೆ ಪ್ರತ್ಯೇಕ ಕಾಯ್ದೆ ರಚನೆಗೆ ಸಂಪುಟ ಅಸ್ತು ಎಂದಿದೆ. ಈ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ವಿಧೇಯಕ ಮಂಡನೆ ಆಗಲಿದೆ ಮುಂದಿನ ವಾರ ಅಧಿವೇಶನದಲ್ಲಿ ಈ ವಿಧೇಯಕ ಮಂಡನೆ ಆಗುವ ಸಾಧ್ಯತೆ ಇದೆ ಅಂತ ಗೊತ್ತಾಗಿದೆ. ಮೈಸೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಪ್ರತ್ಯೇಕ ಕಾಯ್ದೆ ತರಲು ಸರ್ಕಾರ ನಿರ್ಧಾರ ಮಾಡಿದೆ. ಮುಡಾದಲ್ಲಿ ರಾಜಕಾರಣಿಗಳ ದರ್ಬಾರ್​ಗೆ ಬ್ರೇಕ್​ ಹಾಕಲು ಮುಂದಾಗಿದೆ. ಸರ್ಕಾರ ಬಿಡಿಎ ಮಾದರಿ ಜಪಿಸ್ತಿದೆ.

Advertisment

publive-image

ಮುಡಾಗೆ ಪ್ರತ್ಯೇಕ ಕಾಯ್ದೆ!

ಈವರೆಗೂ ಮುಡಾ ನಗರಾಭಿವೃದ್ಧಿ ಪ್ರಾಧಿಕಾರದ ಅಧೀನದಲ್ಲಿತ್ತು. 1987ರ ಕಾಯ್ದೆ ಅನ್ವಯ ಮುಡಾ ಕಾರ್ಯನಿರ್ವಹಿಸುತ್ತಿದೆ. ಈಗ ಬಿಡಿಎ ಮಾದರಿಯಲ್ಲೇ ಮುಡಾಗೆ ಪ್ರತ್ಯೇಕ ಕಾಯ್ದೆಗೆ ಸರ್ಕಾರ ಮುಂದಾಗಿದೆ. ಹೊಸ ಕಾಯ್ದೆಯಂತೆ ಭೂಸ್ವಾಧೀನ, ಸೈಟ್​ ಹಂಚಿಕೆ ಮತ್ತು ನಕ್ಷೆ ಮಂಜೂರಾತಿ ಮಾಡಲಾಗಿದೆ. ಈ ಮೊದಲು 100ಕ್ಕೂ ಹೆಚ್ಚು ರಾಜಕೀಯ ನಾಯಕರೇ ಮುಡಾ ಸದಸ್ಯರಾಗಿದ್ರು.

ಆದ್ರೆ, ನೂತನ ಕಾಯ್ದೆ ಪ್ರಕಾರ 3 ರಿಂದ 4 ರಾಜಕೀಯ ನಾಯಕರಿಗಷ್ಟೇ ಸದಸ್ಯರಾಗಲು ಅವಕಾಶ ಇರಲಿದೆ. ನೂತನ ಕಾಯ್ದೆ ಪ್ರಕಾರ ಬಹುತೇಕ ಅಧಿಕಾರಿಗಳಿಗೆ ಹೆಚ್ಚು ಅವಕಾಶವಿರಲಿದ್ದು, ಬಿಡಿಎ ಮಾದರಿಯಲ್ಲಿ ಅಧಿಕಾರಿಗಳು ಬೋರ್ಡ್​​​ನಲ್ಲಿ ಕಾರ್ಯನಿರ್ವಹಿಸ್ತಾರೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮಾದರಿಯಲ್ಲೇ ಮುಡಾಕ್ಕೆ ಪ್ರತ್ಯೇಕ ಕಾಯ್ದೆ ರಚಿಸಲು ಸಚಿವ ಸ‌ಂಪುಟ ಅಸ್ತು ಎಂದಿದೆ. ಮುಂದಿನ ವಾರ ಅಧಿವೇಶನದಲ್ಲಿ ವಿಧೇಯಕ ಮಂಡನೆ ಆಗಲಿದೆ. ಈ ಮೂಲಕ ಭೂಚಕ್ರ ಸುತ್ತಿಕೊಂಡ ಸಿದ್ದು, ಹೊಸ ವ್ಯೂಹ ರಚಿಸ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment
Advertisment
Advertisment