newsfirstkannada.com

ಸಾರ್ವಜನಿಕರೇ ಎಚ್ಚರ! ಕರೆಂಟ್​​ ಬಿಲ್​ ಕಟ್ಟಿಲ್ಲ ಎಂದು 53 ಸಾವಿರ ಕನ್ನಾ ಹಾಕಿದ್ರು

Share :

Published July 9, 2023 at 6:16am

    ವಂಚಕ ಬೀಸಿದ್ದ ಬಲೆಗೆ ಸುಲಭವಾಗಿ ಬಿದ್ದ ವೃದ್ಧ ಹಣ ಕಳೆದುಕೊಂಡ

    ಮೊದಲು 1 ರೂಪಾಯಿ ಕಳಿಸಿ, ಬಳಿಕ ಅಕೌಂಟ್​ನಲ್ಲಿನ ಹಣಕ್ಕೆ ಕನ್ನಾ

    ಸೈಬರ್​ ಕಳ್ಳರು ಯಾರೆಂದು ಹುಡುಕುವುದೇ ದೊಡ್ಡ ಕೆಲಸ.. ಹುಷಾರ್

ಗೃಹಜ್ಯೋತಿ.. ಕಾಂಗ್ರೆಸ್​ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ. ಈಗಾಗಲೇ ಕೋಟ್ಯಾಂತರ ಮಂದಿ ಈ ಯೋಜನೆ ಪಡೆಯಲು ಅರ್ಜಿ ಸಲ್ಲಿಸುತ್ತಿದ್ದಾರೆ. ಫ್ರೀ ಸಿಗುತ್ತೆ ಅಂತ ಕೆಲವರು ಲೈಟ್​ ಬಿಲ್​ ಕಟ್ಟದೇ ಹಾಗೇ ಉಳಿಸಿಕೊಂಡಿದ್ದಾರೆ. ಹೀಗೆ ಉಳಿಸಿಕೊಂಡವರನ್ನೇ ಸೈಬರ್​​ ಕ್ರಿಮಿಗಳು ಟಾರ್ಗೆಟ್​ ಮಾಡುತ್ತಿದ್ದಾರೆ.

ನಿಮಗೂ ಬರಬಹುದು ಈ ಕಾಲ್​..!

ಗೃಹ ಜ್ಯೋತಿ ಆರಂಭದ ವೇಳೆಯೇ ಸೈಬರ್ ಕಳ್ಳರ ಕೈಚಳಕ…
ಬೆಸ್ಕಾಂ ಬಿಲ್ ಕಟ್ಟಿಲ್ಲ ಎಂದು ವಂಚನೆಗಿಳಿದ ಸೈಬರ್ ಕಳ್ಳರು…
ಬಿಲ್ ಬಾಕಿ ಇದೆ ಅಂತ ಸಾವಿರಾರು ರೂಪಾಯಿ ದೋಖಾ
ಕಾಡುಗೋಡಿ ನಿವಾಸಿ ನಾರಾಯಣ್ ಪ್ರಸಾದ್​ಗೆ ವಂಚನೆ…

ಸೈಬರ್​ ಕಳ್ಳರು ಕಾಲ್​ ಮಾಡೋದು ಹೇಗೆ..? ವಂಚನೆ ಮಾಡೋದು ಹೇಗೆ ಗೊತ್ತಾ?

ಸೈಬರ್​ ವಂಚಕ : ಹಲೋ

ನಾರಾಯಣ್​ : ಹೇಳಿ.. ಯಾರ್​ ಮಾತಾಡ್ತಿರೋದು?

ಸೈಬರ್​ ವಂಚಕ : ನಾವು ಬೆಸ್ಕಾಂನಿಂದ ಕಾಲ್​ ಮಾಡ್ತಿರೋದು. ನೀವು ಈ ತಿಂಗಳದ್ದು ಇನ್ನೂ ಬಿಲ್​ ಕಟ್ಟಿಲ್ಲ. ಕೂಡಲೇ ಕಟ್ಟಿ ಇಲ್ಲದಿದ್ರೆ ಕನೆಕ್ಷನ್​ ಕಟ್​ ಮಾಡ್ತೀವಿ.

ನಾರಾಯಣ್​ : ಅಯ್ಯೋ ಹಾಗ್ ಮಾಡ್ಬೇಡಿ ಸರ್​. ಫ್ರೀ ಇರುತ್ತೆ ಅಂತ ಕಟ್ಟಿರಲಿಲ್ಲ. ಈಗಲೇ ಹೋಗಿ ಕಟ್ಟಿ ಬರುತ್ತೇನಿ.

ಸೈಬರ್​ ವಂಚಕ : ಆಫೀಸ್​ ತನಕ ಬರೋದೇನ್​ ಬೇಡ. ನಾನೊಂದು ಲಿಂಕ್​​ ಕಳಿಸುತ್ತೇನೆ ಅದರಲ್ಲಿ ಕಟ್ಟಿದರೆ ಆಯಿತು.

ನಾರಾಯಣ್​ : ಸರಿ ಸರ್​

ವಂಚಕ ಬೀಸಿದ್ದ ಬಲೆಗೆ ಬಿದ್ದ ನಾರಾಯಣ್​ ಎಂಬ ವೃದ್ಧ ಆ ಲಿಂಕ್​ ಕ್ಲಿಕ್​ ಮಾಡ್ತಾರೆ. ಅದನ್ನ ಫಾಲೋ ಮಾಡ್ತಾರೆ. ಬಳಿಕ ಬ್ಯಾಂಕ್​ ಡೀಟೇಲ್ಸ್​ ಕೂಡಾ ಹಾಕ್ತಾರೆ. ಮೊದಲಿಗೆ ಒಂದು ರುಪಾಯಿ ಕಳಿಸ್ತಾರೆ. ಆಮೇಲೆ ಹಂತ ಹಂತವಾಗಿ ಬರೋಬ್ಬರಿ 53 ಸಾವಿರ ಹಣ ಕಟ್​ ಆಗುತ್ತೆ. ಹಣ ಕಟ್​ ಆಗ್ತಿದ್ದಂತೆ ಮತ್ತೆ ವಾಪಸ್​​ ಅದೇ ನಂಬರ್​ಗೆ ಕಾಲ್​ ಮಾಡಿದ್ರೆ ಮೊಬೈಲ್​ ಸ್ವಿಚ್​ ಆಫ್​ ಆಗಿರುತ್ತೆ. ಇದ್ರಿಂದ ಅನುಮಾನಗೊಂಡ ನಾರಾಯಣ್​ ಕಾಡುಗೋಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಐಪಿಸಿ ಸೆಕ್ಷನ್​​ 420 ಅಡಿಯಲ್ಲಿ ಕೇಸ್​ ದಾಖಲಿಸಿಕೊಂಡಿರೋ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

ಅದೇನೇ ಇರಲಿ ರಾಜ್ಯದಲ್ಲಿ ಗ್ಯಾರಂಟಿ ಗಲಾಟೆ ಜೋರಾಗುತ್ತಿದೆ. ಇದರ ಮಧ್ಯೆ ಸದ್ದಿಲ್ಲದೇ ಸೈಬರ್​ ಕಳ್ಳರು ಆ್ಯಕ್ಟೀವ್​ ಆಗಿದ್ದಾರೆ. ನಿಮಗೂ ಇಂಥಾ ಕರೆ ಬರಬಹುದು ಎಚ್ಚರ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಾರ್ವಜನಿಕರೇ ಎಚ್ಚರ! ಕರೆಂಟ್​​ ಬಿಲ್​ ಕಟ್ಟಿಲ್ಲ ಎಂದು 53 ಸಾವಿರ ಕನ್ನಾ ಹಾಕಿದ್ರು

https://newsfirstlive.com/wp-content/uploads/2023/07/BNG_SYBER_CRIME.jpg

Load More