newsfirstkannada.com

ರಾಜ್ಯದಲ್ಲಿ ಸುರಿದ ಆಲಿಕಲ್ಲು ಮಳೆ.. ತಂಪು ತಂಪು ಕೂಲ್​ ಕೂಲ್​ ಆದ ಕಾಫಿನಾಡು, ತುಮಕೂರು, ಹಾಸನ

Share :

Published May 8, 2024 at 6:59am

Update May 8, 2024 at 7:02am

  ಕೊನೆಗೂ ಚಿಕ್ಕಮಗಳೂರಿನಲ್ಲಿ ತಂಪೆರೆದ ವರುಣ

  ಕಲ್ಪತರು ನಾಡಿನಲ್ಲಿ ಮೊದಲ ಮಳೆಯ ಸಿಂಚನ

  ಆಂಧ್ರ, ತೆಲಂಗಾಣದಲ್ಲಿ ವರುಣನ ಆರ್ಭಟ.. ಜನರಿಗೆ ಸಂತಸ

ರಾಜ್ಯದಲ್ಲಿ ಕಳೆದ ನಾಲ್ಕೈದು ದಿನಗಳಿಂದ ವರುಣ ಕೃಪೆ ತೋರಿದ್ದಾನೆ. ನೆತ್ತಿ ಸುಡೋ ಬಿಸಿಲಿಗೆ ಹೈರಾಣಾಗಿದ್ದ ಜನರಿಗೆ ಮಳೆರಾಯ ತಂಪೆರೆದಿದ್ದಾನೆ. ಕರುನಾಡಿನ ಜೊತೆಗೆ ನೆರೆಯ ರಾಜ್ಯಗಳಲ್ಲೂ ಮಳೆಯ ಸಿಂಚನವಾಗಿದೆ.

ಮಳೆ..ಹೀಗೆ ಕೆಲ ದಿನಗಳಿಂದ ರಾಜ್ಯದಲ್ಲಿ ಭರ್ಜರಿ ಮಳೆಯ ಅಬ್ಬರ ಶುರುವಾಗಿದೆ. ನಾಲ್ಕೈದು ದಿನಗಳಿಂದ ರಾಜ್ಯದ ನಾನಾ ಕಡೆ ಭರ್ಜರಿ ಮಳೆಯಾಗಿದೆ. ಬಿರುಬಿಸಿಲಿನ ಶಾಖಕ್ಕೆ ಹೈರಾಣಾಗಿದ್ದ ಜನ ಕೊನೆಗೂ ನಿಟ್ಟುಸಿರು ಬಿಟ್ಟಿದ್ದಾರೆ.

ಆಲಿಕಲ್ಲು ಮಳೆಗೆ ಕಾಫಿನಾಡು ಫುಲ್​ ಥಂಡಾ

ಬಿಸಿಲ ಬೇಗೆಯಿಂದ ಕಂಗೆಟ್ಟು ಹೋಗಿದ್ದ ಕಾಫಿನಾಡಿನಲ್ಲಿ ಕೊನೆಗೂ ಮಳೆಯ ಸಿಂಚನವಾಗಿದೆ. ಕಾದ ಕಾವಲಿಯಂತಾಗಿದ್ದ ಕಾಫಿನಾಡಿಗೆ ವರುಣ ದೇವ ಕೊನೆಗೂ ಕರುಣೆ ತೋರಿದ್ದಾನೆ. ಜಿಲ್ಲೆಯ ವಿವಿಧೆಡೆ ನಿನ್ನೆ ಮಧ್ಯಾಹ್ನ ಗುಡುಗು ಸಹಿತ ಭಾರೀ ಮಳೆಯಾಗಿದೆ. ಏಕಾಏಕಿ ಸುರಿದ ಮಳೆಗೆ ಜನರು ಫುಲ್​ ಖುಷ್​​ ಆಗಿದ್ದಾರೆ.

ವರ್ಷದ ಮೊದಲ ಮಳೆಗೆ ರೈತರಲ್ಲಿ ಮಂದಹಾಸ

ಕಲ್ಪತರು ನಾಡು ತುಮಕೂರಿನಲ್ಲಿ ಈ ವರ್ಷದ ಮಳೆಯಾಗಿದೆ. ತಿಪಟೂರು ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ವರುಣ ಅಬ್ಬರಿಸಿದ್ದಾನೆ, ಕಸಬಾ ಹಾಗೂ ಹೋನ್ನವಳ್ಳಿ ಹೋಬಳಿಯ ಗ್ರಾಮಗಳಲ್ಲಿ ಆಲಿಕಲ್ಲು ಸಹಿತ ಧಾರಾಕಾರ ಮಳೆಯಾಗಿದೆ. ಬರದ ಛಾಯೆಯಲ್ಲಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಹಾಸನದಲ್ಲಿ ಗುಡುಗು ಸಹಿತ ಭಾರೀ ಮಳೆ

ಇತ್ತ ಹಾಸನ ಜಿಲ್ಲೆಯ ನಾನಾ ಭಾಗದಲ್ಲಿ ಭರ್ಜರಿ ಮಳೆಯಾಗಿದೆ.. ಹಾಸನ, ಹೊಳೆನರಸೀಪುರ, ಅರಸೀಕೆರೆ ತಾಲೂಕಿನಲ್ಲಿ ವರುಣ ಅಬ್ಬರಿಸಿದ್ದಾನೆ, ಬಿಸಿಲಿನಿಂದ ಕೆಂಗೆಟ್ಟಿದ್ದ ಜನರಿಗೆ ಮಳೆರಾಯ ತಂಪೆರೆದಿದ್ದು, ಆಲಿಕಲ್ಲು ಸಹಿತ ಸುರಿದ ಮಳೆಗೆ ಜನರು ಸಂತಸಗೊಂಡಿದ್ದಾರೆ.

ಆಂಧ್ರ, ತೆಲಂಗಾಣದಲ್ಲಿ ವರುಣನ ಆರ್ಭಟ

ಇನ್ನು, ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ವರುಣ ಆರ್ಭಟಿಸಿದ್ದಾನೆ. ದಾಖಲೆಯ ತಾಪಮಾನದಿಂದ ಕಂಗೆಟ್ಟಿದ್ದ ಆಂಧ್ರದಲ್ಲಿ ಭರ್ಜರಿಯಾಗಿ ಮಳೆ ಸುರಿದಿದೆ. ಸತತ ಎರಡು ಗಂಟೆಗಳ ಸುರಿದ ಮಳೆಗೆ ರಸ್ತೆ ಇಕ್ಕೆಲಗಳು ತುಂಬಿ ಹರಿದಿದ್ದು, ರಸ್ತೆಗಳೆಲ್ಲ ಜಲಾವೃತವಾಗಿದೆ.

ತೆಲಂಗಾಣದ ರಾಜಧಾನಿ ಹೈದರಾಬಾದ್​​ನಲ್ಲೂ ಗುಡುಗು ಸಹಿತ ಭಾರೀ ಮಳೆಯಾಗಿದೆ. ಮಳೆ ಸುರಿದ ನಂತರ ಹೈದರಾಬಾದ್​​ ನಗರದಲ್ಲಿ ರಾಯ್​​​ದುರ್ಗ ರೋಡ್​​ನಲ್ಲಿ ಟ್ರಾಫಿಕ್​ ಜಾಮ್​​​​ ಉಂಟಾಗಿದ್ದು, ಕಿಲೋ ಮೀಟರ್​​ಗಟ್ಟಲೇ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಒಟ್ಟಿನಲ್ಲಿ ಕಾದ ಕೆಂಡದಂತಾಗಿದ್ದ ವಾತವರಣ ವರುಣ ಕೃಪೆಯಿಂದ ತಣ್ಣಗಾಗಿದೆ. ಚಳಿಯ ವಾತವರಣ ಸೃಷ್ಟಿಯಾಗಿದ್ದು, ತಾಪಮಾನವೂ ಇಳಿಕೆಯಾಗಿದೆ.

ರಾಜ್ಯದಲ್ಲಿ ಸುರಿದ ಆಲಿಕಲ್ಲು ಮಳೆ.. ತಂಪು ತಂಪು ಕೂಲ್​ ಕೂಲ್​ ಆದ ಕಾಫಿನಾಡು, ತುಮಕೂರು, ಹಾಸನ

https://newsfirstlive.com/wp-content/uploads/2024/05/Rain-1-1.jpg

Load More