ಓಲಾ, ಉಬರ್​ಗೆ ಬಿಗ್​ ಶಾಕ್.. ಬೈಕ್ ಟ್ಯಾಕ್ಸಿ ಸೇವೆಗೆ ಹೈಕೋರ್ಟ್​ ಬ್ರೇಕ್..!

author-image
Ganesh
Updated On
ಓಲಾ, ಉಬರ್​ಗೆ ಬಿಗ್​ ಶಾಕ್.. ಬೈಕ್ ಟ್ಯಾಕ್ಸಿ ಸೇವೆಗೆ ಹೈಕೋರ್ಟ್​ ಬ್ರೇಕ್..!
Advertisment
  • ಆರು ವಾರಗಳಲ್ಲಿ ಬೈಕ್ ಟ್ಯಾಕ್ಸಿ ನಿರ್ಬಂಧಿಸಲು ಸೂಚನೆ
  • ಸರ್ಕಾರಕ್ಕೆ ಸೂಕ್ತ ಗೈಡ್​ಲೈನ್ಸ್ ನೀಡಲು ನಿರ್ದೇಶನ
  • ಬಿ.ಎಂ.ಶ್ಯಾಮ್​ಪ್ರಸಾದ್ ಅವರಿದ್ದ ಪೀಠ ಆದೇಶ

ಬೆಂಗಳೂರು: ಬೈಕ್ ಟ್ಯಾಕ್ಸಿ ಸೇವೆಗೆ ಕರ್ನಾಟಕ ಹೈಕೋರ್ಟ್ ಬ್ರೇಕ್ ಹಾಕಿದೆ. ಸರ್ಕಾರ ಸೂಕ್ತ ಮಾರ್ಗಸೂಚಿ ಹೊರಡಿಸದ ಹೊರತು ‘ಬೈಕ್ ಟ್ಯಾಕ್ಸಿ’ಗಳಿಗೆ ಅವಕಾಶ ಇಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.

ಮುಂದಿನ 6 ವಾರದೊಳಗೆ ಬೈಕ್ ಟ್ಯಾಕ್ಸಿ ಸೇವೆಯನ್ನು ನಿರ್ಬಂಧಿಸುವಂತೆ ಓಲಾ, ಉಬರ್, ಱಪಿಡೋ ಸಂಸ್ಥೆಗಳಿಗೆ ಹೈಕೋರ್ಟ್ ಗಡುವು ನೀಡಿದೆ. 6 ವಾರಗಳ ನಂತರ ಬೈಕ್ ಟ್ಯಾಕ್ಸಿ ಕಾರ್ಯಾಚರಣೆ ಖಚಿತ‌ಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಕೋರ್ಟ್ ನಿರ್ದೇಶನ ನೀಡಿದೆ.

ಇದನ್ನೂ ಓದಿ: ಆರ್​ಸಿಬಿಗೆ ತವರಿನಲ್ಲಿ ಮುಖಭಂಗ.. ಹೀನಾಯ ಸೋಲಿಗೆ ಕ್ಯಾಪ್ಟನ್ ಪಾಟೀದಾರ್ ಕೊಟ್ಟ ಕಾರಣ ಏನು..?

ಮೋಟಾರ್ ವಾಹನ ಕಾಯ್ದೆ 1988 ಸೆಕ್ಷನ್ 3ಅಡಿಯಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಸರ್ಕಾರ ಸೂಕ್ತ ಮಾರ್ಗಸೂಚಿ ಹೊರಡಿಸಬೇಕು. ಅಲ್ಲಿಯತನಕ ಬೈಕ್ ಟ್ಯಾಕ್ಸಿ ಸೇವೆಗೆ ಅವಕಾಶ ಇಲ್ಲವೆಂದ ಹೈಕೋರ್ಟ್ ಹೇಳಿದೆ. ಬೈಕ್ ಟ್ಯಾಕ್ಸಿ ಸೇವೆ ಮುಂದುವರಿಸುವ ಅನುಮತಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಉಬರ್ ಇಂಡಿಯಾ ಸಿಸ್ಟಮ್ ಪ್ರೈವೆಟ್ ಲಿಮಿಟೆಡ್, ರೊಪ್ಪೆನ್ ಟ್ರಾನ್ಸ್​ಪೊರ್ಟೇಶನ್ ಸರ್ವೀಸಸ್ ಪ್ರೈವೆಟ್ ಲಿಮಿಟೆಡ್, ಎಎನ್​ಐ ಟೆಕ್ನಾಲಜಿಸ್ ಪ್ರೈವೆಟ್ ಲಿಮಿಟೆಡ್ ಕಂಪನಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನ ಹೈಕೋರ್ಟ್​ ನಡೆಸಿತ್ತು. ಇದೀಗ ನ್ಯಾಯಮೂರ್ತಿ ಬಿ.ಎಂ.ಶ್ಯಾಮ್​ಪ್ರಸಾದ್ ಅವರಿದ್ದ ಪೀಠ ತನ್ನ ಆದೇಶವನ್ನು ಪ್ರಕಟಿಸಿದೆ.

ಅರ್ಜಿದಾರರು ಏನು ಹೇಳಿದ್ದರು..?

ಬೈಕ್ ಟ್ಯಾಕ್ಸಿ ಸೇವೆ ಒದಗಿಸುವುದಕ್ಕೆ ಸಂಬಂಧಿಸಿದಂತೆ 2022, ಫೆಬ್ರವರಿ 19 ರಂದು ಸಾರಿಗೆ ಇಲಾಖೆ ಕಾರ್ಯದರ್ಶಿಗೆ ನೀಡಿರುವ ಮನವಿಯನ್ನು ಪರಿಗಣಿಸಲು ಮತ್ತು ಸಾರಿಗೆ ವಾಹನಗಳಾಗಿ ಪರವಾನಗಿಯ ನೋದಣಿ ಕೋರುವ ಮೋಟಾರ್ ಬೈಕ್​ಗಳಿಗೆ ಅನುಮತಿ ನೀಡಲು ಸಾರಿಗೆ ಆಯುಕ್ತರಿಗೆ ನಿರ್ದೇಶಿಸಬೇಕು ಎಂದು ವಾಹನ ಸೇವೆ ಕಂಪನಿಗಳು ಮನವಿ ಮಾಡಿಕೊಂಡಿದ್ದವು.

ಇದನ್ನೂ ಓದಿ: ಆರ್​​ಸಿಬಿ ವಿರುದ್ಧ ಕಣಕ್ಕೆ ಇಳಿಯುತ್ತಿದ್ದಂತೆ ಸಿರಾಜ್​ ಭಾವುಕ.. ಪಂದ್ಯ ಮುಗಿದ ಮೇಲೆ ಹೇಳಿದ್ದೇನು?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment