ಕೊರೊನಾಗೆ ಬೆಂಗಳೂರಲ್ಲಿ ಮೊದಲ ಬಲಿ.. ​ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದೇನು?

author-image
Veena Gangani
Updated On
BREAKING: ರಾಜ್ಯದಲ್ಲಿ 35 JN.1 ಕೊರೊನಾ ಕೇಸ್‌ ಪತ್ತೆ; ಆರೋಗ್ಯ ಸಚಿವ ದಿನೇಶ್ ಗುಂಡೂರಾವ್
Advertisment
  • ಕೋವಿಡ್ ಭೀತಿ ಮಧ್ಯೆಯೇ ಕೆಲವೇ ದಿನಗಳಲ್ಲಿ ಶಾಲೆ ಆರಂಭ
  • ವಯೋ ವೃದ್ಧರಿಗೆ, ಮಕ್ಕಳಲ್ಲಿ ILI ಕೇಸ್ ಇದ್ರೆ ಟೆಸ್ಟ್ ಮಾಡಿಸ್ಬೇಕು!
  • ಸಿಎಂ ಸಿದ್ದರಾಮಯ್ಯನವರ ಜೊತೆ ಒಂದು ಸುತ್ತಿನ ಮಾತುಕತೆ ಆಗಿದೆ

ಬೆಂಗಳೂರು: ದಿನೇ ದಿನೇ ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಬೆಂಗಳೂರಿನಲ್ಲೇ 32 ಕೇಸ್​ಗಳು ದಾಖಲಾಗಿವೆ. ಅಲ್ಲದೇ ರಾಜ್ಯದಲ್ಲಿ ಕೊರೊನಾ ವೈರಸ್​ಗೆ ಮೊದಲ ಬಲಿ ಬೆನ್ನಲ್ಲೇ ಸರ್ಕಾರ ಹೈ ಅಲರ್ಟ್ ಘೋಷಣೆ ಮಾಡಿದೆ.

publive-image

ಈ ಬಗ್ಗೆ ಮಾತಾಡಿದ ಕರ್ನಾಟಕದ ಆರೋಗ್ಯ ಸಚಿವ ಶ್ರೀ ದಿನೇಶ್ ಗುಂಡೂ ರಾವ್, ಈಗಾಗಲೇ ನಾವು ಟೆಸ್ಟ್ ಮಾಡಿದ್ದೇವೆ. ಟೆಸ್ಟಿಂಗ್ ಕಿಟ್ ನಾಳೆ ನಾಡಿದ್ದು ಮುಟ್ಟುತ್ತೆ. ವಿಶೇಷವಾಗಿ SARI ಕೇಸ್ ಕಡ್ಡಾಯ ಟೆಸ್ಟ್ ಮಾಡಬೇಕು. ವಯೋ ವೃದ್ಧರಿಗೆ ಮತ್ತು ಮಕ್ಕಳಲ್ಲಿ ILI ಕೇಸ್ ಇದ್ರೆ ಟೆಸ್ಟ್ ಮಾಡಿಸಬೇಕು. ನಾಳೆ ನಾಡಿದ್ದು ಎಲ್ಲಾ ಆರೋಗ್ಯ ಕೇಂದ್ರಕ್ಕೆ ಟೆಸ್ಟ್ ಕಿಟ್ ರವಾನೆ ಆಗುತ್ತೆ. 4/5 ದಿನ ಪರಿಸ್ಥಿತಿ ಅವಲೋಕಿಸಿ ನಂತರ ಹೇಳ್ತೇವೆ. ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಯುತ್ತಾ ಇರುತ್ತೆ.

publive-image

ಇದನ್ನೂ ಓದಿ:ಎಂಟು ದಿನ ಮುಂಚೆಯೇ ಮುಂಗಾರು ಎಂಟ್ರಿ.. ಕರ್ನಾಟಕಕ್ಕೆ ಮುಂಗಾರಿನ ಅಭಿಷೇಕ ಯಾವಾಗ..?

84 ವರ್ಷದ ವೃದ್ಧರ ಡೆತ್ ಆಗಿದೆ. ಹಾರ್ಟ್ ಸಮಸ್ಯೆ ಇತ್ತು. ಒಂದು ವರ್ಷದಿಂದ ಬೆಡ್ ರಿಡನ್ ಆಗಿದ್ದಾರೆ. ಅವರ ಆಡಿಟ್ ರಿಪೋರ್ಟ್ ಕೇಳಿದ್ದೇವೆ. ಪೂರ್ತಿ ವರದಿ ಬಂದ ಮೇಲೆ ತಿಳಿಸುತ್ತೇವೆ. ನಾವು ಖಂಡಿತ ನಿರ್ಲಕ್ಷ್ಯ ಮಾಡಿಸ್ತಾ ಇಲ್ಲ. ಜನರಿಗೆ ಇಷ್ಟ ಇದ್ರೆ ಲಾಕ್ ಡೌನ್ ಮಾಡ್ತೀವಿ. ವಸ್ತು ಸ್ಥಿತಿ ನೋಡಿ ನಾವ್ ಏನ್ ಮಾಡಬೇಕು ಅಂತ ನಿರ್ಧಾರ ಮಾಡ್ತೇವೆ. ಸದ್ಯ ಓಡಾಡ ಬಾರದು ಅನ್ನೋ ಪರಿಸ್ಥಿತಿ ಇಲ್ಲ. ರಾಷ್ಟ್ರ ಮಟ್ಟದಲ್ಲಿ ಕೇಂದ್ರ ತೀರ್ಮಾನ ಮಾಡಬೇಕು. ಎಲ್ಲಾ ಚಟುವಟಿಕೆ ಮುಕ್ತವಾಗಿ ಮಾಡಬಹುದು. ಸಿಎಂ ಜೊತೆ ಕೂಡ ಒಂದು ಸುತ್ತಿನ ಮಾತುಕತೆ ಆಗಿದೆ. ಸಿಎಂ ಕೂಡ ನಿನ್ನೆ ನನ್ನ ಜೊತೆ ಮಾತಾಡಿದ್ರು. ಯಾವುದೇ ಕ್ರಮ ತೆಗೆದು ಕೊಳ್ಳದಕ್ಕೂ ಹಿಂದೆ ಹಾಕಬೇಡಿ. ಏನೇನ್ ಕ್ರಮ ತೆಗೆದು ಕೊಳ್ಳಬೇಕು ಅಂತ ಹೇಳಿದ್ದಾರೆ. ಕೋವಿಡ್ ಭೀತಿ ಮಧ್ಯೆ ಶಾಲೆ ಆರಂಭ ಆಗೋ ಮೊದಲು ಆರೋಗ್ಯ ಇಲಾಖೆ ಮತ್ತೊಂದು ಸುತ್ತಿನ ಸಭೆ ನಡೆಸುತ್ತೇವೆ. ಶಾಲಾ ಮಕ್ಕಳಿಗೆ ಮುನ್ನೆಚ್ಚರಿಕೆ ಕ್ರಮ ಬಗ್ಗೆ ಸಭೆಯಲ್ಲಿ ತೀರ್ಮಾನ ಮಾಡುತ್ತೇವೆ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಮತ್ತೊಂದು ಸುತ್ತಿನ ಸಭೆ. ಆರೋಗ್ಯ ಇಲಾಖೆಗೆ ಸಿಎಂ ಖಡಕ್ ಸೂಚನೆ ನೀಡಿದ್ದಾರೆ. ಕ್ರಮ ತೆಗೆದು ಕೊಳ್ಳುವಲ್ಲಿ ಹಿಂದೇಟು ಹಾಕದಂತೆ ಸೂಚನೆ ಕೊಟ್ಟಿದ್ದಾರೆ. ಏನೇನ್ ಅಗತ್ಯ ಕ್ರಮ ಬೇಕೋ ತೆಗೆದುಕೊಳ್ಳಿ ಅಂತ ಆರೋಗ್ಯ ಸೂಚನೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment