ಕರ್ನಾಟಕ ಆರೋಗ್ಯ ಟ್ರಸ್ಟ್​​ನಲ್ಲಿ ಹಲವು ಹುದ್ದೆಗಳ ನೇಮಕಾತಿ.. ಅರ್ಜಿ ಆಹ್ವಾನ, ತಕ್ಷಣ ಅಪ್ಲೇ ಮಾಡಿ

author-image
Bheemappa
Updated On
NHAIನಿಂದ ಉದ್ಯೋಗಗಳಿಗೆ ಅರ್ಜಿ ಆಹ್ವಾನ.. ಈ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ
Advertisment
  • ಈ ಉದ್ಯೋಗಗಳಿಗೆ ನೀವು ಕೂಡ ಅರ್ಜಿ ಸಲ್ಲಿಕೆ ಮಾಡಬಹುದು
  • ಕರ್ನಾಟಕದಲ್ಲಿ ಯಾವ ಜಿಲ್ಲೆಗಳಲ್ಲಿ ಈ ಉದ್ಯೋಗಗಳು ಇವೆ..?
  • ಅಪ್ಲೇ ಮಾಡುವುದು ಆನ್​ಲೈನ್, ಆಫ್​ಲೈನ್ ಎನ್ನುವುದು ಇಲ್ಲಿದೆ

ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್ (ಕೆಹೆಚ್​ಪಿಟಿ) ಇಲ್ಲಿ ಖಾಲಿ ಇರುವಂತ ಹುದ್ದೆಗಳನ್ನು ಆಯ್ಕೆ ಮಾಡಲಾಗುತ್ತಿದೆ. ಆಸಕ್ತಿ ಹೊಂದಿದ ಅಭ್ಯರ್ಥಿಗಳು ಇವುಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು. ಈ ಹುದ್ದೆಗಳಿಗೆ ಸಂಬಂಧಿಸಿದ ಇತರೆ ಮಾಹಿತಿ ಇಲ್ಲಿ ನೀಡಲಾಗಿದೆ.

ಬೇರೆ ಬೇರೆ ವಿಭಾಗಗಳಲ್ಲಿ ವಿವಿಧ ರೀತಿಯ ಉದ್ಯೋಗಗಳನ್ನ ತುಂಬಲಾಗುತ್ತಿದೆ. ಹೀಗಾಗಿ ಅರ್ಜಿ ಸಲ್ಲಿಕೆ ಮಾಡಲು ಬಯಸುವರು ಮಾಹಿತಿಯನ್ನು ಸರಿಯಾಗಿ ಗಮನಿಸಿ ಅರ್ಜಿ ಸಲ್ಲಿಸಬೇಕು. ಇಲ್ಲಿ ನೀಡಿರುವುದು ಮಾತ್ರವಲ್ಲ ಬೇರೆ ಕೆಲಸಗಳು ಇವೆ. ಹೀಗಾಗಿ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್​ಸೈಟ್​ಗೆhttps://www.khpt.org/work-with-us/ ಗೆ ಭೇಟಿ ನೀಡಿ ಎಲ್ಲ ಮಾಹಿತಿ ತಿಳಿದುಕೊಳ್ಳಿ. ಅಲ್ಲದೇ ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕು.

  • ಪೋಸ್ಟ್​ ಹೆಸರು- ನರ್ಸ್​ ಮೆಂಟರ್
    ಕೆಲಸದ ಸ್ಥಳ- ಚಿತ್ರದುರ್ಗ
    ಒಟ್ಟು ಹುದ್ದೆಗಳು- 08
    ಸ್ಯಾಲರಿ- ಕೆಹೆಚ್​ಪಿಟಿ ನಿಯಮದಂತೆ
    ವಿದ್ಯಾರ್ಹತೆ- ಬಿಎಸ್​ಸಿ, ಮೆಸ್​ಸಿ ಇನ್ ನರ್ಸಿಂಗ್
    ಅರ್ಜಿಗೆ ಕೊನೆ ದಿನಾಂಕ- 28 ಅಕ್ಟೋಬರ್ 2024
  • ಹುದ್ದೆಯ ಹೆಸರು- ಸಂವಹನ ತಜ್ಞ
    ಕೇವಲ 1 ಹುದ್ದೆ ಮಾತ್ರ ಇದೆ.
    ಕೆಲಸದ ಸ್ಥಳ- ಬೆಂಗಳೂರು
    ವಿದ್ಯಾರ್ಹತೆ- ಎಂಎನಲ್ಲಿ ಸಂವಹನ ವಿಭಾಗ (Mass Communications)
    ಕೊನೆ ದಿನಾಂಕ- 25 ಅಕ್ಟೋಬರ್ 2024

ಇದನ್ನೂ ಓದಿ: IND vs NZ; ಯುವ ಬ್ಯಾಟರ್ ಸರ್ಫರಾಜ್​ ಖಾನ್ ಮೇಲೆ ಬೆಟ್ಟದಷ್ಟು ನಿರೀಕ್ಷೆ.. ಯಾಕೆ ಗೊತ್ತಾ?

  • ಹುದ್ದೆಯ ಹೆಸರು- ಪ್ರಾಜೆಕ್ಟ್ ಆಫೀಸರ್
    ಕೇವಲ 1 ಹುದ್ದೆ ಮಾತ್ರ ಇದೆ
    ಕೆಲಸದ ಸ್ಥಳ- ಬೆಂಗಳೂರು
    ಕೊನೆ ದಿನಾಂಕ- 28 ಅಕ್ಟೋಬರ್ 2024
    ವಿದ್ಯಾರ್ಹತೆ- ಎಂಬಿಬಿಎಸ್, ಬಿಡಿಎ ಜೊತೆಗೆ ಮಾಸ್ಟರ್ ಡಿಗ್ರಿ
  • ಹುದ್ದೆಯ ಹೆಸರು- ಜಿಲ್ಲಾ ಸಂಯೋಜಕರು
    ಕೇವಲ 1 ಹುದ್ದೆ ಮಾತ್ರ ಇದೆ
    ಕೆಲಸದ ಸ್ಥಳ- ಚಿತ್ರದುರ್ಗ
    ವಿದ್ಯಾರ್ಹತೆ- ಪದವಿ (ಸಮಾಜಶಾಸ್ತ್ರ, ಸೋಷಿಯಲಾಜಿ, ಅಂಥ್ರೊಪೊಲಾಜಿ, ಸೈಕಾಲಾಜಿ)
    ಕೊನೆ ದಿನಾಂಕ- 28 ಅಕ್ಟೋಬರ್ 2024

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment