Advertisment

ಉತ್ತರ ಕರ್ನಾಟಕದಲ್ಲೂ ಭಾರೀ ಮಳೆ.. ಧರೆಗುರುಳಿದ ಮರ.. ಎರಡು ಬೈಕ್​ಗಳು, ಕಾರು ಜಖಂ..!

author-image
Bheemappa
Updated On
ಎಲ್ಲೆಲ್ಲೂ ಮಳೆಯ ಆರ್ಭಟ.. ಶಾಲಾ-ಕಾಲೇಜುಗಳಿಗೆ ಇವತ್ತೂ ರಜೆ.. ಮತ್ತೆ ಎಲ್ಲೆಲ್ಲಿ ಭಾರೀ ಅನಾಹುತ ಆಗಿದೆ..?
Advertisment
  • ಆಲಮಟ್ಟಿ ಜಲಾಶಯದಿಂದ ನಾರಾಯಣಪುರ ಜಲಾಶಯಕ್ಕೆ ನೀರು
  • ದಕ್ಷಿಣ ಕರ್ನಾಟಕದಲ್ಲಿ ಮಳೆ ರೌದ್ರ ನರ್ತನ ಉತ್ತರದಲ್ಲೂ ಮಳೆ ಮಳೆ
  • ಐಕ್ಯ ಕ್ಷೇತ್ರ ಕೂಡಲಸಂಗಮದ ತ್ರಿವೇಣಿ ಸಂಗಮ ಸಂಪೂರ್ಣ ಭರ್ತಿ

ಧಾರಾಕಾರ ಮಳೆಯಿಂದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಅದೆಷ್ಟೋ ಮನೆಗಳು ನೆಲಸಮವಾಗಿವೆ. ಗುಡ್ಡ ಕುಸಿತದಿಂದ ಸಾಕಷ್ಟು ಆಸ್ತಿಪಾಸ್ತಿ ಹಾನಿಯಾಗಿದೆ. ಇದರ ಜೊತೆಗೆ ನದಿಗಳ ಆರ್ಭಟ ಜೋರಾಗಿದ್ದು ನದಿ ಪಾತ್ರದ ಜನರು ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆ. ದಕ್ಷಣ ಕರ್ನಾಟಕದಲ್ಲಿ ಮಳೆಯ ರೌದ್ರ ನರ್ತನ ಈ ಮಟ್ಟಕ್ಕೆ ಇದ್ರೆ, ಇನ್ನೂ ಉತ್ತರ ಕರ್ನಾಟಕಲ್ಲಿ ನನ್ನ ಹವಾ ಇರಲೇ ಬೇಕಲ್ವಾ ಅಂತ ನಿರ್ಧಾರ ಮಾಡಿರೋ ವರುಣದೇವ ತನ್ನ ಅಬ್ಬರವನ್ನ ತೋರಿಸಿದ್ದಾನೆ.

Advertisment

ತ್ರಿವೇಣಿ ಸಂಗಮ ಭರ್ತಿ, ನದಿ ಕಂಡು ಪ್ರವಾಸಿಗರು ಖುಷ್​

ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಮಳೆ ಮುಂದುವರೆದ ಪರಿಣಾಮ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಪರಿಣಾಮ ಬಾಗಲಕೋಟೆಯಲ್ಲಿರುವ ವಿಶ್ವಗುರು ಬಸವಣ್ಣನವರ ಐಕ್ಯ ಕ್ಷೇತ್ರ ಕೂಡಲಸಂಗಮದ ತ್ರಿವೇಣಿ ಸಂಗಮ ಸಂಪೂರ್ಣವಾಗಿ ಭರ್ತಿಯಾಗಿ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದೆ. ಬಾದಿತಗೊಳ್ಳುವ ಪ್ರತಿ ಗ್ರಾಮಕ್ಕೂ ಓರ್ವ ನೋಡಲ್ ಅಧಿಕಾರಿಯನ್ನು ನೇಮಿಸಿ ಪ್ರವಾಹದ ಬಗ್ಗೆ ನಿಗಾ ವಹಿಸುವ ಕಾರ್ಯವಾಗಬೇಕು. ಇದರ ಜೊತೆಗೆ ಅಗತ್ಯ ಮೈಕ್ರೋ ಪ್ಲಾನ್ ಸಹ ಮಾಡಲು ಬಾಗಲಕೋಟೆ ಜಿಲ್ಲಾಧಿಕಾರಿ ಜಾನಕಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಇದನ್ನೂ ಓದಿ: ಲಕ್ಷ ಲಕ್ಷ ರೂಪಾಯಿ ಸಂಬಳ, ಇಂಜಿನಿಯರ್ ಅಂತ ನಂಬಿಸಿ ಮದುವೆ.. ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

publive-image

ಅಪಾಯಮಟ್ಟ ಮೀರಿ ಹರಿಯುತ್ತಿರುವ ಪಾಂಡ್ರಿ ನದಿ

ಇತ್ತ ಬೆಳಗಾವಿ ಭಾಗದಲ್ಲಿಯೂ ಮಳೆ ಅರ್ಭಟ ಮುಂದುವರೆದಿದ್ದು, ಮಲಪ್ರಭಾ ಹಾಗೂ ಘಟಪ್ರಭಾ ನದಿಗಳಿಗೂ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಆಲಮಟ್ಟಿ ಜಲಾಶಯದಲ್ಲಿ 98 ಟಿಎಂಸಿಗಿಂತಲೂ ಅಧಿಕ ಪ್ರಮಾಣದ ನೀರು ಸಂಗ್ರಹವಾಗಿದೆ. ಆಲಮಟ್ಟಿ ಜಲಾಶಯದಿಂದ ನಾರಾಯಣಪುರ ಜಲಾಶಯಕ್ಕೆ ನೀರು ಹರಿಬಿಡಲಾಗುತ್ತಿದೆ. ಪಾಂಡ್ರಿ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದೆ. ಬೆಳಗಾವಿಯ ಸಾತನಾಳಿ ಹಾಗೂ ಮಾಚಾಳಿ ಸಂಪರ್ಕ ಕಲ್ಪಿಸುವ ಸೇತುವೆ ಸಂಪೂರ್ಣ ಜಲಾವೃತವಾಗಿದೆ. ಶಾಲಾ ಮಕ್ಕಳನ್ನು ಕೈಯಲ್ಲಿ ಎತ್ತಿಕೊಂಡು ಪೋಷಕರು ಸೇತುವೆ ದಾಟುತ್ತಿದ್ದು, ಹೊಸ ಸೇತುವೆ ನಿರ್ಮಿಸುವಂತೆ ಕೂಗು ಕೇಳಿ ಬಂದಿದೆ.

Advertisment

ಮರ ಧರೆಗುರುಳಿದ ಹಿನ್ನೆಲೆ ಎರಡು ಬೈಕ್​ಗಳು, ಕಾರು ಜಖಂ

ಇತ್ತ ಬೆಳಗಾವಿಯ ಮಜಗಾಂವ ಗ್ರಾಮದಲ್ಲಿ ಬೃಹತ್​ ಗಾತ್ರದ ಮರವೊಂದು ಧರೆಗುರುಳಿ ಎರಡು ಬೈಕ್ ಹಾಗೂ ಕಾರು ಜಖಂಗೊಂಡಿವೆ. ಗಾಳಿ-ಮಳೆಗೆ ವಿದ್ಯುತ್ ಕಂಬದ ಮೇಲೆಯೇ ಮರ ಬಿದ್ದಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಇದನ್ನೂ ಓದಿ: 1ನೇ ತರಗತಿ ಮಗುವಿನ ಮೇಲೆ ಡ್ಯಾನ್ಸ್​ ಮಾಸ್ಟರ್ ಲೈಂಗಿಕ ದೌರ್ಜನ್ಯ.. ಕೀಚಕನಿಗೆ ಹಿಗ್ಗಾಮುಗ್ಗಾ ಥಳಿತ

publive-image

ಖಾನಾಪುರ ತಾಲೂಕಿನ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ‌

ವ್ಯಾಪಕ ಮಳೆಯ ಹಿನ್ನೆಲೆಯಲ್ಲಿ ಖಾನಾಪುರ ತಾಲೂಕಿನ ಎಲ್ಲ ಅಂಗನವಾಡಿ ಕೇಂದ್ರ, ಪ್ರಾಥಮಿಕ, ಪ್ರೌಢ ಶಾಲೆಗಳು‌ ಹಾಗೂ ಪಿಯು ಕಾಲೇಜುಗಳಿಗೆ ಎರಡು ದಿನಗಳ ಕಾಲ ರಜೆ ಘೋಷಣೆ ಮಾಡಿ ಡಿಸಿ ಮೊಹಮ್ಮದ್ ರೋಷನ್ ಆದೇಶ ಹೊರಡಿಸಿದ್ದಾರೆ.

Advertisment

ಇದನ್ನೂ ಓದಿ: ನಂಬಿದ್ರೆ ನಂಬಿ ಬಿಟ್ಟರೇ ಬಿಡಿ..! ಒಂದು ಜೊತೆ ಹವಾಯಿ ಚಪ್ಪಲಿ ಬೆಲೆ 1 ಲಕ್ಷ ರೂಪಾಯಿ

ರಾಜ್ಯದ ಕೊಪ್ಪಳ, ರಾಯಚೂರು, ಬಳ್ಳಾರಿ, ಹೊಸಪೇಟೆ ಜಿಲ್ಲೆಗಳು ಹಾಗೂ ಕರ್ನಾಟಕ, ಆಂಧ್ರ, ತೆಲಂಗಾಣ ರಾಜ್ಯಗಳ ರೈತರ ಜೀವನಾಡಿ ತುಂಗಾಭದ್ರ ಜಲಾಶಯ ಒಡಲಲ್ಲಿ ಅಪಾರ ಪ್ರಮಾಣದ ನೀರು ಭರ್ತಿಯಾಗಿದೆ. ಸದ್ಯ ಒಳ ಹರಿವು 1 ಲಕ್ಷ ಕ್ಯೂಸೆಕ್ ಇದ್ದು, ಇಂದಿನಿಂದ ಎಡದಂಡೆ ಕಾಲುವೆಗಳಿಗೆ ನೀರು ಹರಿಸುವಂತೆ ಸಚಿವ ಶಿವರಾಜ್ ತಂಗಡಗಿ ಸೂಚಿಸಿದ್ದಾರೆ. ಮಳೆಯ ಅಬ್ಬರದಿಂದ ಜನರ ರಕ್ಷಣೆಗೆ ಅಧಿಕಾರಿಗಳು, ಸರ್ಕಾರ ತಲೆ ಕೆಡಿಸಿಕೊಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment