ಕಮಲ್ ಹಾಸನ್‌ಗೆ ಕರ್ನಾಟಕ ಹೈಕೋರ್ಟ್‌ ಫುಲ್ ಕ್ಲಾಸ್.. ನ್ಯಾ. ನಾಗಪ್ರಸನ್ನ ಹೇಳಿದ್ದೇನು?

author-image
admin
Updated On
ಕಮಲ್ ಹಾಸನ್‌ಗೆ ಕರ್ನಾಟಕ ಹೈಕೋರ್ಟ್‌ ಫುಲ್ ಕ್ಲಾಸ್.. ನ್ಯಾ. ನಾಗಪ್ರಸನ್ನ ಹೇಳಿದ್ದೇನು?
Advertisment
  • ಥಗ್‌ ಲೈಫ್‌ ಸಿನಿಮಾ ಬಿಡುಗಡೆಗೆ ಭದ್ರತೆ ಕೋರಿ ಸಲ್ಲಿಸಿದ್ದ ಅರ್ಜಿ
  • ಅರ್ಜಿ ವಿಚಾರಣೆಯಲ್ಲಿ ನ್ಯಾ. ನಾಗಪ್ರಸನ್ನ ಅವರು ಹೇಳಿದ್ದೇನು?
  • ಈ ಹಿಂದೆ ರಜನಿಕಾಂತ್, ರಾಜಗೋಪಾಲಾಚಾರ್ಯ ಕ್ಷಮೆ ಕೇಳಿದ್ರು!

ಬೆಂಗಳೂರು: ಕನ್ನಡಿಗರಿಗೆ ಸೆಡ್ಡು ಹೊಡೆದು, ಕರ್ನಾಟಕದಲ್ಲಿ ಥಗ್ ಲೈಫ್ ಸಿನಿಮಾ ಬಿಡುಗಡೆ ಮಾಡಲು ಹೈಕೋರ್ಟ್‌ ಮೆಟ್ಟಿಲೇರಿದ್ದ ನಟ ಕಮಲ್ ಹಾಸನ್ ಅವರಿಗೆ ಹಿನ್ನಡೆಯಾಗಿದೆ. ಥಗ್ ಲೈಫ್ ಸಿನಿಮಾ ರಿಲೀಸ್‌ಗೆ ಭದ್ರತೆ ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಮುಂದೂಡಲಾಗಿದೆ.

ಥಗ್‌ ಲೈಫ್‌ ಸಿನಿಮಾ ಬಿಡುಗಡೆಗೆ ಭದ್ರತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಹೈಕೋರ್ಟ್ ನ್ಯಾ. ನಾಗಪ್ರಸನ್ನ ಅವರ ಪೀಠದಲ್ಲಿ ನಡೆದಿದೆ. ಆರಂಭದಲ್ಲಿ ವಾದ ಆಲಿಸಿದ ಹೈಕೋರ್ಟ್‌ ಜಡ್ಜ್‌, ಅವರು ಕ್ಷಮೆ ಕೇಳಿದ್ರಾ? ಕ್ಷಮೆ ಕೇಳಿದ್ರೆ ಮಾತ್ರ ಅರ್ಜಿ ಪರಿಗಣಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ಜಡ್ಜ್‌ ನಾಗಪ್ರಸನ್ನ ಹೇಳಿದ್ದೇನು?
ಕಮಲ್ ಹಾಸನ್ ಅಥವಾ ಬೇರೆ ಯಾರೇ ಇರಲಿ. ರಾಜ್ಯದಲ್ಲಿ ಭಾಷೆ ಪ್ರಮುಖವಾದದ್ದು. ನೆಲ, ಜಲ, ಭಾಷೆ ವಿಚಾರದಲ್ಲಿ ಜನರು ಭಾವನೆ ಹೊಂದಿದ್ದಾರೆ. ಯಾವುದೇ ಭಾಷೆಯಿಂದ ಭಾಷೆ ಹುಟ್ಟಿದೆ ಅಂದ್ರೆ ಹೇಗೆ. ಅವರು ಮೊದಲು ಕ್ಷಮೆ ಕೇಳಲಿ ಆಮೇಲೆ ಅರ್ಜಿ ಪರಿಗಣಿಸುತ್ತೇವೆ.

ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದೆ ಅನ್ನೋದಕ್ಕೆ ಅವರೇನು ಇತಿಹಾಸಕರರೇ? ಈ ಹಿಂದೆ ರಾಜಗೋಪಾಲಾಚಾರ್ಯ ಕೂಡ ಕ್ಷಮೆ ಕೇಳಿದ್ರು. ಇವತ್ತಿನ ಪರಿಸ್ಥಿತಿ ನಿರ್ಮಾಣಕ್ಕೆ ನೀವೇ ಕಾರಣ. ಈ ರೀತಿಯ ಹೇಳಿಕೆ ನೀಡಬಾರದು. ಆದರೆ ಕ್ಷಮೆ ಕೇಳದೇ ಆ್ಯಟಿಟ್ಯೂಡ್ ತೋರಿಸ್ತಾ ಇದ್ದೀರಿ.

publive-image

ಕಮಲ್ ಹಾಸನ್ ಸಾಮಾನ್ಯ ವ್ಯಕ್ತಿ ಅಲ್ಲ. ಪಬ್ಲಿಕ್ ಫಿಗರ್ ಆಗಿದ್ದಾರೆ. ನನಗೆ ಜ್ಞಾನ ಇಲ್ಲದೆ ಈ ರೀತಿ ಮಾತನಾಡಿದೇ ಅಂತ ಕ್ಷಮೆ ಕೇಳಲಿ. ಈಗ ಸಿನಿಮಾ ರಿಲೀಸ್‌ಗೆ ತೊಂದರೆ ಆಗಬಾರದು ಅಂತ ಅರ್ಜಿ ಹಾಕಿದ್ದೀರಾ? ಸಿನಿಮಾಗೆ ಕೋಟ್ಯಾಂತರ ರೂಪಾಯಿ ಹೂಡಿಕೆ ಮಾಡಿದ್ದೀರಾ. ಹೀಗಾಗಿ ಈಗ ಅರ್ಜಿ ಹಾಕಿದ್ದೀರಾ.

ಈ ರೀತಿಯ ಪರಿಸ್ಥಿತಿ ನಿರ್ಮಾಣ ಆಗೋಕೆ ಕಾರಣ ನೀವೇ? ಈ ರೀತಿ ಪರಿಸ್ಥಿತಿ ಆದ ಮೇಲೆ ನೀವೇ ಭದ್ರತೆ ಕೋರುತ್ತೀರಿ. ಭದ್ರತೆ ಕೊಡೋದು ಪೊಲೀಸರ ಕೆಲಸ. ಆದರೆ ಈ ರೀತಿ ಪರಿಸ್ಥಿತಿ ಯಾಕೆ ಬೇಕು? ಸಿನಿಮಾ ಸರಾಗವಾಗಿ ರಿಲೀಸ್ ಆಗಬೇಕು. ಯಾವುದೇ ರೀತಿ ಸಮಸ್ಯೆ ಆಗಬಾರದು ಅಂದರೆ ಎಲ್ಲಾ ರೀತಿಲೂ ಸಹಕರಿಸಬೇಕು.

ಕ್ಷಮೆ ಕೇಳಿದ್ದರೆ ಆಗಿರೋದು. ಕರ್ನಾಟಕ ಜನರಿಗೆ ಭಾಷೆ ಅನ್ನೋದು ಒಂದು ಭಾವನೆ. ಕರ್ನಾಟಕದಿಂದ ತಮಿಳು ಸಿನಿಮಾಗಳಿಗೆ ಕಲೆಕ್ಷನ್ ಇದೆ. ಬ್ಯುಸಿನೆಸ್ ಆಗುತ್ತೆ ಆದರೆ ಈ ರೀತಿಯಿಂದ ಏನಾಗುತ್ತೆ? ಕೋಟ್ಯಾಂತರ ರೂಪಾಯಿ ಹಣ ಹಾಕಿದ್ದೀರಾ ಅಂದ್ರೆ ಕ್ಷಮೆ ಕೇಳಿ.

publive-image

ವಾಕ್ ಸ್ವಾತಂತ್ರ್ಯ ಅಂತ ಜನರ ಭಾವನೆಗೆ ಧಕ್ಕೆ ಆಗೋ ರೀತಿ ಮಾತನಾಡಬಾರದು. ನಿಮಗೆ ಇಷ್ಟವಿಲ್ಲ ಅಂದ ಮೇಲೆ ಕರ್ನಾಟಕದ ಆಸೆ ಬಿಟ್ಟು ಬಿಡಿ. ನಾನೂ ಥಗ್ ಲೈಫ್ ನೋಡಬೇಕು ಅಂತ ಇದ್ದೆ. ಆದರೆ ವಿಡಿಯೋ ನೋಡಿದ ಮೇಲೆ ನನಗೆ ಸಿನಿಮಾ ನೋಡಲು ಇಷ್ಟವಿಲ್ಲ ಎಂದು ಜಡ್ಜ್ ಹೇಳಿದರು.

ಕಮಲ್ ಹಾಸನ್ ಪರ ವಕೀಲ ಧ್ಯಾನ್ ಚಿನ್ನಪ್ಪ ಅವರು ಸಿನಿಮಾ ನೋಡುವುದು ಎಲ್ಲರ ಹಕ್ಕು. ಹೀಗಾಗಿ ಭದ್ರತೆ ಕೇಳುತ್ತಿದ್ದೇವೆ ಎಂದು ಕೋರ್ಟ್‌ ಗಮನಕ್ಕೆ ತಂದರು. ಆಗ ಕೋರ್ಟ್ ಆದೇಶ ಮಾಡುತ್ತದೆ. ಭದ್ರತೆ ಬೇಕಾ? ಬೇಡ್ವ? ಅಂತ ಅದಕ್ಕೂ ಮೊದಲು ಕ್ಷಮೆ ಕೇಳಲಿ. ಕಾಲ ಚಿತ್ರ ರೀಲೀಸ್ ವೇಳೆಯೂ ಇದೇ ರೀತಿ ಆಗಿತ್ತು ಎಂದು ವಕೀಲರು ಹೇಳಿದ್ದಕ್ಕೆ ಜಡ್ಜ್‌ ಆಗ ರಜನಿಕಾಂತ್ ಕ್ಷಮೆ ಕೇಳಿದ್ರು ಎಂದರು.

ಇದನ್ನೂ ಓದಿ: ಕ್ಷಮೆ ಕೇಳೋ ಬದಲು ಕಮಲ್ ಹಾಸನ್ ಮತ್ತೆ ಉದ್ಧಟತನ.. ಕನ್ನಡ ಫಿಲ್ಮ್‌ ಚೇಂಬರ್‌ಗೆ ಪತ್ರ; ಹೇಳಿದ್ದೇನು? 

ಒಂದು ವೇಳೆ ಇತಿಹಾಸಕಾರ ದಾಖಲೆ ಸಮೇತ ಹೇಳಿದ್ರೆ ಚರ್ಚೆ ವಿಷಯ ಆಗುತ್ತಾ ಇತ್ತು. ಹೇಳಿದ ಮಾತನ್ನ ವಾಪಸ್ ಪಡೆಯಲು ಸಾಧ್ಯವಿಲ್ಲ. ಕ್ಷಮೆ ಕೇಳದ ಹೊರತು ಹೇಳಿಕೆ ಹಿಂಪಡೆಯಲು ಸಾಧ್ಯವಿಲ್ಲ. ನಿಮ್ಮ ಬಳಿ ಏನಾದ್ರು ದಾಖಲೆ ಇಟ್ಟುಕೊಂಡು ಚರ್ಚೆ ಮಾಡಿದ್ರೆ ಸರಿ ಅನ್ನಬಹುದು.

ಕ್ಷಮೆ ಕೇಳಿಸುವ ಬಗ್ಗೆ ಒಮ್ಮೆ ಯೋಚನೆ ಮಾಡಿ. ನಾನು ನಂತರ ಅದರ ಆಧಾರದ ಮೇಲೆ ಅರ್ಜಿ ಆದೇಶ ಪ್ರಕಟಿಸುತ್ತೇನೆ ಎಂದ ಜಡ್ಜ್‌ ಕಮಲ್ ಹಾಸನ್ ವಕೀಲರಿಗೆ ಸಲಹೆ ನೀಡಿ ವಿಚಾರಣೆಯನ್ನು ಮಧ್ಯಾಹ್ನ 2.30ಕ್ಕೆ ಮುಂದೂಡಿಕೆ ಮಾಡಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment