/newsfirstlive-kannada/media/post_attachments/wp-content/uploads/2023/12/LOKA_ADALATH.jpg)
ಬೆಂಗಳೂರು: ಡಿಸೆಂಬರ್ 9 ರಂದು ನಡೆದ ರಾಷ್ಟ್ರೀಯ ಲೋಕ ಅದಾಲತ್ ಯಶಸ್ವಿಯಾಗಿದ್ದು, ಒಟ್ಟು 25.1 ಲಕ್ಷ ಪ್ರಕರಣಗಳು ಇತ್ಯರ್ಥವಾಗಿವೆ ಎಂದು KSLSA ಅಧ್ಯಕ್ಷ ನ್ಯಾ. PS ದಿನೇಶ್ ಕುಮಾರ್ ಅವರು ಹೇಳಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ KSLSA ಅಧ್ಯಕ್ಷ ನ್ಯಾ. PS ದಿನೇಶ್ ಕುಮಾರ್ ಅವರು ಮಾತನಾಡಿ, ಈ ಬಾರಿ ರಾಷ್ಟ್ರೀಯ ಲೋಕ ಅದಾಲತ್ಗೆ ಬರೋಬ್ಬರಿ 30 ಲಕ್ಷ ಪ್ರಕರಣಗಳು ಬಂದಿದ್ದವು. ಇವುಗಳಲ್ಲಿ 25.1 ಲಕ್ಷ ಕೇಸ್ಗಳನ್ನ ಪರಿಹರಿಸಲಾಗಿದೆ. ನ್ಯಾಯಾಲಯದಲ್ಲಿದ್ದ 2.2 ಲಕ್ಷ ಪ್ರಕರಣಗಳು, ವ್ಯಾಜ್ಯ ಪೂರ್ವ 22.9 ಲಕ್ಷ ಕೇಸ್ಗಳೆಲ್ಲ ಇತ್ಯರ್ಥ ಕಂಡಿವೆ. ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಲೋಕ ಅದಾಲತ್ಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಎಂದು ಅವರು ತಿಳಿಸಿದರು.
ಲೋಕ ಅದಾಲತ್ 1,022 ಪೀಠಗಳಲ್ಲಿ ನಡೆಯಿತು. 30 ಲಕ್ಷ ಕೇಸ್ಗಳಲ್ಲಿ 25.1 ಲಕ್ಷ ಪ್ರಕರಣಗಳು ಪರಿಹಾರ ಕಂಡಿವೆ. 1,358 ವೈವಾಹಿಕ ಪ್ರಕರಣಗಳು, 4,031 ಮೋಟಾರು ವಾಹನ ಕೇಸ್ಗಳು ಹಾಗೂ ಪ್ರಕರಣಗಳಲ್ಲಿ 1,569 ಕೋಟಿ ಮೊತ್ತದ ಪ್ರಕರಣಗಳು ಸೇರಿದಂತೆ ಈ ಬಾರಿ 262 ದಂಪತಿಗಳನ್ನು ಪುನರ್ಮಿಲನ ಮಾಡಿರುವುದು ಲೋಕಾ ಆದಾಲತ್ನ ಇನ್ನೊಂದು ವಿಶೇಷ ಕಾರ್ಯ ಎನಿಸಿತು ಎಂದು ಹೇಳಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ