ಕರ್ನಾಟಕ ಹೈಕೋರ್ಟ್​ ಇಂದ ಮಹತ್ವದ ಹುದ್ದೆಗಳಿಗೆ ಅರ್ಜಿ ಆಹ್ವಾನ.. ಆಯ್ಕೆ ಪ್ರಕ್ರಿಯೆ ಹೇಗಿದೆ?

author-image
Bheemappa
Updated On
ಯುಜಿಸಿ ಇಂದ ಗುಡ್​ನ್ಯೂಸ್;​ ಸಹಾಯಕ ಪ್ರಾಧ್ಯಾಪಕ ನೇಮಕಾತಿಗೆ ಇನ್ಮುಂದೆ NET ಅಗತ್ಯ ಇಲ್ಲ
Advertisment
  • ಹೈಕೋರ್ಟ್ ಯಾವ ಉದ್ಯೋಗಗಳನ್ನು ಆಹ್ವಾನ ಮಾಡಿದೆ?
  • ಉದ್ಯೋಗ ಹುಡುಕುತ್ತಿರುವ ಆಕಾಂಕ್ಷಿಗಳಿಗೆ ಇದು ಸದಾವಕಾಶ
  • ಈ ಕೆಲಸಗಳಿಗೆ ಅರ್ಜಿ ಶುಲ್ಕ ಎಷ್ಟು ಪಾವತಿ ಮಾಡಬೇಕು..?

ಕರ್ನಾಟಕದ ಹೈಕೋರ್ಟ್ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದೆ. ಫೆಬ್ರುವರಿ 10 ರಂದೇ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಈ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕರ್ನಾಟಕ ಸರ್ಕಾರದಡಿ ಉದ್ಯೋಗ ಹುಡುಕುತ್ತಿರುವ ಆಕಾಂಕ್ಷಿಗಳು ಈ ಸದಾವಕಾಶವನ್ನು ಬಳಸಿಕೊಳ್ಳಬಹುದು.

ಹೈಕೋರ್ಟ್ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಹತೆ, ವೇತನ ಶ್ರೇಣಿ, ವಿದ್ಯಾರ್ಹತೆ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ, ಪ್ರಮುಖ ದಿನಾಂಕದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಹೀಗಾಗಿ ಅರ್ಜಿ ಸಲ್ಲಿಸಬೇಕು ಎನ್ನುವವರು ಈ ಲೇಖನವನ್ನು ಸಂಪೂರ್ಣವಾಗಿ ಓದಿಕೊಂಡು ಆನ್​ಲೈನ್​ ಮೂಲಕ ಅಪ್ಲೇ ಮಾಡಬಹುದು.

ಇದನ್ನೂ ಓದಿ:ಕರ್ನಾಟಕದ ಅಂಚೆ ಕಚೇರಿಗಳಲ್ಲಿನ 1,135 ಹುದ್ದೆಗಳಿಗೆ ಅರ್ಜಿ ಆಹ್ವಾನ.. SSLC ಪಾಸ್ ಆಗಿದ್ರೆ ಸಾಕು

publive-image

ಉದ್ಯೋಗದ ಹೆಸರು- ಸಿವಿಲ್ ನ್ಯಾಯಾಧೀಶರು ( Civil Judges)

ಒಟ್ಟು ಹುದ್ದೆಗಳು- 158 ಉದ್ಯೋಗಗಳು

ಇದರಲ್ಲಿ 24 ಬ್ಯಾಕ್​ಲಾಗ್ ಹುದ್ದೆಗಳು ಇವೆ

ಮಾಸಿಕ ವೇತನ ಶ್ರೇಣಿ- 77,840 ದಿಂದ 1,36,520 ರೂಪಾಯಿಗಳು

ವಿದ್ಯಾರ್ಹತೆ

ಕಾನೂನು ಪದವಿ ಹಾಗೂ ಕಡ್ಡಾಯವಾಗಿ ವಕೀಲರಾಗಿ ದಾಖಲಾಗಿರಬೇಕು

ವಯಸ್ಸಿನ ಮಿತಿ

40 ವರ್ಷದ ಒಳಗಿನವರಿಗೆ ಅವಕಾಶ ಇದೆ
ಎಲ್ಲ ವರ್ಗಗಳಿಗೆ ವಯೋಮಿತಿ ಸಡಿಲಿಕೆ ಇದೆ

ಅರ್ಜಿ ಶುಲ್ಕ ಎಷ್ಟು ಇರುತ್ತದೆ?

ಎಸ್​ಸಿ. ಎಸ್​​ಟಿ, ಪ್ರ-1, ವಿಶೇಷ ಚೇತನರು- 500 ರೂಪಾಯಿ
ಜನರಲ್, ಒಬಿಸಿ, ಇತರೆ ಅಭ್ಯರ್ಥಿಗಳು- 1,000 ರೂಪಾಯಿ

publive-image

ಮುಖ್ಯ ಪರೀಕ್ಷೆಯ ಶುಲ್ಕ ಈ ರೀತಿ ಇದೆ

ಎಸ್​ಸಿ. ಎಸ್​​ಟಿ, ಪ್ರ-1, ವಿಶೇಷ ಚೇತನರು- 750 ರೂಪಾಯಿ
ಜನರಲ್, ಒಬಿಸಿ, ಇತರೆ ಅಭ್ಯರ್ಥಿಗಳು- 1,500 ರೂಪಾಯಿ
ಈ ಎಲ್ಲ ಪಾವತಿಯನ್ನು ಆನ್​ಲೈನ್​ ಮೂಲಕ ಪಾವತಿಸಿ

ಆಯ್ಕೆ ಪ್ರಕ್ರಿಯೆ:

  • ಪೂರ್ವಭಾವಿ ಪರೀಕ್ಷೆ
  • ಮುಖ್ಯ ಪರೀಕ್ಷೆ
  • ಮೌಖಿಕ ಸಂವಹನ (Viva-Voce)
  • ಕಂಪ್ಯೂಟರ್ ಪರೀಕ್ಷೆ

ಅತಿ ಮುಖ್ಯ ದಿನಾಂಕ
ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ- 12 ಮಾರ್ಚ್​ 2025

ಸಂಪೂರ್ಣ ಮಾಹಿತಿಗಾಗಿ-https://karnatakajudiciary.kar.nic.in/newwebsite/

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment